Diabetes: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಟೈಪ್ 1-ಟೈಪ್ 2 ಮಧುಮೇಹ; ಪೋಷಕರೇ, ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Diabetes: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಟೈಪ್ 1-ಟೈಪ್ 2 ಮಧುಮೇಹ; ಪೋಷಕರೇ, ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿ

Diabetes: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಟೈಪ್ 1-ಟೈಪ್ 2 ಮಧುಮೇಹ; ಪೋಷಕರೇ, ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿ

  • Child Diabetes: ಪ್ರತಿ 1000 ಮಕ್ಕಳಲ್ಲಿ ಇಬ್ಬರಲ್ಲಿ ಮಧುಮೇಹದ ಸಮಸ್ಯೆ ಇದೆ. ಟೈಪ್ -1 ಮಧುಮೇಹ ಮತ್ತು ಟೈಪ್ -2 ಮಧುಮೇಹವು ಮಕ್ಕಳಲ್ಲಿ ತೀರಾ ಸಾಮಾನ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಎಂಬುದು ಆತಂಕಕಾರಿ. ಹಾಗಂತಾ ಚಿಂತಿಸಬೇಕಿಲ್ಲ. ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು.

ಮಕ್ಕಳಿಗೆ ಮಧುಮೇಹವಿದೆ ಎಂದು ತಿಳಿದಾಗ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರು ಆತಂಕಕ್ಕೊಳಗಾಗುವುದು ಸಹಜ, ಆರಂಭದಲ್ಲಿ ಇದಕ್ಕೆ ಪ್ರತಿಕ್ರಿಯಿಸುವುದು ಮಕ್ಕಳಿಗೆ ಕಷ್ಟ. ಚಿಕಿತ್ಸೆ ಅಥವಾ ಔಷಧಿ ತೆಗೆದುಕೊಳ್ಳಲು ಮಕ್ಕಳು ವಿರೋಧ ಮಾಡಬಹುದು. ಕ್ರಮೇಣ ಅವರು ಹೊಂದಿಕೊಳ್ಳುತ್ತಾರೆ.
icon

(1 / 10)

ಪೋಷಕರು ತಮ್ಮ ಮಕ್ಕಳಿಗೆ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಮಾನಸಿಕ ಧೈರ್ಯವನ್ನು ತುಂಬಬೇಕು. ಅವರೊಂದಿಗೆ ನಿಲ್ಲುವ ಭರವಸೆ ನೀಡಬೇಕು. ಒಂದು ವೇಳೆ ಅಗತ್ಯವಿದ್ದರೆ, ಮನಶ್ಶಾಸ್ತ್ರಜ್ಞರೊಂದಿಗೆ ಸಲಹೆ ನೀಡಬೇಕು.
icon

(2 / 10)

ಪ್ರತಿ 1,000 ಮಕ್ಕಳಲ್ಲಿ ಇಬ್ಬರಲ್ಲಿ ಮಧುಮೇಹದ ಸಮಸ್ಯೆ ಇದೆ. ಹೀಗಾಗಿ ಆಧುನಿಕ ಜೀವನಶೈಲಿಯನ್ನು ಆರೋಗ್ಯಕರವಾಗಿ ರೂಪಿಸಿಕೊಳ್ಳಬೇಕು.
icon

(3 / 10)

ಆಗಾಗ ರಕ್ತ ಪರೀಕ್ಷೆ ಮತ್ತು ಇನ್ಸುಲಿನ್ ಚುಚ್ಚುಮದ್ದಿಗಾಗಿ ತಮ್ಮ ಕೈಗಳಿಗೆ ಚುಚ್ಚಿಸಿಕೊಳ್ಳಲು ಮಕ್ಕಳು ಹೆದರುವುದು ಸಹಜ. ಅದರ ಅಗತ್ಯವನ್ನು ಅವರಿಗೆ ವಿವರಿಸಬೇಕು. ಮಾನಸಿಕವಾಗಿ ಅವರನ್ನು ತಮ್ಮದೇ ರೋಗವನ್ನು ನಿಯಂತ್ರಿಸಬಲ್ಲ ವ್ಯಕ್ತಿಗಳಾಗಿ ರೂಪಿಸಬೇಕು.
icon

(4 / 10)

ಮಕ್ಕಳು ರಕ್ತ ಪರೀಕ್ಷೆ ಅಥವಾ ಚುಚ್ಚುಮದ್ದಿಗೆ ಒಳಗಾಗಿರಲಿ ಅವರನ್ನು ಸಕ್ರಿಯವಾಗಿಡಬೇಕು. ಮಕ್ಕಳನ್ನು ಚಿಕಿತ್ಸೆಗೆ ಸ್ಪಂದಿಸಿದ್ದಕ್ಕಾಗಿ ಪ್ರೋತ್ಸಾಹಿಸಬೇಕು. ಮಧುಮೇಹ ಹೊಂದಿರುವ ಇತರ ಮಕ್ಕಳೊಂದಿಗೆ ಅವರನ್ನು ಗಮನಿಸಬೇಕು. ಔಷಧಿಗ ಮತ್ತು ಪರೀಕ್ಷೆ ವಿಚಾರದಲ್ಲಿ ಎಚ್ಚರದಿಂದಿರಬೇಕು. ಆರೋಗ್ಯ ಕಾಳಜಿ ಕುರಿತು ಚಾರ್ಟ್ ಸಿದ್ಧಪಡಿಸಬೇಕು.
icon

(5 / 10)

ಮಧುಮೇಹದಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳು ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳು ಶಾಲೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ, ಮಧುಮೇಹ, ಆಹಾರಕ್ರಮ, ಸಮಸ್ಯೆಗಳು ಮತ್ತು ಚಿಕಿತ್ಸೆಯ ಬಗ್ಗೆ ಪೋಷಕರು ಮಾತ್ರವಲ್ಲದೆ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ  ಜಾಗೃತಿ ಅಗತ್ಯವಿದೆ.
icon

(6 / 10)

ಮಕ್ಕಳಲ್ಲಿ ಮಧುಮೇಹ ಪತ್ತೆಯಾದರೆ, ಅವರಿಗೆ ಶಾಲೆಯಲ್ಲಿ ಆಹಾರದ ಲಭ್ಯತೆ ಮತ್ತು ಸಮಯದ ವಿಷಯದಲ್ಲಿ ನೆರವಾಗಬೇಕು. ಯಾವ ಸಮಯದಲ್ಲಿ ಇನ್ಸುಲಿನ್ ಹಾಕಬೇಕು ಮತ್ತು ಎಷ್ಟು ಇನ್ಸುಲಿನ್ ಹಾಕಬೇಕು? ವಿದ್ಯಾರ್ಥಿಯು ಅದನ್ನು ಸ್ವಂತವಾಗಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಯಾರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಶಾಲಾ ಆಡಳಿತ ಮಂಡಳಿಯು ಶಾಲಾ ನಿರ್ವಾಹಕರೊಂದಿಗೆ ಚರ್ಚಿಸಬೇಕು.
icon

(7 / 10)

ಶಾಲೆಗೆ ಹೋಗುವ  ವಿದ್ಯಾರ್ಥಿಗಳಿಗೆ ಇನ್ಸುಲಿನ್, ಗ್ಲುಕಗಾನ್, ಆಹಾರ ಮತ್ತು ನೀರನ್ನು ಎಲ್ಲಿ ಸಂಗ್ರಹಿಸಬೇಕು? ವಿದ್ಯಾರ್ಥಿಯು ರಕ್ತದಲ್ಲಿನ ಗ್ಲೂಕೋಸ್ ಮತ್ತು ಮೂತ್ರದ ಕೀಟೋನ್ ಪರೀಕ್ಷೆಗಳನ್ನು ಯಾವಾಗ ಮಾಡಬೇಕು? ಅವನು ಅದನ್ನು ಸ್ವಂತವಾಗಿ ಮಾಡಲು ಸಾಧ್ಯವಾಗದಿದ್ದರೆ, ಯಾರು ಸಹಾಯ ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಅಗತ್ಯ ಶಿಕ್ಷಣ ನೀಡಬೇಕು. ರಕ್ತ ಪರೀಕ್ಷೆ ಎಲ್ಲಿ ಮಾಡಬೇಕು, ರಕ್ತದಲ್ಲಿನ ಸಕ್ಕರೆ ಕಡಿಮೆಯಿದ್ದರೆ ರೋಗಲಕ್ಷಣಗಳು ಯಾವುವು? ಹೀಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಮಕ್ಕಳಿಗೆ ವಿವರಿಸಬೇಕು. 
icon

(8 / 10)

ಮಕ್ಕಳ ತುರ್ತು ಚಿಕಿತ್ಸೆಗೆ ಅಗತ್ಯವಾದ ಗ್ಲೂಕೋಸ್, ಗ್ಲುಕಗಾನ್, ಔಷಧಿಗಳು, ನೀರು ಮತ್ತು ಆಹಾರ ಪದಾರ್ಥಗಳು ಲಭ್ಯವಾಗುವಂತೆ ಪೋಷಕರು ನೋಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಏನು ಮಾಡಬೇಕು? ಫೋನ್ ಮೂಲಕ ಯಾರನ್ನು ಸಂಪರ್ಕಿಸಬೇಕು? ಮಕ್ಕಳು ಯಾರಿಗೆ ಕರೆ ಮಾಡಬಹುದು ಎಂಬ ವಿವರಗಳನ್ನು   ಡೈರಿಯಲ್ಲಿ ಲಭ್ಯವಾಗುವಂತೆ ಮಾಡಿರಿ. ಶಾಲಾ ಶಿಕ್ಷಕರಿಗೆ ಮುಂಚಿತವಾಗಿ ಸೂಚನೆ ನೀಡಬೇಕು.
icon

(9 / 10)

ಆರೋಗ್ಯಕರ ಜೀವನಶೈಲಿಯೊಂದಿಗೆ ಮಧುಮೇಹದ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ಟೈಪ್ 1 ಮತ್ತು ಟೈಪ್ 2 ಮಧುಮೇಹ ಹೊಂದಿರುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ ರೋಗಲಕ್ಷಣ ಕಾಣುವ ಮುಂಚೆಯೇ ಆಹಾರಕ್ರಮದ ಬಗ್ಗೆ ಜಾಗೃತಿ ವಹಿಸಬೇಕು.
icon

(10 / 10)

ಇತರ ಗ್ಯಾಲರಿಗಳು