ಮನೆಯವರು ನೋಡಿದ ಹುಡುಗನನ್ನೇ ಮದುವೆಯಾಗ್ತಿದ್ದಾರೆ ನಟಿ ಕೀರ್ತಿ ಸುರೇಶ್; ಇದೇ ಡಿಸೆಂಬರ್ನಲ್ಲಿ ಮಹಾನಟಿಯ ಕಲ್ಯಾಣ?
Keerthy Suresh Wedding: ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆಯ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೀರ್ತಿ ಸುರೇಶ್ ಇದೇ ಡಿಸೆಂಬರ್ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆಯವರು ನೋಡಿದ ಹುಡುಗನನ್ನೇ ಕೀರ್ತಿ ವರಿಸಲಿದ್ದಾರಂತೆ.
(1 / 5)
ಕೀರ್ತಿ ಸುರೇಶ್ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಕಾಲಿವುಡ್ ವಲಯಗಳಲ್ಲಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ.
(2 / 5)
ಕೆಲ ವರದಿಗಳ ಪ್ರಕಾರ, ಮನೆಯವರೇ ನೋಡಿದ ಹುಡುಗನ ಜತೆಗೆ ಕೀರ್ತಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಜೋಡಿಯ ಕಲ್ಯಾಣ ಗೋವಾದಲ್ಲಿ ನಡೆಯಲಿದೆ.
(3 / 5)
ಆದರೆ, ಕೀರ್ತಿ ಸುರೇಶ್ ಮತ್ತು ಅವರ ಕುಟುಂಬ ಸದಸ್ಯರು ಈ ಮದುವೆಯ ಬಗ್ಗೆ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.
(4 / 5)
ಈ ಹಿಂದೆ ಕೀರ್ತಿ ಸುರೇಶ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.
ಇತರ ಗ್ಯಾಲರಿಗಳು