Karnataka Exit Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಅಧಿಕ ಸ್ಥಾನ: ಗ್ಯಾರಂಟಿಗಳಿಂದ ಸ್ಥಾನ ಹೆಚ್ಚಿಸಿದ ಕಾಂಗ್ರೆಸ್, ಸಮೀಕ್ಷೆಗಳು ಇಲ್ಲಿವೆ
- Karnataka Exit Poll: ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ವಿವಿಧ ಏಜೆನ್ಸಿಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟಗೊಂಡಿವೆ. ಹಾಗಿದ್ದರೆ, ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬುದನ್ನು ಈ ಮುಂದೆ ನೋಡಿ.
- Karnataka Exit Poll: ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ವಿವಿಧ ಏಜೆನ್ಸಿಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟಗೊಂಡಿವೆ. ಹಾಗಿದ್ದರೆ, ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬುದನ್ನು ಈ ಮುಂದೆ ನೋಡಿ.
(1 / 6)
ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಪೂರ್ವ ನಡೆಸಿದ್ದ ಸಮೀಕ್ಷೆಗಳು ಹೊರಬಿದ್ದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹಾಗಾದರೆ, ಈ ಬಾರಿ ಯಾವ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ. ಸಮೀಕ್ಷೆಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.
(2 / 6)
ಟಿವಿ9 ಪೋಲ್ಸ್ಟಾರ್ ಪೀಪಲ್ ಇನ್ಸೈಟ್ ಸಮೀಕ್ಷೆ ಪ್ರಕಾರ ಬಿಜೆಪಿ 25 ರಿಂದ 18ಕ್ಕೆ ಇಳಿಕೆ ಕಂಡಿದ್ದರೆ, ಕಾಂಗ್ರೆಸ್ 1 ರಿಂದ 8ಕ್ಕೆ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಹೇಳುತ್ತಿದೆ.
(3 / 6)
ಹಾಗೆಯೇ ಟಿವಿ9 ಭಾರತ್ ವರ್ಷ್ ಸಮೀಕ್ಷೆ ಪ್ರಕಾರ ಬಿಜೆಪಿ 20 ಸ್ಥಾನ, ಕಾಂಗ್ರೆಸ್ 8 ಸ್ಥಾನ, ಜೆಡಿಎಸ್ ಖಾತೆಯೇ ತೆರೆಯುವುದಿಲ್ಲ ಎಂದು ಹೇಳುತ್ತಿದೆ. ಜೆಡಿಎಸ್ನಲ್ಲಿ ಹೆಚ್ಡಿ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಸೋಲುತ್ತಾರೆ ಎಂದು ಈ ವರದಿ ತಿಳಿಸಿದೆ.
(4 / 6)
ಇಂಡಿಯಾ ಟುಡೇ-ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಬಿಜೆಪಿ 20 ರಿಂದ 22 ಸ್ಥಾನ ಗಳಿಸಿದರೆ, ಕಾಂಗ್ರೆಸ್ 3 ರಿಂದ 5 ಕ್ಷೇತ್ರಗಳಲ್ಲಿ ಜಯಿಸುತ್ತದೆ.. ಇನ್ನು ಜೆಡಿಎಸ್ 2 ರಿಂದ 3 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.
(5 / 6)
ರಿಪಬ್ಲಿಕ್ ಟಿವಿ-ಜನ್ಕಿ ಬಾತ್ ಸಮೀಕ್ಷೆ ಪ್ರಕಾರ, ಬಿಜೆಪಿ 21 ರಿಂದ 23 ಸ್ಥಾನ, ಕಾಂಗ್ರೆಸ್ 5 ರಿಂದ 7 ಸ್ಥಾನ, ಜೆಡಿಎಸ್ ಖಾತೆಯೇ ತೆರೆಯುವುದಿಲ್ಲ.
ಇತರ ಗ್ಯಾಲರಿಗಳು