ಕಾರವಾರ: ಅದ್ಧೂರಿಯಾಗಿ ನಡೆದ ಶ್ರೀ ಶೆಜ್ಜೇಶ್ವರ ದೇವರ ಕಾರ್ತಿಕೋತ್ಸವದ ಚಿತ್ರಗಳು - Shejjeshwara Temple
- Shree Shejjeshwara Temple in Karwar: ಕಾರವಾರ ತಾಲೂಕಿನ ಶ್ರೀಕ್ಷೇತ್ರ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿದೆ.
- Shree Shejjeshwara Temple in Karwar: ಕಾರವಾರ ತಾಲೂಕಿನ ಶ್ರೀಕ್ಷೇತ್ರ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿದೆ.
(1 / 7)
ಕಾರವಾರ: ಗೋಕರ್ಣದಷ್ಟೇ ಪವಿತ್ರವಾದ ಹಾಗೂ ಶಿವನ ಆತ್ಮಲಿಂಗದ ಒಂದು ಭಾಗ ಎಂದು ಹೇಳಲಾಗುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಶೇಜವಾಡ ಎಂಬಲ್ಲಿರುವ ಶೆಜ್ಜೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
(2 / 7)
ಶುಕ್ರವಾರ ನಡೆದ ಈ ಕಾರ್ತಿಕ ದೀಪೋತ್ಸವದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿ, ಉತ್ಸವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
(3 / 7)
ಬೆಳಿಗ್ಗೆ ಶ್ರೀದೇವರ ಪಲ್ಲಕ್ಕಿ ದೇವಸ್ಥಾನದಿಂದ ಮೆರವಣಿಗೆ ಹೊರಟು ವನಕ್ಕೆ ತೆರಳಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
(4 / 7)
ಮಧ್ಯಾಹ್ನ ವನಭೋಜನ ನಡೆದು ಸಂಜೆ 6 ಗಂಟೆಗೆ ಪಲ್ಲಕ್ಕಿ ದೇವಸ್ಥಾನದ ಆವರಣಕ್ಕೆ ಆಗಮಿಸಿದಾಗ ದೇವಸ್ಥಾನದ ಆವರಣದಲ್ಲಿ ನಡೆದ ದೀಪೋತ್ಸವ ನೆರೆದ ಭಕ್ತರನ್ನು ರೋಮಾಂಚನ ಗೊಳಿಸಿತು.
(6 / 7)
ಶ್ರೀ ದೇವರ ಲಾಲಕಿ ಮೆರವಣಿಗೆ ಮೂಲಕ ಭಕ್ತರ ಸೇವೆ ಸ್ವೀಕರಿಸುತ್ತ ದೇವಸ್ಥಾನದ ಕೆರೆಗೆ ತೆರಳಿ ಅಲ್ಲಿ ಶ್ರೀದೇವರ ತೆಪ್ಪೋತ್ಸವ ನೆರವೇರಿತು. ಬಳಿಕ ಮರಳಿ ದೇವಸ್ಥಾನಕ್ಕೆ ಆಗಮಿಸಿ ಮಹಾಪೂಜೆಯ ಬಳಿಕ ಕಾರ್ತಿಕೋತ್ಸವ ಸಂಪನ್ನಗೊಂಡಿತು.
ಇತರ ಗ್ಯಾಲರಿಗಳು