ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸಾಗಿದ 14 ಸ್ತಬ್ದಚಿತ್ರಗಳಿಗೆ ಬಹುಮಾನ; ಮಂಡ್ಯ, ಧಾರವಾಡ, ಚಾಮರಾಜನಗರ ಜಿಲ್ಲೆಗೆ ಮೊದಲ ಮೂರು ಸ್ಥಾನ
- ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಮಾಹಿತಿ ನೀಡುವ ಜತೆಗೆ ಜನಮನ ಸೆಳೆಯುವ ವಿವಿಧ ಸ್ತಬ್ಧಚಿತ್ರಗಳಿಗೆ ಈ ಬಾರಿ ಬಹುಮಾನ ಲಭಿಸಿದೆ. ಅದರ ವಿವರ ಇಲ್ಲಿದೆ.
- ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಮಾಹಿತಿ ನೀಡುವ ಜತೆಗೆ ಜನಮನ ಸೆಳೆಯುವ ವಿವಿಧ ಸ್ತಬ್ಧಚಿತ್ರಗಳಿಗೆ ಈ ಬಾರಿ ಬಹುಮಾನ ಲಭಿಸಿದೆ. ಅದರ ವಿವರ ಇಲ್ಲಿದೆ.
(1 / 8)
ಮೈಸೂರು ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಮಂಡ್ಯ ಜಿಲ್ಲೆ ಸಾದರಪಡಿಸಿದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಆಣೆಕಟ್ಟು ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಪಡೆದಿದೆ.
(2 / 8)
ಧಾರವಾಡ ಜಿಲ್ಲಾ ಪಂಚಾಯಿತಿಯವರು ಅಣಿಗೊಳಿಸಿದ್ದ ಇಸ್ರೋ ಗಗನ ಯಾನದಲ್ಲಿ ಹಣ್ಣಿನ ನೋಟಗಳು ಎನ್ನುವ ಸ್ತಬ್ಧಚಿತ್ರಕ್ಕೆ ಎರಡನೇ ಬಹುಮಾನ ಸಿಕ್ಕಿದೆ.
(3 / 8)
ಚಾಮರಾಜನಗರ ಜಿಲ್ಲೆಯವರು ರೂಪಿಸಿದ್ದ ಸೋಲಿಗರ ಸೊಗಡು ನೀ ಒಮ್ಮೆ ಬಂದು ನೋಡು ಎನ್ನುವ ಪರಿಕಲ್ಪನೆಯ ಸ್ತಬ್ಧಚಿತ್ರ ಮೂರನೇ ಸ್ಥಾನ ಪಡೆದುಕೊಂಡಿದೆ.
(5 / 8)
ಇಲಾಖೆಗಳು, ನಿಗಮ ಮಂಡಳಿಗಳ ವಿಭಾಗದಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಸ್ತಬ್ಧಚಿತ್ರವು ಪ್ರಥಮ ಬಹುಮಾನ ಗಳಿಸಿದೆ
(6 / 8)
ಕರ್ನಾಟಕದಲ್ಲಿ ಜಾರಿಯಾಗಿರುವ ಗ್ರಾಮೀಣ ಕುಡಿಯುವ ನೀರಿನ ಕುರಿತಾಗಿ ಜಾಗೃತಿ ಮೂಡಿಸಿದ ಸ್ತಬ್ಧಚಿತ್ರಕ್ಕೆ ಎರಡನೇ ಬಹುಮಾನ ಸಂದಿದೆ.
(7 / 8)
ಕರ್ನಾಟಕದ ಪರಿಸರ ಪ್ರವಾಸೋದ್ಯಮದ ಮಹತ್ವ ಸಾರುವ ಜಂಗಲ್ ರೆಸಾರ್ಟ್ ಲಿಮಿಟೆಡ್‌ನ ಸ್ತಬ್ಧಚಿತ್ರಕ್ಕೆ ಸಮಾಧಾನಕರ ಬಹುಮಾನ ಸಿಕ್ಕಿದೆ.
ಇತರ ಗ್ಯಾಲರಿಗಳು