Kriti Sanon Birthday: 32ನೇ ವಸಂತಕ್ಕೆ ಕಾಲಿರಿಸಿದ ಬಾಲಿವುಡ್ ಪರಂ ಸುಂದರಿ ಕೃತಿ ಸನೋನ್..
- ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ ಎನಿಸಿರುವ ಕೃತಿ ಸನೋನ್ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಬುಧವಾರ 32ನೇ ಜನ್ಮದಿನವನ್ನು ಆಚರಣೆ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಬಿಟೌನ್‌ನ ಬಿಜಿಯೆಸ್ಟ್ ನಟಿಯಾಗಿರುವ ಕೃತಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. "ಬೇಡಿಯಾ", "ಗಣಪತ್", "ಆದಿಪುರುಷ್" ಮತ್ತು ಕಾರ್ತಿಕ್ ಆರ್ಯನ್ ಜತೆಗೆ "ಶೆಹಜಾದ್" ಸಿನಿಮಾದ ಭಾಗವಾಗಿದ್ದಾರೆ. ಬರ್ತ್‌ಡೇ ಸಂಭ್ರಮದಲ್ಲಿ ಅವರ ಸಿನಿಮಾ ಪಯಣದ ಸಣ್ಣ ಜರ್ನಿ ಇಲ್ಲಿದೆ..

(1 / 7)
2014ರಲ್ಲಿ ತೆಲುಗಿನ "ನೆನೊಕ್ಕಡೇನೆ" ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿಳಿದ ಕೃತಿ, ಅದೇ ವರ್ಷ "ಹೀರೋಪಂತಿ" ಮೂಲಕ ಬಾಲಿವುಡ್‌ಗೂ ಕಾಲಿಟ್ಟರು.(instagram)
(2 / 7)
ಅಲ್ಲಿಂದ ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿಯೇ ನಟಿಸಿ, ಬಾಲಿವುಡ್ ನಟಿ ಎಂದೇ ಗುರುತಿಸಿಕೊಂಡು, ಸ್ಟಾರ್ ನಟರ ಜತೆಗೆ ಜೋಡಿಯಾಗಿಯೂ ನಟಿಸಿದರು.(Instagram)
(3 / 7)
ನಾಯಕಿ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಕೃತಿ, "ಮಿಮಿ" ಚಿತ್ರದ ಮೂಲಕ ಹೊಸ ದಾಖಲೆ ಬರೆದರು. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.(Instagram)
(4 / 7)
ಇತ್ತೀಚಿನ ಕೃತಿ ನಾಯಕಿಯಾಗಿ ನಟಿಸಿದ "ಬಚ್ಚನ್ ಪಾಂಡೆ" ಮತ್ತು "ಹೀರೋಪಂತಿ 2" ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾದವು.(Instagram)
(5 / 7)
ಇಷ್ಟಾದರೂ ಬೇಡಿಕೆ ಕುಂದದ ಈ ಚೆಲುವೆಯ ಬಳಿ ನಾಲ್ಕು ಸಿನಿಮಾಗಳಿವೆ. ಈಗಾಗಲೇ ಆ ನಾಲ್ಕು ಚಿತ್ರಗಳ ಪೈಕಿ ಕೆಲವು ಚಿತ್ರೀಕರಣವೂ ಮುಗಿದಿದೆ.( Instagram)
(6 / 7)
ಸದ್ಯ "ಬೇಡಿಯಾ", "ಗಣಪತ್", "ಆದಿಪುರುಷ್" ಮತ್ತು ಕಾರ್ತಿಕ್ ಆರ್ಯನ್ ಜತೆಗೆ "ಶೆಹಜಾದ್" ಸಿನಿಮಾದಲ್ಲಿ ಕೃತಿ ನಟಿಸುತ್ತಿದ್ದಾರೆ.( Instagram)
ಇತರ ಗ್ಯಾಲರಿಗಳು