ತಮ್ಮದೇ ಹೆಸರಿನಲ್ಲಿ ಹೊಸ ಉದ್ಯಮ ಆರಂಭಿಸಿದ ನಟ ಜಗ್ಗೇಶ್‌; ನವರಸ ನಾಯಕನ ಹೊಸ ಸ್ಟುಡಿಯೋದ ಫೋಟೋ ಝಲಕ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಮ್ಮದೇ ಹೆಸರಿನಲ್ಲಿ ಹೊಸ ಉದ್ಯಮ ಆರಂಭಿಸಿದ ನಟ ಜಗ್ಗೇಶ್‌; ನವರಸ ನಾಯಕನ ಹೊಸ ಸ್ಟುಡಿಯೋದ ಫೋಟೋ ಝಲಕ್

ತಮ್ಮದೇ ಹೆಸರಿನಲ್ಲಿ ಹೊಸ ಉದ್ಯಮ ಆರಂಭಿಸಿದ ನಟ ಜಗ್ಗೇಶ್‌; ನವರಸ ನಾಯಕನ ಹೊಸ ಸ್ಟುಡಿಯೋದ ಫೋಟೋ ಝಲಕ್

  • Jaggesh Studio: ಸ್ಯಾಂಡಲ್‌ವುಡ್‌ ನಟ ನವರಸ ನಾಯಕ ಜಗ್ಗೇಶ್‌ ಇದೀಗ ನಟನೆಯ ಜತೆಗೆ ಹೊಸ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಸುದೀರ್ಘ 40 ವರ್ಷದ ಹಿಂದಿನ ಕನಸೊಂದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೆಂದೇ ಜಗ್ಗೇಶ್‌ ಸ್ಡುಡಿಯೋ ತೆರೆದಿದ್ದಾರೆ. ಆ ಸ್ಡುಡಿಯೋ ಹೇಗಿದೆ ಎಂಬುದಕ್ಕೆ ಇಲ್ಲಿವೆ ನೋಡಿ ಫೋಟೋ ಝಲಕ್‌.

1980ರಲ್ಲಿ ಇಂಡಸ್ಟ್ರೀಗೆ ಕಾಲಿಟ್ಟು, ನಟನಾಗಿ, ನಿರ್ದೇಕನಾಗಿ, ನಿರ್ಮಾಪಕನಾಗಿ ಆಗಿ ಸತತ 40ಕ್ಕೂ ಹೆಚ್ಚು ವರ್ಷಗಳ ಕಾಲ ಇಂಡಸ್ಟ್ರೀಯಲ್ಲಿ ಸೇವೆ ಸಲ್ಲಿಸಿದ ಜಗ್ಗೇಶ್, ಇಂಡಸ್ಟ್ರೀಗಾಗಿ ಏನಾದ್ರೂ ಮಾಡ್ಬೇಕು ಅನ್ನೋ ಹಂಬಲದಿಂದ ಜಗ್ಗೇಶ್ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ.
icon

(1 / 11)

ಈ ಸ್ಡುಡಿಯೋಗೆ ತಮ್ಮದೇ ಜಗ್ಗೇಶ್‌ ಸ್ಡುಡಿಯೋ ಎಂದು ಹೆಸರಿಟ್ಟಿದ್ದಾರೆ.
icon

(2 / 11)

ಈ ಸ್ಡುಡಿಯೋಗೆ ತಮ್ಮದೇ ಜಗ್ಗೇಶ್‌ ಸ್ಡುಡಿಯೋ ಎಂದು ಹೆಸರಿಟ್ಟಿದ್ದಾರೆ.

ಈ ಸ್ಟುಡಿಯೋ ತಮ್ಮ ಮಗ ಯತಿರಾಜ್ ಅವರ ಕನಸು ಕೂಡ ಆಗಿದ್ದು, ಯತಿರಾಜ್ ನಟಿಸಿರುವ ಯಲಾಕುನ್ನಿ ಸಿನಿಮಾದ ಅಷ್ಟು ಕೆಲಸಗಳು ಇದೇ ಸ್ಟುಡಿಯೋದಲ್ಲಿ ಅಚ್ಚುಕ್ಕಟಾಗಿ ಆಗಿದೆ.
icon

(3 / 11)

ಬೆಂಗಳೂರಿನ ಮಲ್ಲೇಶ್ವರದಲ್ಲಿ ಈ ಭವ್ಯ ಸ್ಟುಡಿಯೋ ತಲೆ ಎತ್ತಿದೆ. 
icon

(4 / 11)

ಬೆಂಗಳೂರಿನ ಮಲ್ಲೇಶ್ವರದಲ್ಲಿ ಈ ಭವ್ಯ ಸ್ಟುಡಿಯೋ ತಲೆ ಎತ್ತಿದೆ. 

ಈಗಾಗಲೇ ಒಂದು ಹಿಂದಿ ಸಿನಿಮಾ ಹಾಗೂ ಒಂದು ಮಲಯಾಳಂ ಸಿನಿಮಾದ ಕೆಲಸವೂ ಇದೇ ಸ್ಡುಡಿಯೋದಲ್ಲಿ ಆಗಿದೆ. 
icon

(5 / 11)

ದುಡ್ಡಿಗಾಗಿ ಈ ಸ್ಟುಡಿಯೋ ನಿರ್ಮಾಣ ಮಾಡಲಿಲ್ಲ, ಇಂಡಸ್ಟ್ರೀಗೆ, ಎಲ್ಲಾ ಸಿನಿಮಾಗಳಿಗೂ ಕೈಗೆಟುಕುವ ದರದಲ್ಲಿ ಈ ಮೂಲಕ ಸೇವೆಯಾಗಲಿ ಅನ್ನೋದು ಜಗ್ಗೇಶ್ ಅವರ ಅಭಿಪ್ರಾಯ. 
icon

(6 / 11)

ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ CG ಒಂದು ಬಿಟ್ಟು ಮಿಕ್ಕ ಎಲ್ಲ ಕೆಲಸಗಳು ಜಗ್ಗೇಶ್‌ ಸ್ಡುಡಿಯೋದಲ್ಲಿ ಆಗುತ್ತವೆ.
icon

(7 / 11)

ಈ ಬಗ್ಗೆ ಹೇಳಿಕೊಳ್ಳುವ ಜಗ್ಗೇಶ್‌, ನನ್ನ ಸ್ಟುಡಿಯೋದಲ್ಲಿ ಇರುವ ಎಲ್ಲ ಇಕ್ವಿಪ್ ಮೆಂಟ್ಸ್ ಲೇಟೆಸ್ಟ್. ಹಾಗೆ ಅಮೆರಿಕಾದಿಂದ ತರಿಸಿದ್ದು. ಬೇರೆ ಸ್ಟುಡಿಯೋದವರು ಕೊಡೋ ಕ್ವಾಲಿಟಿಗಿಂತ ಒಳ್ಳೆ ಔಟ್ ಪುಟ್ ಕೊಟ್ಟು, ಬೆಲೆ ಕೂಡಾ ಸ್ವಲ್ಪ ಕಮ್ಮಿ ಇರತ್ತೆ ಎಂದಿದ್ದಾರೆ. 
icon

(8 / 11)

ಈಗಾಗಲೇ ನಮ್ಮಲ್ಲಿ ನಾಲ್ಕೈದು ಫಿಲ್ಮ್ಸ್ ಇವೆ, ಕೆಲ್ಸ ನಡೀತಾ ಇದೆ.‌ ನನ್ನ ಉದ್ಯಮದ ಜನಕ್ಕೆ ನನ್ನ ಸೇವೆ ತಲುಪಬೇಕು ಎಂಬುದು ಜಗ್ಗೇಶ್‌ ಅವರ ಮಾತು.
icon

(9 / 11)

ಜಗ್ಗೇಶ್‌ ಅವರ ಸಹೋದರ ಕೋಮಲ್ ನಿರ್ಮಾಣದ ಯಲಾಕುನ್ನಿ ಚಿತ್ರದ  ಕಂಪ್ಲೀಟ್ ಕೆಲಸ  ಜಗ್ಗೇಶ್ ಸ್ಟುಡಿಯೊಸ್‌ನಲ್ಲೇ ಆಗಿದ್ದು ವಿಶೇಷ. 
icon

(10 / 11)

ಜಗ್ಗೇಶ್‌ ಸ್ಟುಡಿಯೋ ಎಂದು ಜಗ್ಗೇಶ್‌ ಅವರ ಪತ್ನಿ ಪರಿಮಳಾ ಅವರೇ ಹೆಸರು ಸೂಚಿಸಿದ್ದಾರೆ. ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ. 
icon

(11 / 11)

ಇತರ ಗ್ಯಾಲರಿಗಳು