Dileep Shetty: ನಟನೆಗಾಗಿ ವಿದೇಶದಿಂದ ಕೆಲಸ ಬಿಟ್ಟು ಬಂದ ದಿಲೀಪ್ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು? ಮಿಸ್ಟರ್ ದುಬೈ ಬಗ್ಗೆ ಮಾಹಿತಿ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಧಾರಾವಾಹಿಯಲ್ಲಿ ವಿಕ್ರಮ್ ಪಾತ್ರ ಮಾಡುತ್ತಿರುವ ದಿಲೀಪ್ ಆರ್ ಶೆಟ್ಟಿ ಅನೇಕ ಹುಡುಗಿಯರ ಮೋಸ್ಟ್ ಫೇವರೆಟ್.
(1 / 12)
ಧಾರಾವಾಹಿಯಲ್ಲಿ ದಿಲೀಪ್ ವಿಕ್ರಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರತಿ ಸೋಮವಾರದಿಂದ ಶನಿವಾರದವರೆಗೂ ರಾತ್ರಿ 9.30ಕ್ಕೆ ಧಾರಾವಾಹಿ ಪ್ರಸಾರವಾಗುತ್ತಿದೆ. (PC: Dileep Shetty Facebook)
(2 / 12)
ದೇವಸ್ಥಾನದಲ್ಲಿ ಕೋಪದಿಂದ ಗೊತ್ತಿಲ್ಲದ ಹುಡುಗಿಗೆ ತಾಳಿ ಕಟ್ಟುವ ವಿಕ್ರಮ್ ಮುಂದೆ ಆಕೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸುತ್ತಾನಾ ಎಂಬ ಕಥೆ ಇರುವ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ.
(3 / 12)
ದಿಲೀಪ್ ಶೆಟ್ಟಿ ಕನ್ನಡ ಕಿರುತೆರೆಯ ಬುರ್ಜ್ ಖಲೀಫ ಎಂದೇ ಹೆಸರಾಗಿದ್ದಾರೆ. ಪ್ರಪಂಚದ ಅತಿ ಎತ್ತರದ ಕಟ್ಟದ ಬುರ್ಜ್ ಖಲೀಫ. ಹಾಗೇ ದಿಲೀಪ್ ಕನ್ನಡ ಕಿರುತೆರೆಯಲ್ಲಿ ಅತಿ ಎತ್ತರ ಇರುವ ನಟ ಆದ್ದರಿಂದ ಅವರಿಗೆ ಹಾಗೆ ಕರೆಯಲಾಗುತ್ತದೆ.
(4 / 12)
ಮಂಗಳೂರು ಮೂಲದ ದಿಲೀಪ್, ಓದಿದ್ದು ಆಳ್ವಾಸ್ ಕಾಲೇಜಿನಲ್ಲಿ, ಸ್ನೇಹಿತರ ಒತ್ತಾಯದಿಂದ ದಿಲೀಪ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.
(5 / 12)
ಓದು ಮುಗಿದ ನಂತರ ದುಬೈನಲ್ಲಿ ಐಟಿ ಕೆಲಸ ಗಿಟ್ಟಿಸಿಕೊಂಡ ದಿಲೀಪ್ ಅಲ್ಲಿಗೆ ಶಿಫ್ಟ್ ಆದರು. ಕೆಲವು ವರ್ಷಗಳ ಕಾಲ ದುಬೈನಲ್ಲೇ ನೆಲೆಸಿದ್ದ ಅವರು ಅಲ್ಲಿ ಅನೇಕ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ ಮಿಸ್ಟರ್ ದುಬೈ ಪಟ್ಟ ಪಡೆದರು.
(6 / 12)
ಕರ್ನಾಟಕಕ್ಕೆ ವಾಪಸ್ ಬಂದು ಏನಾದರೂ ಸಾಧನೆ ಮಾಡಬೇಕೆಂಬುದು ದಿಲೀಪ್ ಆಸೆ ಆಗಿತ್ತು. ಅದೇ ಸಮಯಕ್ಕೆ ವಿದ್ಯಾ ವಿನಾಯಕ ಧಾರಾವಾಹಿಗೆ ಅವರಿಗೆ ಅವಕಾಶ ದೊರೆಯಿತು. ನಟನೆ ಮೇಲಿನ ಪ್ರೀತಿಯಿಂದ ದಿಲೀಪ್ ದುಬೈ ಕೆಲಸಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ವಾಪಸ್ ಆದರು.
(8 / 12)
ಅದೇ ಸಮಯಕ್ಕೆ ಜೀ ಕನ್ನಡದ ತಕಧಿಮಿತಾ ಡ್ಯಾನ್ಸಿಂಗ್ ಶೋನಿಂದ ಅವರಿಗೆ ಆಫರ್ ಬಂದಿದೆ. ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡ ದಿಲೀಪ್ ನಂತರ ಸಾಲು ಸಾಲು ಅವಕಾಶಗಳನ್ನು ಪಡೆದರು.
(9 / 12)
ರಾಬರ್ಟ್ ಹಾಗೂ ಹಿರಣ್ಯ ಸಿನಿಮಾಗಳಲ್ಲಿ ದಿಲೀಪ್ ನಟಿಸಿದ್ದಾರೆ. ಕಸ್ತೂರಿ ನಿವಾಸ ಧಾರಾವಾಹಿ ಕೂಡಾ ಈ ಹ್ಯಾಂಡ್‌ಸಮ್ ಹುಡುಗನಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತು.
(10 / 12)
ತೆಲುಗಿನ ಕೃಷ್ಣ ತುಳಸಿ ಧಾರಾವಾಹಿ ದಿಲೀಪ್‌ಗೆ ಅಲ್ಲಿ ಅಭಿಮಾನಿಗಳನ್ನು ಗಳಿಸಿಕೊಟ್ಟಿತು. ಈ ಧಾರಾವಾಹಿಗಾಗಿ ದಿಲೀಪ್ ಅವರಿಗೆ 2022ನೇ ಸಾಲಿನ ಜೀ ತೆಲುಗು ಕುಟುಂಬಂ ಪ್ರಶಸ್ತಿ ದೊರೆತಿದೆ.
(11 / 12)
ಸದ್ಯಕ್ಕೆ ದಿಲೀಪ್, ನೀನಾದೆ ನಾ ಧಾರಾವಾಹಿಯಲ್ಲಿ ನಾಯಕ ವಿಕ್ರಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಕ್ರಮ್ ಪಾತ್ರ ಕಿರುತೆರೆಪ್ರಿಯರಿಗೆ ಇಷ್ಟವಾಗಿದೆ.
ಇತರ ಗ್ಯಾಲರಿಗಳು