ಯೂಟ್ಯೂಬ್‌ನಿಂದ ಡಾ. ಬ್ರೋಗೆ ಪ್ರತಿ ತಿಂಗಳು ಬರೋ ಹಣ ಎಷ್ಟು? ಲೈವ್‌ನಲ್ಲೇ ರಿವೀಲ್‌ ಮಾಡಿದ ಗಗನ್‌ ಶ್ರೀನಿವಾಸ್‌-kannada social media news dr bro aka gagan srinivas reveal his youtube earnings dr bro per month youtube earnings mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯೂಟ್ಯೂಬ್‌ನಿಂದ ಡಾ. ಬ್ರೋಗೆ ಪ್ರತಿ ತಿಂಗಳು ಬರೋ ಹಣ ಎಷ್ಟು? ಲೈವ್‌ನಲ್ಲೇ ರಿವೀಲ್‌ ಮಾಡಿದ ಗಗನ್‌ ಶ್ರೀನಿವಾಸ್‌

ಯೂಟ್ಯೂಬ್‌ನಿಂದ ಡಾ. ಬ್ರೋಗೆ ಪ್ರತಿ ತಿಂಗಳು ಬರೋ ಹಣ ಎಷ್ಟು? ಲೈವ್‌ನಲ್ಲೇ ರಿವೀಲ್‌ ಮಾಡಿದ ಗಗನ್‌ ಶ್ರೀನಿವಾಸ್‌

  • ಕರುನಾಡ ಮಂದಿಗೆ ಕುಳಿತಲ್ಲೇ ಪ್ರಪಂಚ ತೋರಿಸುವ ಡಾ. ಬ್ರೋ, ಈ ವರೆಗೂ ಬರೋಬ್ಬರಿ 20ಕ್ಕೂ ಅಧಿಕ ದೇಶಗಳನ್ನು ಸುತ್ತಾಡಿದ್ದಾರೆ. ಅದನ್ನೇ ಮುಂದುವರಿಸುವುದಾಗಿ ಮೊದಲ ಸಲ ಲೈವ್‌ ಬಂದು ಒಂದಷ್ಟು ಹೊತ್ತು ಎಲ್ಲರ ಜತೆಗೆ ಹರಟಿದ್ದಾರೆ. ಇದೇ ವೇಳೆ ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ ಹೊಂದಿರುವ ಡಾ ಬ್ರೋಗೆ ಯೂಟ್ಯೂಬ್‌ನಿಂದ ಬರುವ ಹಣ ಎಷ್ಟು? ಅದನ್ನೂ ರಿವೀಲ್‌ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ವೇದಿಕೆ ಯೂಟ್ಯೂಬ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಾವಿರಾರು ಕಂಟೆಂಟ್‌ ಕ್ರಿಯೇಟರ್‌ಗಳೂ ಯೂಟ್ಯೂಬ್‌ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. 
icon

(1 / 10)

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ವೇದಿಕೆ ಯೂಟ್ಯೂಬ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಾವಿರಾರು ಕಂಟೆಂಟ್‌ ಕ್ರಿಯೇಟರ್‌ಗಳೂ ಯೂಟ್ಯೂಬ್‌ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. (Instagram\ Dr bro)

ಅದರಲ್ಲೂ ಈಗಾಗಲೇ ತಮ್ಮ ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ಸಬ್‌ಸ್ಕ್ರೈಬರ್ಸ್‌ಗಳನ್ನು ಹೊಂದಿರುವ ಸಾಕಷ್ಟು ಕ್ರಿಯೇಟರ್‌ಗಳು ಕರ್ನಾಟಕದಲ್ಲಿದ್ದಾರೆ. ಆ ಪೈಕಿ ಡಾ. ಬ್ರೋ ಕೂಡ ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. 
icon

(2 / 10)

ಚಿಕ್ಕ ವಯಸ್ಸಿನಲ್ಲಿಯೇ ಗೊತ್ತು ಪರಿಚಯ ಇಲ್ಲದ ದೇಶಗಳನ್ನು ಸುತ್ತಾಡುವ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌, ಈಗಾಗಲೇ 20ಕ್ಕೂ ಅಧಿಕ ದೇಶ ಸುತ್ತಿ ಅಲ್ಲಿನ ಅಚ್ಚರಿಗಳನ್ನು ನೋಡುಗರ ಮುಂದಿಟ್ಟಿದ್ದಾರೆ. 
icon

(3 / 10)

ಸದ್ಯ ಡಾ. ಬ್ರೋ  ತಮ್ಮ ಯೂಟ್ಯೂಬ್‌ನಲ್ಲಿ 2.55 ಮಿಲಿಯನ್‌ ಸಬ್‌ಸ್ಕ್ರೈಬರ್ಸ್‌ ಹೊಂದಿದ್ದಾರೆ. ಇವರ ಪ್ರತಿ ವಿಡಿಯೋಗಳೂ ಮಿಲಿಯನ್‌ಗಟ್ಟಲೇ ವೀಕ್ಷಣೆ ಕಾಣುತ್ತವೆ. ಹೀಗಿರುವಾಗ ಯೂಟ್ಯೂಬ್‌ನಿಂದ ಪ್ರತಿ ತಿಂಗಳು ಡಾ. ಬ್ರೋಗೆ ಬರುವ ಹಣವೆಷ್ಟು?
icon

(4 / 10)

ಡಾ, ಬ್ರೋ ಯೂಟ್ಯೂಬ್‌ ಸಂಪಾದನೆ ಬಗ್ಗೆ ಯೂಟ್ಯೂಬ್‌ನ ಇತರ ಕ್ರಿಯೇಟರ್‌ಗಳು ತಮಗೆ ಅನಿಸಿದ ಅಂದಾಜು ಅಂಕಿ ಅಂಶಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ, ಈ ವರೆಗೂ ಡಾ ಬ್ರೋ ಮಾತ್ರ ತಮ್ಮ ಅಧಿಕೃತ ಯೂಟ್ಯೂಬ್‌ ಸಂಪಾದನೆ ಬಗ್ಗೆ ತುಟಿ ಬಿಚ್ಚಿರಲಿಲ್ಲ.
icon

(5 / 10)

ಇದೀಗ ಸ್ವತಃ ಡಾ. ಬ್ರೋ ಅವರೇ ತಮ್ಮ ಯೂಟ್ಯೂಬ್‌ ಸಂಪಾದನೆ ಲೆಕ್ಕಾಚಾರವನ್ನು ಬಹಿರಂಗಪಡಿಸಿದ್ದಾರೆ. ಹಾಗಾದರೆ, ಡಾ. ಬ್ರೋಗೆ ಯೂಟ್ಯೂಬ್‌ ಪ್ರತಿ ತಿಂಗಳು ಎಷ್ಟು ಹಣ ನೀಡುತ್ತೆ ಎಂಬ ವಿವರ ಮುಂದಿದೆ.
icon

(6 / 10)

ಸದ್ಯದ ವೀವ್ಸ್‌ ಸ್ಕ್ರೀನ್‌ ತೋರಿಸಿದ ಡಾ. ಬ್ರೋ ಒಂದು ತಿಂಗಳಿಗೆ 1ಲಕ್ಷ 80 ಸಾವಿರ (2100 ಡಾಲರ್‌) ಗಳಿಸುತ್ತಿದ್ದಾರೆ. ಗಳಿಕೆಯ ಜತೆಗೆ ವಿದೇಶಕ್ಕೆ ಹೋಗಲು ಖರ್ಚಾಗುವ ಮೊತ್ತ ಎಷ್ಟು ಎಂಬುದನ್ನೂ ಹೇಳಿದ್ದಾರೆ. ಫ್ಲೈಟ್‌ ಚಾರ್ಜ್‌ಗೆ 50 ಸಾವಿರ ಹೋದರೆ, ಆ ದೇಶಕ್ಕೆ ಹೋದಾಗ ಅಲ್ಲಿನ ಖರ್ಚು 60 ಸಾವಿರ ಎಂದಿದ್ದಾರೆ,  
icon

(7 / 10)

ಕೆಲವೊಂದಿಷ್ಟು ಗ್ಯಾಡ್ಜೆಟ್ಸ್‌ಗಳ ಇಎಂಐ ಹೊರತಪಡಿಸಿದರೆ, ಒಂದು ಹತ್ತಿಪ್ಪತ್ತು ಸಾವಿರ ಕೈಗೆ ಬರುತ್ತೆ. ಇದು ಯೂಟ್ಯೂಬ್‌ ಕೊಡುವ ಮೊತ್ತ. ಇದರಾಚೆಗೆ ಆಡ್ಸ್‌ ರೆವೆನ್ಯೂವ್‌ ಬೇರೆ ಬರುತ್ತೆ ಎಂದಿದ್ದಾರೆ ಡಾ. ಬ್ರೋ.
icon

(8 / 10)

ಲೈವ್‌ನಲ್ಲಿ ಡಾ ಬ್ರೋ ಕಾಣಿಸಿಕೊಳ್ಳುತ್ತಿದ್ದಂತೆ, ಈ ಸಲ ಬಿಗ್‌ಬಾಸ್‌ಗೂ ಹೋಗ್ತಿರಾ ಎಂದೂ ಕೆಲವರು ಅವರಿಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೂ ಬ್ರೋ ಉತ್ತರಿಸಿದ್ದಾರೆ. 
icon

(9 / 10)

ಸಂಭಾವನೆ ರಿವೀಲ್‌ ಮಾಡುವುದಕ್ಕೂ ಮುನ್ನ ಬಿಗ್‌ ಬಾಸ್‌ ಬಗ್ಗೆ ಮಾತನಾಡಿದ್ದಾರೆ. ಮೂರು ತಿಂಗಳು ಒಂದು ಮನೆಯಲ್ಲಿ ಇರುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ಅದೇ ಮೂರು ತಿಂಗಳಲ್ಲಿ ಐದು ದೇಶ ನೋಡಬಹುದು ಎಂದಿದ್ದಾರೆ. 
icon

(10 / 10)

ಇತರ ಗ್ಯಾಲರಿಗಳು