ಮತ್ತೊಮ್ಮೆ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ-ಆಕಾಶ್‌ ದೀಪ್; ಭಾರತ ಫಾಲೋ-ಆನ್‌ನಿಂದ ಪಾರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮತ್ತೊಮ್ಮೆ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ-ಆಕಾಶ್‌ ದೀಪ್; ಭಾರತ ಫಾಲೋ-ಆನ್‌ನಿಂದ ಪಾರು

ಮತ್ತೊಮ್ಮೆ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ-ಆಕಾಶ್‌ ದೀಪ್; ಭಾರತ ಫಾಲೋ-ಆನ್‌ನಿಂದ ಪಾರು

  • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ಗೆ ಸತತ ಮಳೆ ಅಡ್ಡಿಯಾಗಿದೆ. ಈ ನಡುವೆ ಭಾರತ ತಂಡವು ಫಾಲೊ-ಆನ್‌ಗೆ ಒಳಗಾಗುವ ಭೀತಿಯಲ್ಲಿತ್ತು. ಆದರೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್‌ ದೀಪ್, ಗಬ್ಬಾದಲ್ಲಿ ಭಾರತ ತಂಡವನ್ನು ಸೋಲಿನ ದವಡೆಯಿಂದ  ರಕ್ಷಿಸಿದ್ದಾರೆ.

ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ, ಭಾರತ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಅದರ ನಡುವೆ ಮಳೆ ಕೂಡಾ ಆಗಾಗ ಪಂದ್ಯಕ್ಕೆ ಅಡ್ಡಿಯಾಯ್ತು. ಫಾಲೊ-ಆನ್‌ನಿಂದ ತಪ್ಪಿಸಿಕೊಳ್ಳಲು, ಟೀಮ್‌ ಇಂಡಿಯಾ ತನ್ನ ಹಿನ್ನಡೆಯನ್ನು 200ರನ್‌ಗಳಿಗಿಂತ ಕಡಿಮೆ ಮಾಡಬೇಕಿತ್ತು. ಅದಾಗಲೇ 9 ವಿಕೆಟ್‌ ಕಳೆದುಕೊಂಡಿದ್ದ ತಂಡ ಸೋಲಿನ ದವಡೆಯಲ್ಲಿತ್ತು. ಆದರೆ ಬುಮ್ರಾ ಮತ್ತು ಆಕಾಶ್‌ದೀಪ್‌, 10ನೇ ವಿಕೆಟ್‌ಗೆ ಅಜೇಯ 39 ರನ್‌ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದ್ದಾರೆ,
icon

(1 / 7)

ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ, ಭಾರತ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಅದರ ನಡುವೆ ಮಳೆ ಕೂಡಾ ಆಗಾಗ ಪಂದ್ಯಕ್ಕೆ ಅಡ್ಡಿಯಾಯ್ತು. ಫಾಲೊ-ಆನ್‌ನಿಂದ ತಪ್ಪಿಸಿಕೊಳ್ಳಲು, ಟೀಮ್‌ ಇಂಡಿಯಾ ತನ್ನ ಹಿನ್ನಡೆಯನ್ನು 200ರನ್‌ಗಳಿಗಿಂತ ಕಡಿಮೆ ಮಾಡಬೇಕಿತ್ತು. ಅದಾಗಲೇ 9 ವಿಕೆಟ್‌ ಕಳೆದುಕೊಂಡಿದ್ದ ತಂಡ ಸೋಲಿನ ದವಡೆಯಲ್ಲಿತ್ತು. ಆದರೆ ಬುಮ್ರಾ ಮತ್ತು ಆಕಾಶ್‌ದೀಪ್‌, 10ನೇ ವಿಕೆಟ್‌ಗೆ ಅಜೇಯ 39 ರನ್‌ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದ್ದಾರೆ,(AFP)

ಟೀಮ್‌ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ 84 ರನ್ ಗಳಿಸಿದರು. ಉಳಿದಂತೆ ಆಲ್‌ರೌಂಡರ್ ರವೀಂದ್ರ ಜಡೇಜಾ 77 ರನ್‌ ಗಳಿಸಿದರು. ಇವರು ಔಟಾದ ಬಳಿಕ ತಂಡವು ಫಾಲೊ-ಆನ್‌ ಎದುರಿಸುವ ಸಾಧ್ಯೆತೆ ಇತ್ತು. ಆದರೆ ಬುಮ್ರಾ ಮತ್ತು ಆಕಾಶ್‌ದೀಪ್‌ ಅದಕ್ಕೆ ಅವಕಾಶ ಕೊಡಲಿಲ್ಲ.
icon

(2 / 7)

ಟೀಮ್‌ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ 84 ರನ್ ಗಳಿಸಿದರು. ಉಳಿದಂತೆ ಆಲ್‌ರೌಂಡರ್ ರವೀಂದ್ರ ಜಡೇಜಾ 77 ರನ್‌ ಗಳಿಸಿದರು. ಇವರು ಔಟಾದ ಬಳಿಕ ತಂಡವು ಫಾಲೊ-ಆನ್‌ ಎದುರಿಸುವ ಸಾಧ್ಯೆತೆ ಇತ್ತು. ಆದರೆ ಬುಮ್ರಾ ಮತ್ತು ಆಕಾಶ್‌ದೀಪ್‌ ಅದಕ್ಕೆ ಅವಕಾಶ ಕೊಡಲಿಲ್ಲ.(AP)

ಸ್ವಾರಸ್ಯಕರ ಸಂಗತಿಯೆಂದರೆ, ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬುಮ್ರಾ ಪ್ರತಿಕ್ರಿಯಿಸಿದ್ದರು. ನೀವು ಬ್ಯಾಟರ್‌ ಅಲ್ಲದಿದ್ದರೂ, ಭಾರತದ ಬ್ಯಾಟಿಂಗ್ ಬಗ್ಗೆ ನಿಮ್ಮ ವಿಶ್ಲೇಷಣೆ ಏನು ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಬುಮ್ರಾ, "ನೀವು ನನ್ನ ಬ್ಯಾಟಿಂಗ್ ಕೌಶಲ್ಯವನ್ನು ಪ್ರಶ್ನಿಸುತ್ತಿದ್ದೀರಾ? ಮೊದಲು ನೀವು ಗೂಗಲ್‌ ಮಾಡಿ ನೋಡಿ. ಟೆಸ್ಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಯಾರೆಂದು ನೋಡಿ ಎಂದು ಹೇಳಿದ್ದರು.
icon

(3 / 7)

ಸ್ವಾರಸ್ಯಕರ ಸಂಗತಿಯೆಂದರೆ, ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬುಮ್ರಾ ಪ್ರತಿಕ್ರಿಯಿಸಿದ್ದರು. ನೀವು ಬ್ಯಾಟರ್‌ ಅಲ್ಲದಿದ್ದರೂ, ಭಾರತದ ಬ್ಯಾಟಿಂಗ್ ಬಗ್ಗೆ ನಿಮ್ಮ ವಿಶ್ಲೇಷಣೆ ಏನು ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಬುಮ್ರಾ, "ನೀವು ನನ್ನ ಬ್ಯಾಟಿಂಗ್ ಕೌಶಲ್ಯವನ್ನು ಪ್ರಶ್ನಿಸುತ್ತಿದ್ದೀರಾ? ಮೊದಲು ನೀವು ಗೂಗಲ್‌ ಮಾಡಿ ನೋಡಿ. ಟೆಸ್ಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಯಾರೆಂದು ನೋಡಿ ಎಂದು ಹೇಳಿದ್ದರು.(AFP)

ಭಾರತದ ಫಾಲೋ-ಆನ್ ತಪ್ಪಿಸುವ ಹೋರಾಟದಲ್ಲಿ ಜಸ್ಪ್ರೀತ್ ಬುಮ್ರಾ 10 ರನ್ ಗಳಿಸಿದರು. ಇದರಲ್ಲಿ. ಆದರೆ ಅವರು ತಮ್ಮ ವಿಕೆಟ್‌ ಉಳಿಸಿಕೊಂಡು ಆಡಿದ್ದು ಇಲ್ಲಿ ಮುಖ್ಯ ಅಂಶ. ಮತ್ತೊಂದೆಡೆ, ಆಕಾಶ್‌ ದೀಪ್ ಕೂಡಾ ಹೋರಾಟದ ಇನ್ನಿಂಗ್ಸ್ ಆಡಿದರು. ವಿರಾಟ್ ನೀಡಿದ ಬ್ಯಾಟ್‌ನಿಂದ ಅವರು 31 ಎಸೆತಗಳಲ್ಲಿ 27 ರನ್ ಗಳಿಸಿದರು. ಹೀಗಾಗಿ ಭಾರತ ಫಾಲೋ-ಆನ್‌ನಿಂದ ಬಚಾವಾಯ್ತು.
icon

(4 / 7)

ಭಾರತದ ಫಾಲೋ-ಆನ್ ತಪ್ಪಿಸುವ ಹೋರಾಟದಲ್ಲಿ ಜಸ್ಪ್ರೀತ್ ಬುಮ್ರಾ 10 ರನ್ ಗಳಿಸಿದರು. ಇದರಲ್ಲಿ. ಆದರೆ ಅವರು ತಮ್ಮ ವಿಕೆಟ್‌ ಉಳಿಸಿಕೊಂಡು ಆಡಿದ್ದು ಇಲ್ಲಿ ಮುಖ್ಯ ಅಂಶ. ಮತ್ತೊಂದೆಡೆ, ಆಕಾಶ್‌ ದೀಪ್ ಕೂಡಾ ಹೋರಾಟದ ಇನ್ನಿಂಗ್ಸ್ ಆಡಿದರು. ವಿರಾಟ್ ನೀಡಿದ ಬ್ಯಾಟ್‌ನಿಂದ ಅವರು 31 ಎಸೆತಗಳಲ್ಲಿ 27 ರನ್ ಗಳಿಸಿದರು. ಹೀಗಾಗಿ ಭಾರತ ಫಾಲೋ-ಆನ್‌ನಿಂದ ಬಚಾವಾಯ್ತು.(AFP)

ಪಂದ್ಯದಲ್ಲಿ ಕೆಎಲ್ ರಾಹುಲ್ ಹೊರತುಪಡಿಸಿ ಭಾರತದ ಅಗ್ರ ಕ್ರಮಾಂಕದ ಆರು ಬ್ಯಾಟರ್‌ಗಳು ವಿಫಲವಾದರು. ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದೆ. ಐದನೇ ದಿನ ಭಾರತ ಪಂದ್ಯವನ್ನು ಉಳಿಸಬಹುದೇ ಎಂಬ ಕುತೂಹಲವಿದೆ.
icon

(5 / 7)

ಪಂದ್ಯದಲ್ಲಿ ಕೆಎಲ್ ರಾಹುಲ್ ಹೊರತುಪಡಿಸಿ ಭಾರತದ ಅಗ್ರ ಕ್ರಮಾಂಕದ ಆರು ಬ್ಯಾಟರ್‌ಗಳು ವಿಫಲವಾದರು. ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದೆ. ಐದನೇ ದಿನ ಭಾರತ ಪಂದ್ಯವನ್ನು ಉಳಿಸಬಹುದೇ ಎಂಬ ಕುತೂಹಲವಿದೆ.(AAP Image via REUTERS)

ತಂಡ ಇನ್ನೂ 193 ರನ್‌ಗಳ ಹಿನ್ನಡೆ ಸಾಧಿಸಿದ್ದು, ಕೊನೆಯ ದಿನದಾಟದಲ್ಲಿ ಆಸೀಸ್‌ ಎರಡನೇ ಇನ್ನಿಂಗ್ಸ್‌ ಆಡಲಿದೆ. ಆ ಬಳಿಕ ಭಾರತ ತಂಡವು ತನ್ನ ಮುಂದಿನ ಗುರಿಯನ್ನು ಬೆನ್ನಟ್ಟಬೇಕಿದೆ. ಬಹುತೇಕ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ.
icon

(6 / 7)

ತಂಡ ಇನ್ನೂ 193 ರನ್‌ಗಳ ಹಿನ್ನಡೆ ಸಾಧಿಸಿದ್ದು, ಕೊನೆಯ ದಿನದಾಟದಲ್ಲಿ ಆಸೀಸ್‌ ಎರಡನೇ ಇನ್ನಿಂಗ್ಸ್‌ ಆಡಲಿದೆ. ಆ ಬಳಿಕ ಭಾರತ ತಂಡವು ತನ್ನ ಮುಂದಿನ ಗುರಿಯನ್ನು ಬೆನ್ನಟ್ಟಬೇಕಿದೆ. ಬಹುತೇಕ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ.(AFP)

ಸದ್ಯ ಸರಣಿ ಸಮಬಲಗೊಂಡಿದ್ದು, ಈ ಪಂದ್ಯ ಡ್ರಾ ಆದರೆ ಸರಣಿ ಸಮಬಲದಲ್ಲೇ ಮುಂದುವರೆಯಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಾದರೂ ಭಾರತ ಗೆಲ್ಲಬೇಕಾಗುತ್ತದೆ.
icon

(7 / 7)

ಸದ್ಯ ಸರಣಿ ಸಮಬಲಗೊಂಡಿದ್ದು, ಈ ಪಂದ್ಯ ಡ್ರಾ ಆದರೆ ಸರಣಿ ಸಮಬಲದಲ್ಲೇ ಮುಂದುವರೆಯಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಾದರೂ ಭಾರತ ಗೆಲ್ಲಬೇಕಾಗುತ್ತದೆ.(AFP)


ಇತರ ಗ್ಯಾಲರಿಗಳು