Melkote News:ಮೇಲುಕೋಟೆಯಲ್ಲಿ ವೈರಮುಡಿ ಸಡಗರ, ಹೀಗಿತ್ತು ರಾತ್ರಿಯಿಡೀ ನಡೆದ ಉತ್ಸವ Photos
- ಭಾರತದ ಐತಿಹಾಸಿಕ ಬಹ್ಮೋತ್ಸವಗಳಲ್ಲಿ ಪ್ರಮುಖವಾದ ಮಂಡ್ಯ ಜಿಲ್ಲೆಯ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯವರ ವೈರಮುಡಿ ಕಿರೀಟ ಧಾರಣಮಹೋತ್ಸವ ವಿಜೃಂಭಣೆಯಿಂದ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೂ ನಡೆಯಿತು. ಈ ಬಾರಿಯ ಉತ್ಸವದ ಸಡಗರದ ಕ್ಷಣಗಳು ಹೀಗಿದ್ದವು.
- ಭಾರತದ ಐತಿಹಾಸಿಕ ಬಹ್ಮೋತ್ಸವಗಳಲ್ಲಿ ಪ್ರಮುಖವಾದ ಮಂಡ್ಯ ಜಿಲ್ಲೆಯ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯವರ ವೈರಮುಡಿ ಕಿರೀಟ ಧಾರಣಮಹೋತ್ಸವ ವಿಜೃಂಭಣೆಯಿಂದ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೂ ನಡೆಯಿತು. ಈ ಬಾರಿಯ ಉತ್ಸವದ ಸಡಗರದ ಕ್ಷಣಗಳು ಹೀಗಿದ್ದವು.
(1 / 10)
ಮೇಲುಕೋಟೆಯ ವೈರಮುಡಿ ಉತ್ಸವವೆಂದರೆ ವಿಶೇಷ ಉತ್ಸವ. ದೇಶ ವಿದೇಶದಿಂದಲೂ ಭಕ್ತರು ಆಗಮಿಸುವುದರಿಂದ ಉತ್ಸವಕ್ಕೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಮೇಲುಕೋಟೆಯಲ್ಲಿ ಈ ಬಾರಿ ವೈರಮುಡಿ ಉತ್ಸವಕ್ಕೆ ಝಗಮಗಿಸುವ ಬೆಳಕಿನೊಂದಿಗೆ ಮಿಂಚಿದ ಯೋಗ ನರಸಿಂಹಸ್ವಾಮಿ ಬೆಟ್ಟ.
(2 / 10)
ಮೇಲುಕೋಟೆ ಎಲ್ಲಾ ರಸ್ತೆಗಳಿಗೂ ಝಗಮಗಿಸುವ ದೀಪಾಲಂಕಾರ ಮಾಡಲಾಗಿತ್ತು. ಪ್ರಮುಖ ರಸ್ತೆಗಳು ವಿಭಿನ್ನ ಅಲಂಕಾರದಿಂದ ಉತ್ಸವದಂದು ಗಮನ ಸೆಳೆದವು.
(3 / 10)
ದೇಗುಲ ಮಾತ್ರವಲ್ಲದೇ ಮೇಲುಕೋಟೆಯ ಪ್ರಸಿದ್ಧ ಪ್ರವಾಸಿತಾಣಗಳಾಗಿರುವ ರಾಯ ಗೋಪುರ, ಚೆಲುವ ನಾರಾಯಣ ಸ್ವಾಮಿ ದೇವಾಲಯ, ಅಕ್ಕತಂಗಿಕೊಳ, ಪಂಚಕಲ್ಯಾಣಿ, ಯೋಗಾನರಸಿಂಹ ಸ್ವಾಮಿ ಬೆಟ್ಟಕ್ಕೆ ಆಳವಡಿಸಿದ ದೀಪಾಲಂಕಾರ ವಿಶೇಷವಾಗಿತ್ತು.
(5 / 10)
ಮಂಡ್ಯ ಜಿಲ್ಲಾ ಖಜಾನೆಯಿಂದ ತಂದಿದ್ದ ವಜ್ರಖಚಿತ ವೈರಮುಡಿಯನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಯತೀಶ್‌ಕುಮಾರ್. ಜಿಪಂ ಸಿಇಒ ತನ್ವೀರ್ ಆಸೀಫ್,. ಹೆಚ್ಚುವರಿ ಡಿಸಿ ಡಾ.ನಾಗರಾಜು ದೇಗುಲಕ್ಕೆ ಹಸ್ತಾಂತರಿಸಿದರು.
(6 / 10)
ಮಂಡ್ಯ ಜಿಲ್ಲಾ ಖಜಾನೆಯಿಂದ ತಂದಿದ್ದ ವಜ್ರಖಚಿತ ವೈರಮುಡಿ ಪೆಟ್ಟಿಗೆಯನ್ನು ಭದ್ರತೆಯಲ್ಲಿ ತೆರೆದು ಸಂಪ್ರದಾಯದಂತೆಯೇ ಕಿರೀಟ ಜೋಡಣೆ ಮಾಡಲಾಯಿತು. ಗಂಡುಭೇರುಂಡ ಪದಕ ಸೇರಿದಂತೆ ವಿವಿಧ ಆಭರಣಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿಗಳನ್ನು ನೆರವೇರಿಸಲಾಯಿತು. ರಾತ್ರಿ 8.30ರ ವೇಳೆಗೆ ಉತ್ಸವ ದೇವಾಲಯದಿಂದ ಹೊರ ಪ್ರವೇಶಿಸಿತು.
(7 / 10)
ಮೊದಲ ಬಾರಿಗೆ ಗೆದ್ದಿರುವ ಮೇಲುಕೋಟೆ ಶಾಸಕ ಹಾಗೂ ಸರ್ವೋದಯ ಪಕ್ಷದ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರು ವೈರಮುಡಿ ಮೆರವಣಿಗೆಗೆ ಹೆಗಲು ಕೊಟ್ಟರು. ಇವರೊಂದಿಗೆ ಹಲವು ನಾಯಕರು ಜತೆಯಾದರು.
(8 / 10)
ಮೇಲುಕೋಟೆ ದೇವಾಲಯದ ಸುತ್ತಲೂ ಸಂಜೆಯಿಂದಲೇ ಜಮಾವಣೆಗೊಂಡಿದ್ದ ಸಹಸ್ರಾರು ಭಕ್ತರು ಚೆಲುವ ನಾರಾಯಣ ಸ್ವಾಮಿಯ ಉತ್ಸವ ಬಂದ ತಕ್ಷಣವೇ ಪುಳಕಿತರಾದರು. ಗೋವಿಂದ ಗೋವಿಂದ ನಾಮ ಮೊಳಗಿಸಿ ದೇವರ ದರ್ಶನ ಪಡೆದು ನಮಸ್ಕರಿಸಿದರು. ಉತ್ಸವವು ಶುಕ್ರವಾರ ಬೆಳಗಿನವರೆಗೂ ಸಾಂಗವಾಗಿ ನೆರವೇರಿತು.
(9 / 10)
ಮೇಲುಕೋಟೆಯ ದೇಗುಲದಲ್ಲಿ ನಿತ್ಯರಾಧನೆ, ಯಾಗಶಾಲೆಯಲ್ಲಿ ಶ್ರೀದೇವಿ ಭೂದೇವಿ ಸಮೇತ ಗರುಡಾರೂಢನಾದ ಚೆಲುವ ನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಯಿತು. ನಂತರ ಚೆಲುವ ನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು. ದೇಗುಲದ ಬಳಿ ಉತ್ಸವ ಬಂದಾಗ ಜಯಘೋಷ ಜೋರಾಗಿತ್ತು.
(10 / 10)
ವೈರಮುಡಿ ಉತ್ಸವಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇದ್ದುದರಿಂದ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ವೃತ್ತದಲ್ಲೇ ವೈರಮುಡಿಯನ್ನು ನೇರವಾಗಿ ವಿಕ್ಷೀಸಲು ವ್ಯವಸ್ಥೆ ,ಮಾಡಿಕೊಡಲಾಗಿತ್ತು. ಹೆದ್ದಾರಿಯಿಂದ ಆಸ್ವತ್ರೆಯ ಮುಂಭಾಗದವರೆಗೂ 14 ಕಡೆಗಳಲ್ಲಿ ಪಾರ್ಕಿಂಗ್ ಇತ್ತು. 1500ಕ್ಕೂ ಹೆಚ್ಚು ಹೆಚ್ಚು ಪೊಲೀಸ್ ಇಲಾಖೆ ಸಿಬ್ಬಂದಿ ಉತ್ಸವದ ಭದ್ರತೆಯಲ್ಲಿ ತೊಡಗಿದ್ದರು.
ಇತರ ಗ್ಯಾಲರಿಗಳು