ವಿಶ್ವದ 100 ಪ್ಯಾನ್‌ಕೇಕ್ ಪಟ್ಟಿಯಲ್ಲಿ ಟಾಪ್ 15ರೊಳಗೆ ಭಾರತದ ದೋಸೆ, ಮಸಾಲೆ ದೋಸೆ; ನೀರ್ ದೋಸೆ ಸೇರಿ ಒಟ್ಟು 10 ಖಾದ್ಯಗಳು
ಜಾಗತಿಕ ಮಟ್ಟದಲ್ಲಿ ಭಾರತೀಯ ಆಹಾರಗಳು ಸ್ಥಾನ ಪಡೆದುಕೊಳ್ಳತೊಡಗಿವೆ. ಚಹಾ ಈ ರೀತಿ ಗಮನಸೆಳೆದ ಬಳಿಕ ಈಗ ವಿಶ್ವದ 100 ಪ್ಯಾನ್‌ಕೇಕ್ ಪಟ್ಟಿಯಲ್ಲಿ ಟಾಪ್ 15ರೊಳಗೆ ಭಾರತದ ದೋಸೆ, ಮಸಾಲೆ ದೋಸೆ, ನೀರ್ ದೋಸೆಗಳು ಕಾಣಿಸಿಕೊಂಡಿವೆ. ಇದರ ಸಚಿತ್ರ ವಿವರ ಇಲ್ಲಿದೆ.
(1 / 11)
ದೋಸೆ ಪ್ಯಾನ್‌ಕೇಕ್ ಅಲ್ಲ ಎಂದು ಮೂಗುಮುರಿಯುವ ಮೊದಲು ಈ ಫೋಟೋ ವರದಿ ಒಮ್ಮೆ ಗಮನಿಸಿ. ಟ್ರಾವೆಲ್ ಮತ್ತು ಫುಡ್ ಗೈಡ್ ಆಗಿರುವ ಆನ್‌ಲೈನ್ ಪೋರ್ಟಲ್ ಟೇಸ್ಟ್ ಅಟ್ಲಾಸ್ ಈ ಪಟ್ಟಿಯನ್ನು ಮಾಡಿದೆ. ಇದರಲ್ಲಿ ಪ್ಯಾನ್‌ಕೇಕ್ ಎಂದು ಪರಿಗಣಿಸಲ್ಪಡದ ಕೆಲವು ಖಾದ್ಯಗಳನ್ನೂ ಸೇರಿಸಿದೆ. ಅವುಗಳ ಕಡೆಗೂ ಒಮ್ಮೆ ನೋಟ ಹರಿಸೋಣ.(Canva)
(2 / 11)
ದಕ್ಷಿಣ ಭಾರತದ ಜನಪ್ರಿಯ ಉಪಾಹಾರ ದೋಸೆ.ಅಕ್ಕಿ, ಗೋಧಿ, ರಾಗಿ ಸೇರಿ ವಿವಿಧ ಧಾನ್ಯಗಳನ್ನು ಉಪಯೋಗಿಸಿ ದೋಸೆ ಮಾಡಲಾಗುತ್ತದೆ. ವಿಶ್ವದ 100 ಪ್ಯಾನ್‌ಕೇಕ್ ಪಟ್ಟಿಯಲ್ಲಿ ಇದಕ್ಕೆ 10ನೇ ಸ್ಥಾನ. ತಮಿಳು ಸಾಹಿತ್ಯದಲ್ಲಿ 1ನೇ ಶತಮಾನದಲ್ಲಿ ಮೊದಲ ಬಾರಿಗೆ ದೋಸೆ ಉಲ್ಲೇಖವಾಗಿದೆ ಎಂಬ ಅಂಶವನ್ನು ಅದು ಪ್ರಕಟಿಸಿದೆ. ಅದೇ ರೀತಿ ಕರ್ನಾಟಕದ ಉಡುಪಿ ದೋಸೆಯನ್ನೂ ಟೇಸ್ಟ್ ಅಟ್ಲಾಸ್ ಪ್ರಸ್ತಾಪಿಸಿದೆ. (tasteatlas.com)
(3 / 11)
ಟೇಸ್ಟ್ ಅಟ್ಲಾಸ್‌ನ ವಿಶ್ವದ 100 ಪ್ಯಾನ್‌ಕೇಕ್ ಪಟ್ಟಿಯಲ್ಲಿ ಮಸಾಲೆ ದೋಸಾಗೆ 13 ನೇ ಸ್ಥಾನ. ದೇಶಾದ್ಯಂತ ಬಹಳ ಜನಪ್ರಿಯವಾದ ದೋಸೆ ಇದು.ಮೈಸೂರು ಮಸಾಲೆ ದೋಸೆ, ರವಾ ಮಸಾಲೆ ದೋಸೆ, ಈರುಳ್ಳಿ ಮಸಾಲೆ ದೋಸೆ ಮತ್ತು ಪೇಪರ್ ಮಸಾಲೆ ದೋಸೆ ಮುಂತಾದ ವೆರೈಟಿ ಗಮನಸೆಳೆಯುತ್ತವೆ. ಇದಕ್ಕೆ ಚಟ್ನಿ, ಸಾಂಬಾರ್, ಗಸಿಯನ್ನು ನೆಚ್ಚಿಕೊಳ್ಳಲು ಬಳಸುತ್ತಾರೆ. (tasteatlas.com)
(4 / 11)
ಉತ್ತಪ್ಪಂ ಅಥವಾ ಊತಪ್ಪಂ, ಈರುಳ್ಳಿ ದೋಸೆ ಟೇಸ್ಟ್ ಅಟ್ಲಾಸ್‌ನ ಪ್ಯಾನ್‌ಕೇಕ್ ಪಟ್ಟಿಯಲ್ಲಿ 59ನೇ ಸ್ಥಾನದಲ್ಲಿದೆ. ಇದನ್ನು ಅದು ಸ್ಟ್ರೀಟ್‌ಫುಡ್ ಎಂದು ಗುರುತಿಸಿದೆ. ದಕ್ಷಿಣ ಭಾರತದಲ್ಲಿ ಉಪಾಹಾರವಾಗಿ ಬಳಕೆಯಲ್ಲಿದೆ. ಇದು ನೋಡುವುದಕ್ಕೆ ಪಿಜ್ಜಾವನ್ನು ನೆನಪಿಸುತ್ತದೆ. ಇದಕ್ಕೆ ಈರುಳ್ಳಿ, ಟೊಮ್ಯಾಟೋ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹಸಿಮೆಣಸನ್ನು ಬಳಸುತ್ತಾರೆ.(tasteatlas.com)
(5 / 11)
ಆಂಧ್ರ ಪ್ರದೇಶ ಮತ್ತು ರಾಜಸ್ಥಾನದ ಜನಪ್ರಿಯ ಉಪಾಹಾರ ಪೆಸರ ದೋಸೆ, ಇದು ಟೇಸ್ಟ್‌ಅಟ್ಲಾಸ್ ಪಟ್ಟಿಯಲ್ಲಿ 61 ನೇ ಸ್ಥಾನದಲ್ಲಿದೆ. ಅಕ್ಕಿ ಮತ್ತು ಹೆಸರು ಬೇಳೆ ಬಳಸಿಕೊಂಡು ಈ ದೋಸೆ ಹಿಟ್ಟು ತಯಾರಿಸಲಾಗುತ್ತದೆ. ಇದಕ್ಕೂ ನೆಂಚಿಕೊಳ್ಳಲು ತೆಂಗಿನ ಕಾಯಿ ಚಟ್ನಿ ಮತ್ತು ಸಾಂಬಾರ್, ಗಸಿ ಬಳಸುತ್ತಾರೆ. (tasteatlas.com)
(6 / 11)
ಪೇಪರ್ ದೋಸೆ - ಟೇಸ್ಟ್ ಅಟ್ಲಾಸ್‌ನ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದೆ. ಇದು ತಮಿಳುನಾಡಿನ ವಿಶೇಷ ಉಪಾಹಾರ. ಹೆಸರೇ ಹೇಳುವಂತೆ ಇದು ಬಹಳ ತೆಳುವಾದ ದೊಡ್ಡ ಗಾತ್ರದ ದೋಸೆ. ಕರ್ನಾಟಕದಲ್ಲೂ ಇದು ಜನಪ್ರಿಯ. ಇದಕ್ಕೂ ತೆಂಗಿನಕಾಯಿ ಚಟ್ನಿ, ಸಂಬಾರ್ ಅಥವಾ ಗಸಿಯನ್ನು ನೆಂಚಿಕೊಳ್ಳಲು ಬಳಸುತ್ತಾರೆ.(tasteatlas.com)
(7 / 11)
ಟೇಸ್ಟ್ ಅಟ್ಲಾಸ್‌ನ ವಿಶ್ವದ 100 ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಆಪಂ 65 ನೇ ಸ್ಥಾನದಲ್ಲಿದೆ. ಇದು ಕೇರಳದ ಜನಪ್ರಿಯ ಉಪಾಹಾರ. ಅಕ್ಕಿ ಹಿಟ್ಟು ಮತ್ತು ತೆಂಗಿನ ಹಾಲು ಬಳಸಿ ಈ ದೋಸೆ ಹಿಟ್ಟು ತಯಾರಿಸಲಾಗುತ್ತದೆ. ಆಪ್ಪಂ ತಮಿಳುನಾಡು, ಶ್ರೀಲಂಕಾ ಮತ್ತು ಕೇರಳದಲ್ಲಿ ಹೆಚ್ಚು ಜನಪ್ರಿಯ. (tasteatlas.com)
(8 / 11)
ಕರ್ನಾಟಕದ ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗದ ನೀರುದೋಸೆ ಕೂಡ ಟೇಸ್ಟ್ ಅಟ್ಲಾಸ್‌ನ ವಿಶ್ವದ 100 ಪ್ಯಾನ್‌ಕೇಕ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದು 77ನೇ ಸ್ಥಾನದಲ್ಲಿದೆ. ಈ ದೋಸೆ ಹಿಟ್ಟು ತಯಾರಿಸಲು ಅಕ್ಕಿ, ಉಪ್ಪು ಮಾತ್ರ ಬೇಕಾಗಿದ್ದು, ಹಿಟ್ಟು ನೀರಾಗಿರುತ್ತದೆ. ದೋಸೆ ಹುಯ್ಯುವುದಕ್ಕೂ ವಿಶೇಷ ಪರಿಣತಿ ಅವಶ್ಯ. ಇದನ್ನು ನೀರು ದೋಸೆ, ನೀರ್ ದೋಸೆ, ತೆಳ್ಳವು, ತೆಳ್ಳಿನ್ ದೋಸೆ, ಬರಿ ಅಕ್ಕಿ ದೋಸೆ ಇತ್ಯಾದಿ ಹೆಸರಿನಿಂದಲೂ ಕರೆಯುತ್ತಾರೆ. (tasteatlas.com)
(9 / 11)
ಕೇರಳ, ತಮಿಳುನಾಡಿನ ಇನ್ನೊಂದು ಜನಪ್ರಿಯ ಉಪಾಹಾರ ಕಲ್ಲಪ್ಪಂ. ಇದು ಪಟ್ಟಿಯಲ್ಲಿ 80ನೇ ಸ್ಥಾನದಲ್ಲಿದೆ. ಇದು ಕೂಡ ಅಕ್ಕಿ, ತೆಂಗಿನ ಹಾಲು ಮತ್ತು ಇತರೆ ಇಂಗ್ರೇಡಿಯಂಟ್‌ಗಳನ್ನು ಬಳಸಿಕೊಂಡು ತಯಾರಿಸುವ ಭಕ್ಷ್ಯ. (tasteatlas.com)
(10 / 11)
ಪಿಥಾ - ಒಡಿಶಾ, ಬಾಂಗ್ಲಾದೇಶಗಳಲ್ಲಿ ಜನಪ್ರಿಯ ಉಪಾಹಾರ. ಪಟ್ಟಿಯಲ್ಲಿ ಇದಕ್ಕೆ 83ನೇ ಸ್ಥಾನ. ನೋಡಲು ಇಡ್ಲಿಯನ್ನು ಹೋಲುವ ಇದಕ್ಕೆ ಅಕ್ಕಿ, ಗೋಧಿ, ಜೋಳದ ಹಿಟ್ಟು ಬಳಸಲಾಗುತ್ತದೆ. (tasteatlas.com)
ಇತರ ಗ್ಯಾಲರಿಗಳು