Mandya News: ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ರಕ್ಷಣಾ ಬೈಕ್‌ ಗಸ್ತು, 40 ವಾಹನಗಳ ಸೇವೆಗೆ ಚಾಲನೆ, ನೀವು ಕರೆ ಮಾಡಿದರೂ ಬೈಕ್‌ ಬರಲಿವೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mandya News: ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ರಕ್ಷಣಾ ಬೈಕ್‌ ಗಸ್ತು, 40 ವಾಹನಗಳ ಸೇವೆಗೆ ಚಾಲನೆ, ನೀವು ಕರೆ ಮಾಡಿದರೂ ಬೈಕ್‌ ಬರಲಿವೆ Photos

Mandya News: ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ರಕ್ಷಣಾ ಬೈಕ್‌ ಗಸ್ತು, 40 ವಾಹನಗಳ ಸೇವೆಗೆ ಚಾಲನೆ, ನೀವು ಕರೆ ಮಾಡಿದರೂ ಬೈಕ್‌ ಬರಲಿವೆ photos

  • ಮಂಡ್ಯದಲ್ಲಿ( Mandya Police) ಮಹಿಳೆಯರು, ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ವಿಶೇಷ ಬೈಕ್‌ಗಳನ್ನು ಹೊಸ ರೂಪದೊಂದಿಗೆ ಪೊಲೀಸ್‌ ಇಲಾಖೆ ಬಳಕೆಗೆ ಒದಗಿಸಿದೆ. 

ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯಿಂದ ವಿಶೇಷ ಬೈಕ್‌ಗಳ ಸೇವೆಯನ್ನು ಪುನಾರಂಭಿಸಲಾಗಿದೆ.ಸಾರ್ವಜನಿಕರು/ಮಹಿಳೆಯರು ತಮ್ಮ ದೂರುಗಳಿದ್ದಲ್ಲಿ ಮಂಡ್ಯ ಜಿಲ್ಲೆಯ ನಿಸ್ತಂತು ಕೇಂದ್ರದ ದೂ. ಸಂ: 08232-224888 ಗೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಲ್ಲಿ, ಮಾಂಡವ್ಯ ರಕ್ಷಣೆಯ ವಾಹನ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದಾವಿಸಿ ನೆರವು ನೀಡಿಲಿದ್ದಾರೆ.
icon

(1 / 6)

ಮಂಡ್ಯ ಜಿಲ್ಲೆಯಲ್ಲಿ ನಿರ್ಭಯ ಯೋಜನೆಯಡಿ  ಒಟ್ಟು 40 ದ್ವಿಚಕ್ರ ಗಸ್ತು ವಾಹನಗಳಿಗೆ  ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಇಂದು  ಡಿ.ಎ.ಆರ್ ಮೈದಾನದಲ್ಲಿ ಚಾಲನೆ ನೀಡಿದರು. ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಡಿಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್‌ ಆಸಿಫ್‌ ತನ್ವೀರ್‌ ಮತ್ತಿತರರು ಹಾಜರಿದ್ದರು,
icon

(2 / 6)

ಈ ಹಿಂದೆ ನಿರ್ಭಯ ಸ್ಕೀಮ್ ನ ಅಡಿಯಲ್ಲಿ ನೀಡಲಾಗಿದ್ದ ಗಸ್ತು ಬೈಕ್ ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ ಕಾರಣ ಎಲ್ಲಾ ಬೈಕ್ ಗಳಿಗೆ ಹೊಸರೂಪ ಕೊಟ್ಟು, ಬ್ಲಿನ್ಕ್ ಕರ್ಸ್ ಗಳು ಮತ್ತು ಸೈರನ್, ಮೈಕ್ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ. ಇವು 5 ಬೈಕ್ ಗಳಂತೆ ಗುಂಪು ವ್ಯವಸ್ಥೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸತತವಾಗಿ ಸಂಚರಿಸಲಿಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಿದ್ದಗೊಳಿಸಲಾಗಿದೆ  
icon

(3 / 6)

ಮಹಿಳೆಯರ ರಕ್ಷಣೆ, ಅಪರಾಧಗಳನ್ನು ತಡೆಯುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನ ಹತೋಟಿಗೆ ತರುವುದು ದ್ವಿಚಕ್ರ ಗಸ್ತು ವಾಹನ ಚಾಲನ ಕಾರ್ಯಕ್ರಮದ ಉದ್ದೇಶವಾಗಿದೆ.ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಅಪರಾಧವನ್ನು ತಡೆಯಲಿಕ್ಕೆ, ತೊಂದರೆಗೆ ಒಳಗಾದ ಯಾವುದೇ ವ್ಯಕ್ತಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದಾಗ ಅವರನ್ನು ರಕ್ಷಣೆ ಮಾಡಲು ಈ ಬೈಕ್ ಸಹಕಾರಿಯಾಗಿದೆ 
icon

(4 / 6)

ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ 40 ದ್ವಿಚಕ್ರ ಗಸ್ತು ವಾಹನಗಳು ಜಿಲ್ಲೆಯ 07 ತಾಲ್ಲೂಕು ಕೇಂದ್ರಗಳಲ್ಲಿ ಮಹಿಳೆಯರ ರಕ್ಷಣೆ ಹಾಗೂ ಅಪರಾಧ ತಡೆ ಸಂಬಂಧ ಕಾರ್ಯ ನಿರ್ವಹಿಸಲಿವೆ. ಶಾಲಾ ಕಾಲೇಜುಗಳ ಪ್ರಾರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಕಿರುಕುಳ/ಲೈಂಗಿಕ ಕಿರುಕುಳ ಹಾಗೂ ಚುಡಾಯಿಸುವ ಘಟನೆಗಳು ನಡೆಯದಂತೆ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಗಸ್ತು ಮಾಡಿ ರಕ್ಷಣೆ ನೀಡುತ್ತದೆ.  ಮಹಿಳೆಯರು ಹೆಚ್ಚಾಗಿ ಕೆಲಸ ನೀಡುವದ ಸ್ಥಳಗಳು/ ಫ್ಯಾಕ್ಟರಿಗಳು/ ಇತರೆ ಸ್ಥಳಗಳ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರ ಮುಕ್ತ ಚಲನ ವಲನಕ್ಕೆ ಅನುವು ಮಾಡಿ ಮಾಡಿಕೊಡುವುದು. 
icon

(5 / 6)

ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಸಂತೆ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರ ಸರಗಳ್ಳತನ, ಮಹಿಳೆಯರ ಮೇಲೆ ಕಿರುಕುಳ ಹಾಗೂ ಮಹಿಳೆಯರ ಮೇಲಿನ  ದೌರ್ಜನ್ಯ ಪ್ರಕರಣಗಳು ಜರುಗದಂತೆ ಕ್ರಮ ವಹಿಸುವುದು. ಹಬ್ಬ - ಹರಿದಿನಗಳಲ್ಲಿ, ಜಾತ್ರೆ, ದೇವಸ್ಥಾನ, ಮಸೀದಿ,  ಚರ್ಚ್‌ಗಳಂತಹ ಪ್ರದೇಶಗಳಲ್ಲಿ ಜನಸಂದಣಿ ಸಮಯದಲ್ಲಿ ಹೆಚ್ಚು ಗಸ್ತು ಮಾಡಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮಾಡುವುದು. ಜನ ನಿಬಿಡ ಸ್ಥಳಗಳಲ್ಲಿ ಗಸ್ತು ಮಾಡಿ ಮಹಿಳೆಯರ ಮತ್ತು ಮಕ್ಕಳ ಸುಗಮ ಸಂಚಾರ ನಿರ್ವಹಣೆ ಸಂಬಂಧ ಕ್ರಮ ವಹಿಸುವುದು. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ರೌಡಿಗಳು, ಸಮಾಜಘಾತುಕರು, ದುಷ್ಕರ್ಮಿಗಳು ಸಾರ್ವಜನಿಕ ಸ್ಥಳಗಳಲ್ಲಿ  ಗಲಾಟೆ ವಗೈರೆ ಮಾಡದಂತೆ ಮಹಿಳೆಯರ ಮತ್ತು ಮಕ್ಕಳ ಸುಗಮ ಸಂಚಾರಕ್ಕೆ ಕ್ರಮವಹಿಸುವುದು ಇವುಗಳ ಕೆಲಸದ ಭಾಗ.
icon

(6 / 6)

ಇತರ ಗ್ಯಾಲರಿಗಳು