16ನೇ ವಯಸ್ಸಿಗೆ ಅವನನ್ನು ನಂಬಿ ಮೋಸ ಹೋದೆ; ಒಬ್ಬಂಟಿಯಾಗಿ ಮಕ್ಕಳನ್ನು ದಡ ಮುಟ್ಟಿಸಿದ್ದೇನೆ; ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುನಿತಾ ಶೆಟ್ಟಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ವೀಕ್ಷಕರಿಗೆ ಭಾಗ್ಯಾ ಅಮ್ಮ ಸುನಂದಾ ಪರಿಚಯವಿರುತ್ತಾರೆ. ಲಕ್ಷ್ಮಿಯನ್ನು ಕಂಡರೆ ಆಗದ, ಮಗಳು ಭಾಗ್ಯಾ ಜೀವನ ಸರಿ ಆಗಲಿ ಎಂದು ಹಾರೈಸುವ ತಾಯಿಯಾಗಿ ಈ ಕಲಾವಿದೆ ನಟಿಸಿದ್ದಾರೆ.
(1 / 14)
ಧಾರಾವಾಹಿಯಲ್ಲಿ ಸುನಂದಾ ಒರಟು ಮಾತಿನಿಂದಲೇ ಫೇಮಸ್. ನಿಜ ಜೀವನದಲ್ಲೂ ಇವರು ಮಾತು ಒರಟು. ಆದರೆ ಮನಸ್ಸು ಬಹಳ ಮೃದು. ಯಾರಿಗೂ ನೋಯಿಸದಂಥ, ಸ್ನೇಹಮಯ ವ್ಯಕ್ತಿತ್ವ. (PC: Sunitaa Shetty Instagram)
(2 / 14)
ಸುನಂದಾ ಅವರ ನಿಜ ಹೆಸರು ಸುನಿತಾ ಶೆಟ್ಟಿ. ಇವರು ಮಂಗಳೂರಿನವರು. ಆದರೆ ಇವರು ಹುಟ್ಟಿ ಬೆಳೆದದ್ದು ಹುಬ್ಬಳ್ಳಿಯಲ್ಲಿ.
(3 / 14)
ಸುನಿತಾ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ವ್ಯಕ್ತಿಯೊಬ್ಬರನ್ನು ಪ್ರೀತಿಸಿ ಮದುವೆ ಆದರು. ಆದರೆ ಮದುವೆ ನಂತರ ಆತನಿಂದ ಮೋಸ ಹೋದರು.
(4 / 14)
ಎಷ್ಟೇ ನೋವಿದ್ದರೂ ನಾನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ, ಏಕೆಂದರೆ ನನಗೆ ಯಾರ ಕನಿಕರ ಬೇಕಿಲ್ಲ. ಇಬ್ಬರೂ ಮಕ್ಕಳನ್ನು ಸಿಂಗಲ್ ಮದರ್ ಆಗಿ ಬೆಳೆಸಿದ್ದೇನೆ ಎಂದು ಸುನಿತಾ ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಇಂಟರ್‌ವ್ಯೂನಲ್ಲಿ ಹೇಳಿಕೊಂಡಿದ್ದಾರೆ.
(5 / 14)
16ನೇ ವಯಸ್ಸಿಗೆ ಆತನನ್ನು ನಂಬಿ ಬಂದೆ. ಆದರೆ ನಂಬಿದವರೇ ನನಗೆ ಮೋಸ ಮಾಡಿದರು. ಅಂದಿನಿಂದ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿ ದಡ ಮುಟ್ಟಿಸಿದ್ದೇನೆ ಎನ್ನುತ್ತಾರೆ ಸುನಿತಾ.
(6 / 14)
ಪತಿ ನನ್ನನ್ನು ಬಿಟ್ಟು ಹೋದರೂ, ಮಕ್ಕಳನ್ನು ಬಹಳ ಕಷ್ಟಪಟ್ಟು ಬೆಳೆಸಿದ್ದೇನೆ, ಆದರೆ ಯಾರ ಬಳಿಯೂ ಸಹಾಯ ಕೇಳಿಲ್ಲ. ಹಾಗೇ ನನಗೆ ನೋವಾಗುವ ಕಡೆ ನಾನು ಒಂದು ಕ್ಷಣವೂ ಇರುವುದಿಲ್ಲ. ನನಗೆ ಅಗೌರವ ತೋರುವವರಿಂದ ದೂರ ಇರುತ್ತೇನೆ ಎನ್ನುತ್ತಾರೆ ಸುನಿತಾ.
(7 / 14)
ಸುನಿತಾ ಶೆಟ್ಟಿ ತಾಯಿ ಕೂಡಾ ನಟಿಯೇ. ಅನೇಕ ಧಾರಾವಾಹಿಗಳು, ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸುನಿತಾ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
(8 / 14)
ಚಿಕ್ಕ ವಯಸ್ಸಿನಲ್ಲೇ ಕಷ್ಟ ಅನುಭವಿಸಿರುವ ಸುನಿತಾಗೆ ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಸಿದೆ. ಸುನಿತಾ ಶೆಟ್ಟಿ ಅನೇಕರಿಗೆ ಸಹಾಯಹಸ್ತ ಚಾಚಿದ್ದಾರೆ. ಇತ್ತೀಚೆಗೆ ಅವರು ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನ ಮಾಡಿದ್ದರು.
(9 / 14)
ಜೀವನದಲ್ಲಿ ಅನೇಕ ಕಹಿ ನೆನಪುಗಳಿವೆ. ಆದರೆ ನನ್ನ ಸ್ನೇಹಿತೆ ತನ್ನ ದುಡ್ಡಿನಲ್ಲಿ ತಾನೇ ಮದುವೆ ಮಾಡಿಕೊಂಡು, ಮದುವೆ ಆದ ಕೂಡಲೇ ಹಸೆಮಣಿಯಿಂದ ಎದ್ದು ಬಂದು ಮದುವೆಯಲ್ಲಿ ಕೆಲಸ ಮಾಡಿದವರಿಗೆ ದುಡ್ಡು ಕೊಡುತ್ತಿದ್ದನ್ನು ನೆನಪಿಸಿಕೊಂಡರೆ ಈಗಲೂ ಬೇಸರವಾಗುತ್ತದೆ. ಯಾವ ಹೆಣ್ಣಿಗೂ ಈ ಪರಿಸ್ಥಿತಿ ಬರದಿರಲಿ ಎಂದು ಹೆಣ್ಣು ಮಕ್ಕಳು ಪಡುವ ಕಷ್ಟ ನೆನೆದು ಬೇಸರ ವ್ಯಕ್ತಪಡಿಸುತ್ತಾರೆ ಸುನಿತಾ.
(10 / 14)
ಸುನಿತಾಗೆ ಇಬ್ಬರು ಮಕ್ಕಳು. ಮಗಳಿಗೆ ಮದುವೆ ಮಾಡಿದ್ದಾರೆ. ಸುಪ್ರಿತಾ ಶೆಟ್ಟಿ, ಪತಿ ಹಾಗೂ ಮಗುವಿನೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.
ಇತರ ಗ್ಯಾಲರಿಗಳು