Upcoming Airports: ಶೀಘ್ರದಲ್ಲೇ ಆರಂಭವಾಗಲಿರುವ ಭಾರತದ ಟಾಪ್ 5 ವಿಮಾನ ನಿಲ್ದಾಣಗಳಿವು; ನಮ್ಮ ಶಿವಮೊಗ್ಗದ್ದೂ ಇದೆ
Top 5 upcoming airports in India: ದೇಶೀಯ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಶ್ರಮಿಸುತ್ತಿದೆ. ಮುಂದಿನ 5 ವರ್ಷಗಳಲ್ಲಿ 200 ವಿಮಾನ ನಿಲ್ದಾಣಗಳನ್ನು ಹೊಂದುವ ಗುರಿ ಹೊಂದಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಇದರ ಭಾಗವಾಗಿ ಭಾರತದದಲ್ಲಿ ಶೀಘ್ರದಲ್ಲೇ ಐದು ವಿಮಾನ ನಿಲ್ದಾಣಗಳು ಪ್ರಾರಂಭವಾಗಲಿವೆ.
(1 / 5)
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಜೆವಾರ್, ಉತ್ತರ ಪ್ರದೇಶ: ಇದು ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಯೋಜನೆಯಾಗಿದ್ದು, ಈ ಏರ್ಪೋರ್ಟ್ನಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಹೊರೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಇದರ ಮೊದಲ ಹಂತವು 2024 ರ ವೇಳೆಗೆ ಕಾರ್ಯನಿರ್ವಹಿಸಲಿದೆ. (india.com)
(2 / 5)
ಭೋಗಾಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ವಿಶಾಖಪಟ್ಟಣಂ, ಆಂಧ್ರಪ್ರದೇಶ: ಜಿಎಂಆರ್ ಗ್ರೂಪ್ ಇದನ್ನು ಈ ವರ್ಷದಿಂದ ನಿರ್ಮಿಸುತ್ತಿದ್ದು, 2025 ರ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. (GMR/Twitter)
(3 / 5)
ಶಿವಮೊಗ್ಗ (ಕುವೆಂಪು) ವಿಮಾನ ನಿಲ್ದಾಣ - ಶಿವಮೊಗ್ಗ, ಕರ್ನಾಟಕ: ಫೆಬ್ರವರಿ 27, 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಏರ್ಪೋರ್ಟ್ ಅನ್ನು ಉದ್ಘಾಟಿಸಿದ್ದರು. ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಆಗಸ್ಟ್ 11, 2023 ರಿಂದ ಪ್ರಾರಂಭವಾಗಲಿದೆ. ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಡೆಸಲ್ಪಡುವ ಕರ್ನಾಟಕದ ಮೊದಲ ವಿಮಾನ ನಿಲ್ದಾಣವಾಗಿದೆ. ಇದಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಮುಂದಿನ 2-3 ವರ್ಷಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ನಿರೀಕ್ಷೆಯಿದೆ. (Twitter\MLASudhakar)
(4 / 5)
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಮುಂಬೈ, ಮಹಾರಾಷ್ಟ್ರ: ಈ ಯೋಜನೆಯು ಅಸ್ತಿತ್ವದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಕೆಲಸ ಮಾಡುತ್ತದೆ, ಮುಂಬೈ ವಿಮಾನ ನಿಲ್ದಾಣದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ದೇಶೀಯ, ಅಂತಾರಾಷ್ಟ್ರೀಯ ಮತ್ತು ಕಾರ್ಗೋ ಟರ್ಮಿನಲ್‌ಗಳೊಂದಿಗೆ, ನವಿ ಮುಂಬೈ ಇಂಟರ್ ನ್ಯಾಷನಲ್ ಏರ್ಪೋರ್ಟ್ 2025 ರ ವೇಳೆಗೆ ಮೊದಲ ಹಂತದ ಕಾರ್ಯಾಚರಣೆ ಆರಂಭಿಸಲಿದೆ. (Marathon)
ಇತರ ಗ್ಯಾಲರಿಗಳು