ಮೈಸೂರು ದಸರಾ ಸಂಭ್ರಮದಲ್ಲಿ ರೋಡ್ ಕಿಂಗ್ ಯೆಜ್ಡಿ ಬೈಕ್‌ಗಳ ಅಬ್ಬರ; ಗಮನ ಸೆಳೆದ ರೆಟ್ರೋ ಶೈಲಿಯ ಮೆರವಣಿಗೆ photos
ಒಂದು ಕಾಲಕ್ಕೆ ಮೈಸೂರು ನಗರಕ್ಕೆ ಹೆಸರು ತಂದಿದ್ದ ಯೆಜ್ಡಿ ಬೈಕುಗಳನ್ನು ಈಗಲೂ ಬಳಸುವವರು ಇದ್ದಾರೆ. ಹೆರಿಟೇಜ್ ಮೌಲ್ಯ ಪಡೆದಿರುವ ಈ ಬೈಕ್‌ಗಳ ಮೆರವಣಿಗೆಯನ್ನು ಮೈಸೂರು ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿತ್ತು.
(1 / 6)
ಮೈಸೂರಿನ ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಗೆ ಚಾಲನೆ ನೀಡಲಾಯಿತು.
(2 / 6)
ಈ ಬಾರಿ ಹೆರಿಟೇಜ್ ಮೌಲ್ಯ ಹೆಚ್ಚಿಸಲು ಜಾವಾ ಬೈಕ್ ಸವಾರಿ ಮಾಡುವುದರ ಜೊತೆ ಇನ್ನು ವಿಭಿನ್ನವಾದ ವಿಶಿಷ್ಟತೆಗಳಿಂದ ಜನರ ಗಮನ ಸೆಳೆದು ಪರಂಪರೆ ಕಟ್ಟಡಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡೋಣ ಎನ್ನುವ ರೀತಿಯಲ್ಲಿ ಈ ಬಾರಿ ಬೈಕ್ ಸವಾರಿಯನ್ನು ಹಮ್ಮಿಕೊಳ್ಳಲಾಗಿದೆ
(3 / 6)
ಮೈಸೂರಿನಲ್ಲಿ ಹಲವಾರು ವರ್ಷಗಳಿಂದಲೂ ಬಳಕೆ ಮಾಡುತ್ತಿರುವ ಜಾವಾ ಕಂಪೆನಿಯ ಯೆಜ್ಡಿ ಬೈಕ್‌ಗಳನ್ನು ಬಳಸುತ್ತಿರುವವರು ಉತ್ಸಾಹದಿಂದಲೇ ಭಾಗಿಯಾದರು,
(5 / 6)
ಜಾವಾ ಮೋಟಾರ್ ಬೈಕ್ ಸವಾರಿಯ ಪುರ ಭವನದಿಂದ ಹೊರಟು ದೊಡ್ಡ ಗಡಿಯಾರ ಚಾಮರಾಜ ಒಡೆಯರ್ ವೃತ್ತ ಕೆ ಆರ್ ಸರ್ಕಲ್ ಬನ್ಮಯ್ಯ ಕಾಲೇಜು ಕಾಡಾ ಕಛೇರಿ ಹಾರ್ಡಿಕ್ ಸರ್ಕಲ್ ಎಸ್ ಐ ಆರ್ ಡಿ ಲಲಿತಮಹಲ್ ಟೇರಿಷಿಯನ್ ಕಾಲೇಜು ಪಿ ಟಿ ಸರ್ಕಲ್ ವಸಂತ ಮಹಲ್ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.
(ರವಿ ಕೀರ್ತಿಗೌಡ)ಇತರ ಗ್ಯಾಲರಿಗಳು