ಕರ್ನಾಟಕದ ಮುಂಗಾರು ಮಳೆ; ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ, ಭೂಮಾರ್ಗಕ್ಕೆ ಕಂಟಕ, ಉಕ್ಕಿ ಹರಿದ ನದಿಗಳು, ನಾಳೆಯೂ ರೆಡ್ ಅಲರ್ಟ್, ಫೋಟೋಸ್
ಕರ್ನಾಟಕದ ಮುಂಗಾರು ಮಳೆ ತೀವ್ರಗೊಂಡಿದೆ. ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ ಕಾರಣ ಹವಾಮಾನ ಇಲಾಖೆ ನಾಳೆಯೂ ರೆಡ್ ಅಲರ್ಟ್ ಘೋಷಿಸಿದೆ. ವಿಪರೀತ ಮಳೆಯ ಕಾರಣ ಭೂಮಾರ್ಗಕ್ಕೆ ಕಂಟಕ ಉಂಟಾಗಿದೆ. ಉಕ್ಕಿ ಹರಿದ ನದಿಗಳು ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಮಳೆ ಫೋಟೋಸ್ ಇಲ್ಲಿವೆ ನೋಡಿ.
(1 / 9)
ದಕ್ಷಿಣ ಕನ್ನಡ ಸಹಿತ ಕರ್ನಾಟಕ ಕರಾವಳಿಯಲ್ಲಿ ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಜೀವನದಿ ಎನ್ನಲಾಗುವ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅತ್ತ ಕುಮಾರಧಾರಾ ನದಿಯೂ ಮೈದುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಘಟ್ಟ ಹತ್ತುವ ಮಾರ್ಗಗಳಾದ ಆಗುಂಬೆ, ಸಂಪಾಜೆ, ಶಿರಾಡಿಗಳಲ್ಲಿ ಭೂಕುಸಿತದ ಆತಂಕವಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದರೆ, ಚಾರ್ಮಾಡಿ ರಸ್ತೆಯೂ ಅಪಾಯದ ಭೀತಿಯಲ್ಲಿದೆ. ಇಡೀ ದಿನದ ಮಳೆಯ ಚಿತ್ರನೋಟ ಇಲ್ಲಿದೆ.
(2 / 9)
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬಂಟ್ವಾಳದಲ್ಲಿ ಮೈದುಂಬಿ ಹರಿಯುತ್ತಿದೆ.(ಚಿತ್ರ: ಮನೋಜ್ ಕೋಟ್ಯಾನ್)
(3 / 9)
ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕೇರಳಕ್ಕೆ ತೆರಳುವ ಮಂಜೇಶ್ವರ ರಸ್ತೆಯಲ್ಲಿ ನೀರು ಹರಿಯುತ್ತಿದೆ.
(4 / 9)
ಬಂಟ್ವಾಳದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದು ಬಂಟ್ವಾಳ ಬಡ್ಡಕಟ್ಟೆ ಬಸ್ ನಿಲ್ದಾಣ, ಅಂಗಡಿ ಮಳಿಗೆಗಳು ಜಲಾವೃತಗೊಂಡವು.(ಚಿತ್ರ: ಕಿಶೋರ್ ಪೆರಾಜೆ)
(7 / 9)
ಬಂಟ್ವಾಳ ನೇತ್ರಾವತಿ ನದಿಗೆ ಕಟ್ಟಲಾಗುತ್ತಿರುವ ಹೊಸ ಸೇತುವೆಯ ಅಡಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವ ದೃಶ್ಯ. ಅಪಾಯದ ಮಟ್ಟ 8.5 ಮೀಟರ್ ಮೀರಿ ನದಿ ಶುಕ್ರವಾರ ಉಕ್ಕಿ ಹರಿಯುತ್ತಿದೆ.
(8 / 9)
ಗಯಾಪದ ಕ್ಷೇತ್ರವೆಂದೇ ಹೇಳಲಾಗುತ್ತಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ಸಂಗಮಕ್ಕೆ ಸನಿಹವಾಗುತ್ತಿರುವುದು.
ಇತರ ಗ್ಯಾಲರಿಗಳು