Mysore Dasara 2024: ಮೈಸೂರು ದಸರಾ ಆನೆಗಳ ನಿತ್ಯದ ಸ್ನಾನ ಹೇಗಿರುತ್ತದೆ: ಅರಮನೆ ಅಂಗಳದ ಸ್ನಾನದ ತೊಟ್ಟಿಯಲ್ಲಿ ಮಜ್ಜನದ ನೋಟ ಹೀಗಿದೆ photos
- Mysore Dasara Elephants ಆನೆಗಳಿಗೆ ನೀರೆಂದರೆ ಪಂಚ ಪ್ರಾಣ. ಮೈಸೂರು ದಸರಾಗೆ ಬರುವ ಆನೆಗಳಿಗೆ ಹೊಳೆಯ ವ್ಯವಸ್ಥೆ ಇಲ್ಲ. ಆದರೆ ಅರಮನೆ ಆವರಣದಲ್ಲಿಯೇ ಪುಟ್ಟ ಕೊಳ ನಿರ್ಮಿಸಿ ನಿತ್ಯ ಮಜ್ಜನ ಸೇವೆ ನಡೆಯುತ್ತದೆ. ಅದರ ನೋಟ ಇಲ್ಲಿದೆ.
- Mysore Dasara Elephants ಆನೆಗಳಿಗೆ ನೀರೆಂದರೆ ಪಂಚ ಪ್ರಾಣ. ಮೈಸೂರು ದಸರಾಗೆ ಬರುವ ಆನೆಗಳಿಗೆ ಹೊಳೆಯ ವ್ಯವಸ್ಥೆ ಇಲ್ಲ. ಆದರೆ ಅರಮನೆ ಆವರಣದಲ್ಲಿಯೇ ಪುಟ್ಟ ಕೊಳ ನಿರ್ಮಿಸಿ ನಿತ್ಯ ಮಜ್ಜನ ಸೇವೆ ನಡೆಯುತ್ತದೆ. ಅದರ ನೋಟ ಇಲ್ಲಿದೆ.
(1 / 8)
ಕಾಡಿನಲ್ಲಾದರೆ ಸ್ನಾನದ ಗೊಡವೆಯಿಲ್ಲ. ಕಾಡಿಗೆ ಬಿಟ್ಟಾಗ ನೀರಿನಲ್ಲಿ ಈಜಾಡಿಕೊಂಡು ಬಂದರೆ ಮುಗಿಯಿತು. ಸಮಯ ಸಿಕ್ಕಾಗ ಸ್ನಾನ ಮಾಡಿಸಲಾಗುತ್ತದೆ. ಆದರೆ ಮೈಸೂರು ದಸರಾಗೆ ಬಂದಾಗ ಹಾಗಲ್ಲ. ಇಲ್ಲಿ ನಿತ್ಯ ಮಜ್ಜನ.
(2 / 8)
ದಸರಾಗೆ ಬರುವ ಆನೆಗಳಿಗೆ ವಿಶೇಷ ಆತಿಥ್ಯ ಇದ್ದೇ ಇರುತ್ತದೆ. ಅರಮನೆ ಆವರಣದಲ್ಲಿ ಅವುಗಳಿಗಾಗಿಯೇ ಕೊಳವನ್ನು ನಿರ್ಮಿಸಿ ಅಲ್ಲಿ ನೀರು ಬಿಟ್ಟು ಸ್ನಾನ ಮಾಡಿಸಲಾಗುತ್ತದೆ.
(3 / 8)
ಪ್ರತಿ ದಿನ ಆನೆಗಳಿಗೆ ಎಣ್ಣೆ ಹಚ್ಚಿ ದೇಹ ತಂಪಾಗಿಡಲಾಗುತ್ತದೆ. ಇದರಿಂದ ಮರು ದಿನ ಚೆನ್ನಾಗಿ ನೀರು ಹಾಕಿ ದೇಹವನ್ನು ಉಜ್ಜಿ ಆನೆಯನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತದೆ.
(4 / 8)
ಆನೆಗಳು ಬೆಳಗಿನ ವಾಯುವಿಹಾರನ್ನು ಬೇಗನೇ ಆರಂಭಿಸುತ್ತವೆ. ಸುಮಾರು ಮೂರು ಗಂಟೆ ಕಾಲ ವಿಹಾರ, ತಾಲೀಮುಗಳನ್ನು ಮುಗಿಸಕೊಂಡು ಬಂದರೆ ಅವುಗಳಿಗೆ ಸ್ನಾನದ ಸಮಯ,
(5 / 8)
ಮಧ್ಯಾಹ್ನ ಸುಮಾರು ಒಂದರಿಂದ ಎರಡು ಗಂಟೆ ಕಾಲ ಆನೆಗಳ ಮಜ್ಜನದ ಸಮಯ. ಸಿಬ್ಬಂದಿಗಳು ಪೈಪ್ ಮೂಲಕ ನೀರನ್ನು ಆನೆಗಳಿಗೆ ನೀಡುತ್ತಾರೆ. ನೀರು ಸೇವಿಸಿ ಸ್ನಾನಕ್ಕೆ ಅಣಿಯಾಗುತ್ತವೆ ಆನೆಗಳು.
(6 / 8)
ಅಲ್ಲಿಂದ ಆನೆಗಳ ದೇಹದ ಪ್ರತಿ ಭಾಗವನ್ನೂ ಆನೆ ಕವಾಡಿಗರು ಹಾಗೂ ಸಿಬ್ಬಂದಿ ತಿಕ್ಕಿ ತೊಳೆಯುತ್ತದೆ. ನೀರಿನಲ್ಲಿ ಎಷ್ಟು ಹೊತ್ತು ಬಿಟ್ಟಿದ್ದರೂ ಆನೆಗಳಿಗೆ ಖುಷಿಯೋ ಖುಷಿ. ಇದರಿಂದ ನಿರುಮ್ಳಳವಾಗಿ ಆನೆಗಳು ಅರಮನೆ ಆವರಣದ ಸ್ನಾನದ ತೊಟ್ಟಿಯಲ್ಲಿ ಮಲಗುತ್ತವೆ.
(7 / 8)
ಕೆಲವು ಆನೆಗಳಂತೂ ನೀರಿನ ಮೇಲೆ ಏಳುವುದೇ ಇಲ್ಲ. ಇನ್ನಷ್ಟು ನೀರು ಹಾಕುವಂತೆ ಹಠ ಹಿಡಿಯುವುದೂ ಉಂಟು. ಆದರೆ ಮಾವುತ ಹಾಗೂ ಕವಾಡಿಗರು ಅವುಗಳಿಗೆ ನೀರಿನ ಸೇವೆ ಮುಗಿಸಿ ಮೇಲಕ್ಕೆ ಕರೆ ತರುತ್ತಾರೆ.
ಇತರ ಗ್ಯಾಲರಿಗಳು