Rain in Karnataka: ಕರ್ನಾಟಕದ ಈ 3 ಜಿಲ್ಲೆಗಳಲ್ಲಿಂದು ಧಾರಾಕಾರ ಮಳೆ; ಉತ್ತರ, ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rain In Karnataka: ಕರ್ನಾಟಕದ ಈ 3 ಜಿಲ್ಲೆಗಳಲ್ಲಿಂದು ಧಾರಾಕಾರ ಮಳೆ; ಉತ್ತರ, ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

Rain in Karnataka: ಕರ್ನಾಟಕದ ಈ 3 ಜಿಲ್ಲೆಗಳಲ್ಲಿಂದು ಧಾರಾಕಾರ ಮಳೆ; ಉತ್ತರ, ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

  • Karnataka Weather Update: ಸೆಪ್ಟೆಂಬರ್​ 30ರಂದು ಕರ್ನಾಟಕದ ಯಾವೆಲ್ಲಾ ಭಾಗದಲ್ಲಿ ಮಳೆಯಾಗಲಿದೆ? ಎಲ್ಲೆಲ್ಲಿ ಯಲ್ಲೋ ಅಲರ್ಟ್ ಹಾಕಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲೂ ವಾತಾವರಣ ಪರಿಸ್ಥಿತಿ ಹೇಗಿದೆ? ಸಂಪೂರ್ಣ ವಿವರ ಇಲ್ಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Rain in Karnataka: ಸೆಪ್ಟೆಂಬರ್​​ 30ರ ಭಾನುವಾರವಾದ ಇಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಅಲ್ಲದೆ, ದಕ್ಷಿಣ ಒಳನಾಡು ಜಿಲ್ಲೆಗಳು ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹಾಕಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ಮಳೆ ಸುರಿದಂತೆ, ಇರುವುದಿಲ್ಲ.
icon

(1 / 5)

Rain in Karnataka: ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಕರಾವಳಿ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಅಥವಾ ಗುಡುಗು ಸಹಿತ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಪ್ರಮಾಣ ಕುಸಿದಿದ್ದು, ಕೆಲವೆಡೆ ಬೆಳೆಗಳು ನಾಶವಾಗುತ್ತಿವೆ.
icon

(2 / 5)

Rain in Karnataka: ಹಲವು ದಿನಗಳಿಂದಲೂ ಬೆಂಗಳೂರಿನಲ್ಲಿ ಮಳೆ ಕಾಣಿಸಿಕೊಂಡಿಲ್ಲ. ಆದರೆ, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಇವತ್ತು ಕೂಡ ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಗುಡುಗು ಮಳೆಯಾಗಬಹುದು. ಗರಿಷ್ಠ ಮತ್ತು ಕನಿಷ್ಠ ತಾಮಪಾನವು 30 ಡಿಗ್ರಿ ಸೆಲ್ಸಿಯಸ್ ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ. 
icon

(3 / 5)

Rain in Karnataka: ಉತ್ತರ ಒಳನಾಡು ಕರ್ನಾಟಕದಲ್ಲಿ ಅಕ್ಟೋಬರ್​ 2ರ ತನಕ ಮತ್ತು ದಕ್ಷಿಣ ಒಳನಾಡು ಕರ್ನಾಟಕಕ್ಕೆ ಇವತ್ತಿಗೆ ಯಲ್ಲೋ ಅಲರ್ಟ್ ಹಾಕಲಾಗಿದೆ. ಅಕ್ಟೋಬರ್ 1ರಂದು ಕರಾವಳಿ, ಅಕ್ಟೋಬರ್​ 2ರಂದು ಕರ್ನಾಟಕದ ಹಲವು ಸ್ಥಳಗಳಲ್ಲಿ, ಅಕ್ಟೋಬರ್​ 3ರಿಂದ 5ರ ತನಕ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
icon

(4 / 5)

Rain in Karnataka: ಬೆಂಗಳೂರು ಎಚ್​​ಎಎಲ್ ವಿಮಾನ ನಿಲ್ದಾಣದ ವೀಕ್ಷಣಾಲಯ ಮತ್ತು ದೇವನಹಳ್ಳಿಯಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದ್ದು, ಸೆಪ್ಟೆಂಬರ್​ 29ರಂದು ಸುರಿದ ಗರಿಷ್ಠ ಮಳೆ ಇದಾಗಿದೆ. ಚಾಮನಗರದ ಎಂಎ ಹಿಲ್ಸ್, ಮಂಡ್ಯದ ನಾಗಮಂಗಲ, ಬೆಂಗಳೂರಿನ ಹಲವು ಪ್ರದೇಶಗಳು, ಚಿಕ್ಕಬಳ್ಳಾಪುರ, ಕೊಳ್ಳೇಗಾಲ, ಗುಬ್ಬಿ, ಗುಂಡ್ಲುಪೇಟೆ, ಬಂಡೀಪುರ, ಬೇಗೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಉತ್ತಮ ಮಳೆಯಾಗಿದೆ.
icon

(5 / 5)

Rain in Karnataka: ಬೆಂಗಳೂರು ಎಚ್​​ಎಎಲ್ ವಿಮಾನ ನಿಲ್ದಾಣದ ವೀಕ್ಷಣಾಲಯ ಮತ್ತು ದೇವನಹಳ್ಳಿಯಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದ್ದು, ಸೆಪ್ಟೆಂಬರ್​ 29ರಂದು ಸುರಿದ ಗರಿಷ್ಠ ಮಳೆ ಇದಾಗಿದೆ. ಚಾಮನಗರದ ಎಂಎ ಹಿಲ್ಸ್, ಮಂಡ್ಯದ ನಾಗಮಂಗಲ, ಬೆಂಗಳೂರಿನ ಹಲವು ಪ್ರದೇಶಗಳು, ಚಿಕ್ಕಬಳ್ಳಾಪುರ, ಕೊಳ್ಳೇಗಾಲ, ಗುಬ್ಬಿ, ಗುಂಡ್ಲುಪೇಟೆ, ಬಂಡೀಪುರ, ಬೇಗೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಉತ್ತಮ ಮಳೆಯಾಗಿದೆ.(AP)

ಇತರ ಗ್ಯಾಲರಿಗಳು