ಆರೆಂಜ್ ಕ್ಯಾಪ್ ರೇಸ್ಗಿಳಿದ ಶತಕ ಸಿಡಿಸಿದ ಸುನಿಲ್ ನರೈನ್-ಜೋಸ್ ಬಟ್ಲರ್; ಇಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್ ಪಟ್ಟಿ
- IPL 2024 Orange Cap-Purple Cap : ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ನಡುವೆ ಪೈಪೋಟಿ ನಡೆಯುತ್ತಿದೆ. ತಲಾ ಶತಕ ಸುನಿಲ್ ನರೇನ್ ಮತ್ತು ಜೋಸ್ ಬಟ್ಲರ್ ಕೂಡ ಆರೆಂಜ್ ಕ್ಯಾಪ್ ರೇಸ್ಗಿಳಿದಿದ್ದರೆ, ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಯಾರ್ಯಾರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬನ್ನಿ ನೋಡೋಣ.
- IPL 2024 Orange Cap-Purple Cap : ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ನಡುವೆ ಪೈಪೋಟಿ ನಡೆಯುತ್ತಿದೆ. ತಲಾ ಶತಕ ಸುನಿಲ್ ನರೇನ್ ಮತ್ತು ಜೋಸ್ ಬಟ್ಲರ್ ಕೂಡ ಆರೆಂಜ್ ಕ್ಯಾಪ್ ರೇಸ್ಗಿಳಿದಿದ್ದರೆ, ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಯಾರ್ಯಾರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬನ್ನಿ ನೋಡೋಣ.
(1 / 12)
ಏಪ್ರಿಲ್ 16ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ ಪರ ಸುನಿಲ್ ನರೈನ್ ಮತ್ತು ಆರ್ಆರ್ ಪರ ಜೋಸ್ ಬಟ್ಲರ್ ಶತಕ ಸಿಡಿಸಿ ಆರೆಂಜ್ ಕ್ಯಾಪ್ ರೇಸ್ಗಿಳಿದಿದ್ದಾರೆ. 2024ರ ಐಪಿಎಲ್ನ ಏಪ್ರಿಲ್ 16ರಂದು ನಡೆದ ಕೋಲ್ಕತ್ತಾ ಮತ್ತು ರಾಜಸ್ಥಾನ್ ಪಂದ್ಯದ ಅಂತ್ಯಕ್ಕೆ ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ನಡುವೆ ಯಾರ ಯಾರ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂಬುದನ್ನು ಈ ಮುಂದೆ ನೋಡೋಣ.
(2 / 12)
ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 2 ಅರ್ಧಶತಕ, 1 ಶತಕ ಸಹಿತ 361 ರನ್ ಗಳಿಸಿದ್ದಾರೆ.
(3 / 12)
ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ 7 ಪಂದ್ಯಗಳಲ್ಲಿ 3 ಹಾಫ್ ಸೆಂಚುರಿ ಸಹಿತ 318 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.
(4 / 12)
ಕೆಕೆಆರ್ನ ಸುನಿಲ್ ನರೈನ್ ರಾಜಸ್ಥಾನ್ ವಿರುದ್ಧ ಶತಕದೊಂದಿಗೆ ಆರೆಂಜ್ ಕ್ಯಾಪ್ ರೇಸ್ನಲ್ಲಿ 3ನೇ ಸ್ಥಾನಕ್ಕೆ ಏರಿದ್ದಾರೆ. ಈವರೆಗೆ 6 ಪಂದ್ಯಗಳಲ್ಲಿ 1 ಶತಕ, 1 ಅರ್ಧಶತಕದ ನೆರವಿನೊಂದಿಗೆ 276 ರನ್ ಗಳಿಸಿದ್ದಾರೆ.
(5 / 12)
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 276 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಂಜು ಮತ್ತು ಸುನಿಲ್ ರನ್ ಒಂದೇ ಆಗಿದ್ದರೂ, ನರೇನ್ ಸ್ಟ್ರೈಕ್ರೇಟ್ ಹೆಚ್ಚಾಗಿದ್ದು, ಸಂಜುಗಿಂತ ಮುಂದಾಗಿದ್ದಾರೆ.
(6 / 12)
ರೋಹಿತ್ ಶರ್ಮಾ ಆರು ಪಂದ್ಯಗಳಿಂದ 261 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದರೆ, ಗುಜರಾತ್ ನಾಯಕ ಶುಭ್ಮನ್ ಗಿಲ್ ಆರು ಪಂದ್ಯಗಳಿಂದ 255 ರನ್ ಗಳಿಸಿ ಆರನೇ ಸ್ಥಾನದಲ್ಲಿದ್ದಾರೆ.
(7 / 12)
ಸನ್ರೈಸರ್ಸ್ ಹೈದರಾಬಾದ್ ಹೆನ್ರಿಕ್ ಕ್ಲಾಸೆನ್ ಆರು ಪಂದ್ಯಗಳಿಂದ 253 ರನ್ಗಳೊಂದಿಗೆ 7ನೇ ಸ್ಥಾನದಲ್ಲಿದ್ದರೆ, ಕೆಕೆಆರ್ ವಿರುದ್ಧ ಶತಕ ಗಳಿಸಿದ ಜೋಸ್ ಬಟ್ಲರ್ ಈಗ 250 ರನ್ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಚೆನ್ನೈನ ಶಿವಂ ದುಬೆ (242 ರನ್) ಒಂಬತ್ತನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ನ ಟ್ರಾವಿಸ್ ಹೆಡ್ (235 ರನ್) ಹತ್ತನೇ ಸ್ಥಾನದಲ್ಲಿದ್ದಾರೆ.
(8 / 12)
ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಆರ್ಆರ್ ಯುಜ್ವೇಂದ್ರ ಚಹಲ್ ಮಂಗಳವಾರ (ಏಪ್ರಿಲ್ 16) ಕೆಕೆಆರ್ ವಿರುದ್ಧ 1 ವಿಕೆಟ್ ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಚಹಲ್ ಈವರೆಗೆ 7 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ.
(9 / 12)
ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ನ ಜಸ್ಪ್ರೀತ್ ಬುಮ್ರಾ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. ಬುಮ್ರಾ ಇದುವರೆಗೆ 6 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.
(10 / 12)
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮುಸ್ತಾಫಿಜುರ್ ರೆಹಮಾನ್ 3ನೇ ಸ್ಥಾನದಲ್ಲಿದ್ದಾರೆ. ಸಿಎಸ್ಕೆ ಸ್ಟಾರ್ ವೇಗಿ 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಬುಮ್ರಾ ಅವರಷ್ಟೇ ವಿಕೆಟ್ಗಳನ್ನು ಪಡೆದಿದ್ದರೂ ಅವರು ಎಕಾನಮಿ ರೇಟ್ನಲ್ಲಿ ಹಿಂದುಳಿದಿದ್ದಾರೆ.
(11 / 12)
ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ 6 ಪಂದ್ಯಗಳಿಂದ 9 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು