Gagana Chukki Falls Festival: ಗಗನಚುಕ್ಕಿ ಜಲಪಾತೋತ್ಸವದಲ್ಲಿ ರವಿ ಬಸ್ರೂರು ಗಾನ ವೈಭವ; ಹೀಗಿತ್ತು ಅಪ್ಪಟ ಕನ್ನಡ ಕಲಾವಿದನ ಮೋಡಿ
- Gagana Chukki Falls Festival ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಬಳಿ ನಡೆದ ಜಲಪಾತೋತ್ಸವದಲ್ಲಿ ಎರಡನೇ ದಿನ ನಿರ್ದೇಶಕ, ಗಾಯಕ ರವಿ ಬಸ್ರೂರು( Ravi Basrur) ಸಂಗೀತ ಸಂಜೆ ಇಡೀ ಉತ್ಸವಕ್ಕೆ ಮೆರಗು ನೀಡಿತು. ಹೀಗಿತ್ತು ಆ ಕ್ಷಣಗಳು
- Gagana Chukki Falls Festival ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಬಳಿ ನಡೆದ ಜಲಪಾತೋತ್ಸವದಲ್ಲಿ ಎರಡನೇ ದಿನ ನಿರ್ದೇಶಕ, ಗಾಯಕ ರವಿ ಬಸ್ರೂರು( Ravi Basrur) ಸಂಗೀತ ಸಂಜೆ ಇಡೀ ಉತ್ಸವಕ್ಕೆ ಮೆರಗು ನೀಡಿತು. ಹೀಗಿತ್ತು ಆ ಕ್ಷಣಗಳು
(1 / 8)
ಕನ್ನಡ ಚಿತ್ರ ರಂಗದಲ್ಲಿ ಒಂದು ದಶಕದಿಂದ ಹೆಸರು ಮಾಡಿರುವ ಸಂಗೀತ ನಿರ್ದೇಶಕ, ಗಾಯಕ ಹಾಗೂ ನಿರ್ದೇಶಕ ರವಿ ಬಸ್ರೂರ್ ಅವರ ಸಂಗೀತ ಸಂಜೆ ಗಗನ ಚುಕ್ಕಿ ಜಲಪಾತೋತ್ಸವದಲ್ಲಿ ಜನರ ಖುಷಿಗೆ ಕಾರಣವಾಯಿತು.
(2 / 8)
ಕೆಜಿಎಫ್, ಅಂಜನಿಪುತ್ರ ಸೇರಿದಂತೆ ಹಲವಾರು ಚಿತ್ರಗಳ ಗೀತೆಗಳನ್ನು ಪ್ರಸ್ತುತಪಡಿಸಿದ ರವಿ ಬಸ್ರೂರ್ ಭಾರೀ ಜೋಶ್ ಅನ್ನು ತುಂಬಿದರು.
(3 / 8)
ಅತ್ತ ಕಡೆ ಜಲಪಾತದ ಬೆಳಕಿನ ವೈಭವವಿದ್ದರೆ, ಇತ್ತ ಕಡೆ ವೇದಿಕೆಯಲ್ಲಿ ಬೆಳಕಿನ ಚಿತ್ತಾರಗಳ ನಡುವೆ ರವಿ ಬಸ್ರೂರು ಹಾಡುಗಳ ಮೋಡಿ ಜೋರಾಗಿತ್ತು.
(4 / 8)
ಕನ್ನಡ ಮಾತ್ರವಲ್ಲದೇ ತೆಲುಗು, ತುಳು, ಹಿಂದಿಯಲ್ಲೂ ಕೆಲಸ ಮಾಡುತ್ತಿರುವ ರವಿ ಬಸ್ರೂರು ಹೊಸ ತಲೆಮಾರಿನ ಸ್ಯಾಂಡಲ್ ವುಡ್ ಪ್ರತಿಭೆ. ತಮ್ಮ ತಂಡದೊಂದಿಗೆ ಕನ್ನಡದ ಹಲವು ಹಾಡುಗಳಿಗೆ ದನಿಯಾಗಿ ಉಮೇದು ತುಂಬಿದರು ರವಿ.
(6 / 8)
ಅಂಜನಿ ಪುತ್ರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ದನಿಯಾಗಿ ಭಾರೀ ಗಮನ ಸೆಳೆದ ಚಂದ ಚಂದ ನನ್ ಹೆಂಡ್ತಿ ಹಾಡು ಕೂಡ ರವಿ ಬಸ್ರೂರು ಅವರ ಜನಪ್ರಿಯ ಗೀತೆಯೆ. ಇದಕ್ಕೂ ಭಾರೀ ಸ್ಪಂದನೆ ಜಲಪಾತೋತ್ಸವದಲ್ಲಿ ದೊರೆಯಿತು,
(7 / 8)
ಕೆಜಿಎಫ್ 2 ನ ಹಾಡುಗಳನ್ನೂ ಹಾಡಿದ ರವಿ ಮುಫ್ತಿ, ಬಜಾರ್ ಸಹಿತ ಹಲವು ಚಿತ್ರಗಳ ತಮ್ಮದೇ ಹಾಡಿನ ರಸಗವಳವನ್ನು ಪ್ರವಾಸಿಗರಿಗೆ ಉಣ ಬಡಿಸಿದರು.
ಇತರ ಗ್ಯಾಲರಿಗಳು