Sylvester daCunha: ಐಕಾನಿಕ್ ಅಮುಲ್ ಬೇಬಿ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ; ಅಮುಲ್ ಗರ್ಲ್ ಪಯಣದ ನೆನಪಿನ ಫೋಟೋಸ್ ಇಲ್ಲಿವೆ
- Sylvester daCunha: ‘ಅಮುಲ್ ಬೇಬಿ’ ಫೋಟೋದೊಂದಿಗೆ 1960ರಲ್ಲಿ ಅಮುಲ್ ಕ್ಲಾಸಿಕ್ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಿದ್ದ ಸಿಲ್ವೆಸ್ಟರ್ ಡಾಕುನ್ಹಾ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗುಜರಾತ್ ಹಾಲು ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಮಾಹಿತಿ ನೀಡಿದ್ದಾರೆ.
- Sylvester daCunha: ‘ಅಮುಲ್ ಬೇಬಿ’ ಫೋಟೋದೊಂದಿಗೆ 1960ರಲ್ಲಿ ಅಮುಲ್ ಕ್ಲಾಸಿಕ್ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಿದ್ದ ಸಿಲ್ವೆಸ್ಟರ್ ಡಾಕುನ್ಹಾ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗುಜರಾತ್ ಹಾಲು ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಮಾಹಿತಿ ನೀಡಿದ್ದಾರೆ.
(1 / 11)
ಜಾಹೀರಾತು ಜಗತ್ತಿನ ದಂತಕಥೆ ಹಾಗೂ ಐಕಾನಿಕ್ 'ಅಮುಲ್ ಗರ್ಲ್" (ಬೇಬಿ) ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ಅವರು ತಮ್ಮ 80ನೇ ವಯಸ್ಸಿನಲ್ಲಿ ಮಂಗಳವಾರ ರಾತ್ರಿ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
(2 / 11)
ಅಮುಲ್ ಎಂದಾಕ್ಷಣ ಮನಸ್ಸಿಗೆ ಥಟ್ಟನೆ ಕಣ್ಮುಂದೆ ಬರುವುದು ಕೆಂಪು ಕೆಂಪು ಚುಕ್ಕಿಗಳಿರುವ ಡ್ರೆಸ್, ತಲೆ ಮೇಲೊಂದು ಸಣ್ಣ ಜುಟ್ಟಿರುವ ಮುದ್ದು ಪುಟಾಣಿಯ ಫೋಟೋ. ಡಕುನ್ಹಾ ಅವರು 1960ರಲ್ಲಿ ಈ ಫೋಟೋದೊಂದಿಗೆ ಅಮುಲ್ ಕ್ಲಾಸಿಕ್ ಮಾರ್ಕೆಟಿಂಗ್ ಆರಂಭಿಸಿದ್ರು.
(3 / 11)
ಅಮುಲ್ ಡೈರಿ ಬ್ರಾಂಡ್ ಇರುವ ಗುಜರಾತ್ ಹಾಲು ಮಾರುಕಟ್ಟೆ ಒಕ್ಕೂಟವು ಈ ವಿಷಯ ತಿಳಿಸಿದೆ. ಇವರು ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗಿಸ್ ಕುರಿಯರ್ ಅವರೊಂದಿಗೆ ಡಕುನ್ಹಾ ಅವರು. ಸೇವೆ ಸಲ್ಲಿಸಿದ್ದರು.
(4 / 11)
ಸಿಲ್ವೆಸ್ಟರ್ ಡಕುನ್ಹಾ ಹೆಚ್ಚು ಪ್ರಸಿದ್ದಿಯಾಗಿದ್ದು, ಅಮುಲ್ ಗರ್ಲ್ ಚಿತ್ರ ರಚನೆಯಿಂದ ಮತ್ತು ಅಟ್ಟರ್ಲಿ ಬಟ್ಟರ್ಲಿ ಡಿಲಿಷಿಯಸ್ ಎಂಬ ಅಡಿ ಬರಹದಿಂದ. ಅದರಲ್ಲೂ ಅಮುಲ್ ಗರ್ಲ್ ಚಿತ್ರದ ಬಾಂಧವ್ಯ ಈಗಲೂ ಡೈರಿ ಉದ್ಯಮದಲ್ಲಿ ಮುಂದುವರೆದಿದೆ. ಕೆಲವು ಜನಪ್ರಿಯ ಅಮುಲ್ ಗರ್ಲ್ ಜಾಹೀರಾತುಗಳನ್ನು ಈ ಮುಂದೆ ನೋಡೋಣ.(Image courtesy: Amul)
(5 / 11)
ಡೊನಾಲ್ಡ್ ಟ್ರಂಪ್‌ಗೆ ನಾಲಗೆ ಉಚ್ಚಾರ ದೋಷ ಇದ್ದದ್ದನ್ನು ಕ್ಯಾರಿಯೇಚರ್ ಚಿತ್ರದ ಮೂಲಕ ತೋರಿಸಿದ್ದಾರೆ. ಟ್ರಂಪ್ ಕಾಫಿ ಮತ್ತು ಟೀಯನ್ನು 'Covfefe ಅಥವಾ Tvea ಎಂದು ಉಚ್ಚಾರ ಮಾಡಿದ್ದನ್ನು ಅಮುಲ್ ಬೇಬಿ ಸ್ಪೆಲ್ ಹೇಳಿಕೊಟ್ಟಿದ್ದರು. 2017ರಲ್ಲಿ ಈ ಚಿತ್ರ ರಚಿಸಲಾಗಿತ್ತು.(Image courtesy: Amul)
(6 / 11)
2018ರ ಜುಲೈನಲ್ಲಿ ನಡೆದ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದರು. ಅದನ್ನೇ ಅಮುಲ್ ಗರ್ಲ್ ಚಿತ್ರದ ಮೂಲಕ ತೋರಿಸಿದ್ದರು ಡಕುನ್ಹಾ.(Image courtesy: Amul)
(7 / 11)
ನೀರಜ್ ಚೋಪ್ರಾಗೆ ಅಮುಲ್ ಗರ್ಲ್ ಸೆಲ್ಯೂಟ್ ಹೊಡೆಯುತ್ತಿರುವ ಚಿತ್ರ. 2021ರ ಆಗಸ್ಟ್ 7ರಂದು ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದರು. ಒಲಿಂಪಿಕ್ ಇತಿಹಾಸದಲ್ಲಿ ಭಾರತಕ್ಕೆ ದಕ್ಕಿದ 2ನೇ ವೈಯಕ್ತಿಕ ಚಿನ್ನ ಇದಾಗಿತ್ತು.(Image courtesy: Amul)
(8 / 11)
2020ರ ಆಗಸ್ಟ್ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಸಂದರ್ಭವನ್ನು ಅಮುಲ್ ಗರ್ಲ್ ಮೂಲಕ ತೋರಿಸಲಾಗಿದೆ.(Image courtesy: Amul)
(9 / 11)
2017ರ ಮೇನಲ್ಲಿ ಮೆಟ್ ಗಾಲಾ ರೆಡ್ ಕಾರ್ಪೆಟ್ ಪ್ರಿಯಾಂಕಾ ಚೋಪ್ರಾ ಅವರು ಹೆಜ್ಜೆ ಹಾಕಿದಾಗ ಆಕೆಯ ಡ್ರೆಸ್ ಎಲ್ಲರನ್ನೂ ಆಕರ್ಷಿಸಿತ್ತು. ಆ ಡ್ರೆಸ್ನಲ್ಲಿ ಅಮುಲ್ ಗರ್ಲ್ ಹೀಗಿದ್ರು ನೋಡಿ.(Image courtesy: Amul)
(10 / 11)
2007ರ ಏಪ್ರಿಲ್ನಲ್ಲಿ ರಿಚರ್ಡ್ ಗ್ಯಾರಿ ಭಾರತಕ್ಕೆ ಬಂದಾಗ ಮತ್ತು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿಲ್ಪಾ ಶೆಟ್ಟಿಯನ್ನು ಚುಂಬಿಸಿದ್ದನ್ನು ಅಮುಲ್ ಗರ್ಲ್ ಮೂಲಕ ತೋರಿಸಲಾಗಿದೆ.(Image courtesy: Amul)
ಇತರ ಗ್ಯಾಲರಿಗಳು