Kitchen Tips: ಒಡೆದ ತೆಂಗಿನಕಾಯಿ ಕೆಡದಂತೆ ಇಡಲು ಇಲ್ಲಿದೆ ಟಿಪ್ಸ್, ಹೀಗೆ ಮಾಡಿದ್ರೆ ಬಹಳ ದಿನ ತಾಜಾವಾಗಿರುತ್ತೆ
- ತೆಂಗಿನಕಾಯಿಯನ್ನು ಒಡೆದು ಬಹಳ ದಿನಗಳವರೆಗೆ ಇರಿಸಿಲು ಸಾಧ್ಯವಿಲ್ಲ. ಹಾಗೆ ಇಟ್ಟರೆ ಲೋಳೆ ಬರುತ್ತದೆ ಅಥವಾ ಯೀಸ್ಟ್ ಕಾಣಿಸುತ್ತದೆ. ಕೆಲವೊಮ್ಮೆ ಒಣಗುತ್ತದೆ. ಹಾಗಾದರೆ ಒಡೆದಿರುವ ತೆಂಗಿನಕಾಯಿ ಕೆಡದಂತೆ ಬಹಳ ದಿನ ತಾಜಾವಾಗಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಸಿಂಪಲ್ ಟ್ರಿಕ್ಸ್ ನೀವೂ ಟ್ರೈ ಮಾಡಿ ನೋಡಿ.
- ತೆಂಗಿನಕಾಯಿಯನ್ನು ಒಡೆದು ಬಹಳ ದಿನಗಳವರೆಗೆ ಇರಿಸಿಲು ಸಾಧ್ಯವಿಲ್ಲ. ಹಾಗೆ ಇಟ್ಟರೆ ಲೋಳೆ ಬರುತ್ತದೆ ಅಥವಾ ಯೀಸ್ಟ್ ಕಾಣಿಸುತ್ತದೆ. ಕೆಲವೊಮ್ಮೆ ಒಣಗುತ್ತದೆ. ಹಾಗಾದರೆ ಒಡೆದಿರುವ ತೆಂಗಿನಕಾಯಿ ಕೆಡದಂತೆ ಬಹಳ ದಿನ ತಾಜಾವಾಗಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಸಿಂಪಲ್ ಟ್ರಿಕ್ಸ್ ನೀವೂ ಟ್ರೈ ಮಾಡಿ ನೋಡಿ.
(1 / 10)
ಭಾರತೀಯ ಅಡುಗೆ ಮನೆಯಲ್ಲಿ ತೆಂಗಿನಕಾಯಿಗೆ ಅಗ್ರಸ್ಥಾನ, ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಬಳಸದೇ ದಿನನಿತ್ಯದ ಅಡುಗೆಯಾಗುವುದು ಕಷ್ಟಸಾಧ್ಯ. ಹಾಗಂತ ಒಮ್ಮೆ ಒಡೆದ ತೆಂಗಿನಕಾಯಿಯನ್ನು ಒಂದೇ ದಿನ ಬಳಸಲು ಸಾಧ್ಯವಾಗುತ್ತದೆ ಎಂದೇನಿಲ್ಲ. (PC: Canva)
(2 / 10)
ಒಡೆದ ತೆಂಗಿನಕಾಯಿ ಕೆಡದಂತೆ ಬಹಳ ದಿನ ತಾಜಾವಾಗಿರಲು ಇಲ್ಲಿದೆ ಐಡಿಯಾ, ಈ ಟಿಪ್ಸ್ ಅನುಸರಿಸಿದರೆ ಬಹಳ ದಿನಗಳವರೆಗೆ ತೆಂಗಿನಕಾಯಿ ಹಾಳಾಗುವುದಿಲ್ಲ.
(3 / 10)
ತಾಜಾ ತೆಂಗಿನಕಾಯಿ ಅಥವಾ ತುರಿದ ತೆಂಗಿನಕಾಯಿಯನ್ನು ಫ್ರಿಜ್‌ನಲ್ಲಿಟ್ಟು ವಾರದವರೆಗೆ ಕಡೆದಂತೆ ನೋಡಿಕೊಳ್ಳಬಹುದು. ಇದನ್ನು ಕೂಡ ಗಾಳಿಯಾಡದ ಕಂಟೈನರ್‌ನಲ್ಲಿ ಇಡುವುದು ಉತ್ತಮ.
(4 / 10)
ತೆಂಗಿನತುರಿಯ ಕೆಡದಂತೆ ಇರಲು ಇದನ್ನು ಫ್ರೀಜ್ ಮಾಡಿ 6 ರಿಂದ 8 ತಿಂಗಳವರೆಗೆ ಇರಿಸಬಹುದು. ತೆಂಗಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಇದನ್ನು ಫ್ರೀಜರ್ ಬ್ಯಾಗ್ ಅಥವಾ ಗಾಳಿಯಾಡದ ಕಂಟೈನರ್‌ನಲ್ಲಿ ಸಂಗ್ರಹಿಸಿ ಇಡಿ.
(5 / 10)
ತೆಂಗಿನಕಾಯಿ ಕೆಡದಂತೆ ಇರಲು ಇದನ್ನು ತುರಿದು ಚೆನ್ನಾಗಿ ಹುರಿದು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡುವುದರಿಂದ ಕೂಡ ಕೆಲವು ದಿನಗಳವರೆಗೆ ಕೆಡದಂತೆ ಇರಿಸಬಹುದು.
(6 / 10)
ತಾಜಾ ಎಳನೀರನ್ನು 24ರಿಂದ 48 ಗಂಟೆಗಳ ಒಳಗಡೆ ಸೇವಿಸಬೇಕು. ಇದನ್ನು ಸಂಗ್ರಹಿಸಿ ಇಡಬೇಕು ಅಂತಾದರೆ ಒಡೆದ ತಕ್ಷಣವೇ ಗಾಳಿಯಾಡದ ಕಂಟೈನರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೆ ಸಂರಕ್ಷಿಸಬಹುದು
(7 / 10)
ತಾಜಾ ಎಳನೀರಿನ ಫ್ರೀಜಿಂಗ್: ಬಹಳ ದಿನಗಳವರೆಗೆ ಎಳನೀರು ತಾಜಾವಾಗಿರಬೇಕು ಅಂತಿದ್ದರೆ ಐಸ್‌ಕ್ಯೂಬ್ ಅಥವಾ ಸ್ವಚ್ಛವಾದ ಪಾತ್ರೆಯಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟು ಸಂಗ್ರಹಿಸಬಹುದು. ಇದನ್ನು ಫ್ರೀಜರ್‌ನಲ್ಲಿಟ್ಟರೆ ಕೆಲವು ತಿಂಗಳವರೆಗೆ ಕೆಡದಂತೆ ಇಡಬಹುದು ಎಂಬುದು ತಜ್ಞರ ಸಲಹೆ.
(8 / 10)
ಒಡೆದ ತೆಂಗಿನಕಾಯಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇಡುವುದರಿಂದ ಕೂಡ ಕೆಲವು ದಿನಗಳವರೆಗೆ ಹಾಳಾಗುವುದಿಲ್ಲ. ಹಿಂದಿನ ಕಾಲದಲ್ಲಿ ಬೆಂಕಿ ಒಲೆಯ ಸಮೀಪ ತೆಂಗಿನಕಾಯಿ ಇಟ್ಟು ಬಿಸಿ ಮಾಡುವ ಪದ್ಧತಿಯು ಇತ್ತು. ಇದರಿಂದ ಕೆಲವು ದಿನಗಳವರೆಗೆ ತೆಂಗಿನಕಾಯಿ ಕೆಡುತ್ತಿರಲಿಲ್ಲ.
(9 / 10)
ಈ ವಿಧಾನದ ಮೂಲಕ ಹಲವು ದಿನಗಳವರೆಗೆ ತೆಂಗಿನಕಾಯಿ ಹಾಗೂ ಎಳನೀರು ಎರಡನ್ನೂ ಸಂಗ್ರಹಿಸಿ ಇಡಬಹುದು. ಆದರೆ ಫ್ರಿಜ್‌ನಲ್ಲಿಟ್ಟು ಕರೆಂಟ್ ಹೋದರೆ ತೆಂಗಿನಕಾಯಿ ಕೆಡುತ್ತದೆ ನೆನಪಿರಲಿ.
ಇತರ ಗ್ಯಾಲರಿಗಳು