Bigg Boss Season 11 ಪ್ರೋಮೋದಲ್ಲಿನ ಅಸಲಿ ಸತ್ಯ ಬಯಲಾಯ್ತು! ಇವ್ರು ಬರ್ತಾರೆ ಅಂದುಕೊಂಡ್ರೆ, ಇದೀಗ ಬರಲ್ಲ ಅಂತಿದ್ದಾರೆ-kannada television news i am not going to bigg boss kannada season 11 says actress haripriya mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Season 11 ಪ್ರೋಮೋದಲ್ಲಿನ ಅಸಲಿ ಸತ್ಯ ಬಯಲಾಯ್ತು! ಇವ್ರು ಬರ್ತಾರೆ ಅಂದುಕೊಂಡ್ರೆ, ಇದೀಗ ಬರಲ್ಲ ಅಂತಿದ್ದಾರೆ

Bigg Boss Season 11 ಪ್ರೋಮೋದಲ್ಲಿನ ಅಸಲಿ ಸತ್ಯ ಬಯಲಾಯ್ತು! ಇವ್ರು ಬರ್ತಾರೆ ಅಂದುಕೊಂಡ್ರೆ, ಇದೀಗ ಬರಲ್ಲ ಅಂತಿದ್ದಾರೆ

  • Bigg Boss Kannada Season 11: ಇನ್ನೇನು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ ಕೆಲವರ ಫೋಟೋ ಹೊರಬಿದ್ದಿದ್ದವು. ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಪ್ರೋಮೋವನ್ನು ಡಿಕೋಡ್‌ ಮಾಡಿದಾಗ, ಘಟಾನುಘಟಿಗಳ ಫೋಟೋಗಳು ಕಂಡಿದ್ದವು. ಆ ಪೈಕಿ ನಟಿ ಹರಿಪ್ರಿಯಾ ಫೋಟೋ ಕಂಡಿತ್ತು. ಆದ್ರೀಗ, ನಾನು ಬರ್ತಿಲ್ಲ ಎನ್ನುತ್ತಿದ್ದಾರೆ.

ಸೆ. 29ರಿಂದ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಇದಕ್ಕೂ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲು, ಸೆ. 28ರಂದು ಒಂದಷ್ಟು ಸ್ಪರ್ಧಿಗಳ ಹೆಸರು ರಿವೀಲ್‌ ಆಗಲಿದೆ. 
icon

(1 / 6)

ಈ ನಡುವೆ, ಅದಕ್ಕೂ ಮೊದಲು ಈ ಸಲದ ಬಿಗ್‌ಬಾಸ್‌ಗೆ ಸಾಕಷ್ಟು ಘಟಾನುಘಟಿಗಳ ಆಗಮನವಾಗಲಿದೆ ಎಂದೇ ಸುಳಿವು ನೀಡಿತ್ತು ಹೊಸ ಪ್ರೋಮೋ.
icon

(2 / 6)

ಅದರಲ್ಲಿ ಭಾವನಾ ಮೆನನ್‌, ನಭಾ ನಟೇಶ್‌, ಹರಿಪ್ರಿಯಾ, ಕನ್ನಡತಿ ಕಿರಣ್‌ ರಾಜ್‌ ಹೆಸರೂ ಸೇರಿ ಏಳೆಂಟು ಹೆಸರುಗಳಿದ್ದವು. ಈಗ ಅವುಗಳ ಪೈಕಿ ಒಂದು ವಿಕೆಟ್‌ ಪತನವಾಗಿದೆ. 
icon

(3 / 6)

ಅಂದರೆ, ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಈ ಸಲ ಹರಿಪ್ರಿಯಾ ಆಗಮಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಈಗ ಆ ಸುದ್ದಿ ಸುಳ್ಳಾಗಿದೆ. 
icon

(4 / 6)

ನಟಿ ಹರಿಪ್ರಿಯಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಇಲ್ಲಪ್ಪ ಇಲ್ಲ ನನಗೆ ನಾನೇ ಬಾಸು, ನಾನು ನಮ್ಮ ಮನೆ ಬಿಟ್ಟು ಯಾವ ಮನೆಗೂ ಹೋಗ್ತಿಲ್ಲ ಎಂದು ಪೋಸ್ಟ್‌ ಮಾಡಿದ್ದಾರೆ. 
icon

(5 / 6)

ಈ ಮೂಲಕ ಪ್ರೋಮೋದಲ್ಲಿ ಕಂಡಿರುವ ಸ್ಪರ್ಧಿಗಳು ಅಧಿಕೃತವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ವೀಕ್ಷಕರ ತಲೆಗೆ ಹುಳ ಬಿಡುವ ಕೆಲಸವನ್ನು ವಾಹಿನಿ ಮಾಡುತ್ತಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು