Mangalore News: ಹುಟ್ಟೂರಲ್ಲಿ ರಂಗಕರ್ಮಿ ಬಿ.ವಿ.ಕಾರಂತ ನೆನಪು: ಮಂಚಿಯಲ್ಲಿ 3 ದಿನಗಳ ನಾಟಕೋತ್ಸವ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangalore News: ಹುಟ್ಟೂರಲ್ಲಿ ರಂಗಕರ್ಮಿ ಬಿ.ವಿ.ಕಾರಂತ ನೆನಪು: ಮಂಚಿಯಲ್ಲಿ 3 ದಿನಗಳ ನಾಟಕೋತ್ಸವ Photos

Mangalore News: ಹುಟ್ಟೂರಲ್ಲಿ ರಂಗಕರ್ಮಿ ಬಿ.ವಿ.ಕಾರಂತ ನೆನಪು: ಮಂಚಿಯಲ್ಲಿ 3 ದಿನಗಳ ನಾಟಕೋತ್ಸವ PHOTOS

  • ಬಿ.ವಿ.ಕಾರಂತ ನಾಟಕಾಸಕ್ತರು, ರಂಗಕರ್ಮಿಗಳಿಗೆಲ್ಲರಿಗೂ ಗೊತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿಯ ಬಾಬುಕೋಡಿ ಎಂಬಲ್ಲಿ ಜನಿಸಿದ ಬಾಬುಕೋಡಿ ವೆಂಕಟರಮಣ ಕಾರಂತ ಭಾರತದಾದ್ಯಂತ ಸಂಚರಿಸಿ, ರಂಗಭೂಮಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದವರು.ಹುಟ್ಟೂರಲ್ಲಿ ಅವರ ನೆನಪು ಹೇಗಿದೆ? ಅವರ ನೆನಪಿಗೆ ಆಯೋಜಿಸಿದ್ದ ನಾಟಕೋತ್ಸವದ ನೋಟ ಇದು.
  •  ಮಾಹಿತಿ: ಹರೀಶ ಮಾಂಬಾಡಿ

ರಂಗಭೂಮಿ ದಿಗ್ಗಜ ಬಿ.ವಿ.ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡದಲ್ಲಾದರೂ ಅವರ ಕಾರ್ಯಕ್ಷೇತ್ರ ಇದ್ದುದು ಹೊರಗಡೆಯೇ. ಮೈಸೂರಿನ ರಂಗಾಯಣ ಕಟ್ಟಿದವರು ಅವರೇ. ಮಧ್ಯಪ್ರದೇಶದಲ್ಲಿದ್ದು ರಂಗಭೂಮಿ ಚಟುವಟಿಕೆಗೆ ಹೊಸ ಆಯಾಮ ತಂದವರು ಕಾರಂತರು.
icon

(1 / 7)

ಬಿ.ವಿ.ಕಾರಂತ ಅವರಿಗೆ ಹುಟ್ಟೂರಲ್ಲೂ ಅಭಿಮಾನಿಗಳಿದ್ದಾರೆ. ನಮ್ಮವರು ಎಂಬ ಹೆಮ್ಮೆ ಅವರಿಗಿದೆ. ಹೀಗೆ ಸಮಾನ ಆಸಕ್ತರೆಲ್ಲ ಸೇರಿಕೊಂಡು ಕಳೆದ ಹದಿನೈದು ವರ್ಷಗಳಿಂದ ಸದ್ದಿಲ್ಲದೆ ನಾಟಕೋತ್ಸವ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಕಾರಂತರನ್ನು ನೆನಪಿಸಿಕೊಳ್ಳುತ್ತಾರೆ
icon

(2 / 7)

ಈ ವರ್ಷ ಮೂರು ದಿನಗಳ ನಾಟಕೋತ್ಸವ ಮೇ 17, 18 ಮತ್ತು 19ರಂದು ಸಂಜೆಯ ವೇಳೆ ಶಿವಮೊಗ್ಗದ ತಂಡಗಳಿಂದ ಪ್ರದರ್ಶನಗೊಂಡವು. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ) ಅಧ್ಯಕ್ಷ ಕಜೆ ರಾಮಚಂದ್ರ ಭಟ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಡಿಸಿತ್ತು. 
icon

(3 / 7)

ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.ಶುಕ್ರವಾರ ಆರಂಭಗೊಂಡ ನಾಟಕ ಭಾನುವಾರ ಸಮಾಪನಗೊಂಡಿತು. 
icon

(4 / 7)

ಮೊದಲ ದಿನ ನಟಮಿತ್ರರು ತೀರ್ಥಹಳ್ಳಿ ಅವರಿಂದ ಸಂಸಾರದಲ್ಲಿ ಸನಿದಪ ಎಂಬ ಕನ್ನಡ ನಾಟಕ ಪ್ರದರ್ಶನಗೊಂಡಿತು. ದಾರಿಯೋ ಪೋ ಮೂಲರೂಪದ ನಾಟಕವನ್ನು ಕೆ.ವಿ.ಅಕ್ಷರ ಮರುರೂಪಕ್ಕಿಳಿಸಿದ್ದು, ಶಿವಕುಮಾರ ತೀರ್ಥಹಳ್ಳಿ ಬೆಳಕು ಮತ್ತು ನಿರ್ದೇಶನ ಹಾಗೂ ಶ್ರೀಪಾದ ತೀರ್ಥಹಳ್ಳಿ ಸಂಗೀತ ನೀಡಿದ್ದಾರೆ.
icon

(5 / 7)

ಎರಡನೇ ದಿನ ಅಭಿನಯ ಶಿವಮೊಗ್ಗ ಅವರಿಂದ ಪೀಠಾರೋಹಣ ನಾಟಕ ಪ್ರಸ್ತುತಗೊಂಡಿತು. ಪ್ರೊ.ಎಸ್.ಸಿ.ಗೌರೀಶಂಕರ ರಚನೆ ಮತ್ತು ನಿರ್ದೇಶನದ ನಾಟಕಕ್ಕೆ ರಾಘವೇಂದ್ರ ಪ್ರಭು, ಶ್ರೀಪಾದ ತೀರ್ಥಹಳ್ಳಿ ಸಂಗೀತವಿತ್ತು. ಶಂಕರ್ ಬೆಳಕಿನ ವಿನ್ಯಾಸ ನೀಡಿದರು.
icon

(6 / 7)

ಭಾನುವಾರ ರಾತ್ರಿ ನಿಕೊಲಯ್ ಗೊಗೋಲ್ ಮೂಲದ ಪ್ರೊ.ಎಸ್.ಸಿ.ಗೌರಿಶಂಕರ ರೂಪಾಂತರದ ಹಾಗೂ ನಿರ್ದೇಶನದ ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ ಪ್ರಸ್ತುತಿಯ ಮಹಾಬಲಯ್ಯನ ಕೋಟು ನಾಟಕ ಪ್ರದರ್ಶನಗೊಂಡಿತು. ಬೆಳಕು ಬೆಳಲಕಟ್ಟೆ ಶಂಕರ, ಸಂಗೀತ ಶ್ರೀಪಾದ ತೀರ್ಥಹಳ್ಳಿ, ಶಿವಕುಮಾರ ತೀರ್ಥಹಳ್ಳಿ, ವಿನ್ಯಾಸ ಮಂಜುನಾಥ ಸ್ವಾಮಿ, ರಂಗಸಜ್ಜಿಕೆ ನಾಗಶಯನ ಹಾಗೂ ರಂಗನಿರ್ವಹಣೆ ಪ್ರತೀಕ್ ಸಿ.ಎಂ. ನಾಟಕಕ್ಕಿತ್ತು 
icon

(7 / 7)

ಇತರ ಗ್ಯಾಲರಿಗಳು