ಮೈಸೂರು ದಸರಾದಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್ ವೈಭವ; ಕನಕದಾಸರ ಕೀರ್ತನೆ , ತುಳಸಿದಾಸರ ಕೃತಿ, ಎಆರ್ ರಹಮಾನ್ ಗೀತ ಗುಚ್ಚದ ಸವಿ
- ಭಾರತದಲ್ಲೇ ಅತಿ ವಿಭಿನ್ನ ಪೊಲೀಸ್ ಬ್ಯಾಂಡ್ ಇರುವುದು ಕರ್ನಾಟಕದ ಮೈಸೂರಿನಲ್ಲಿ. ಕನ್ನಡ, ಇಂಗ್ಲೀಷ್, ಹಿಂದಿ ಸಹಿತ ಹಲವು ಭಾಷೆಗಳ ಗೀತೆ, ಕೃತಿಗಳನ್ನು ಬ್ಯಾಂಡ್ ಮೂಲಕ ಪೊಲೀಸರು ನುಡಿಸುವುದನ್ನು ಕೇಳುವುದೇ ಚಂದ. ಮೈಸೂರು ಅರಮನೆ ಆವರಣದಲ್ಲಿ ಈ ಬಾರಿಯು ಪ್ರದರ್ಶನ ಗಮನ ಸೆಳೆಯಿತು.

(1 / 7)
ಕರ್ನಾಟಕದ ವಿವಿಧ ಜಿಲ್ಲೆಗಳ 400 ಕ್ಕಿಂತಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡಗಳಿಂದ ಆಕರ್ಷಕ ರೀತಿಯಲ್ಲಿ ವಿವಿಧ ವಿನ್ಯಾಸಗಳ ಸಾಮೂಹ ವಾದ್ಯಮೇಳವನ್ನು ಪ್ರದರ್ಶಿಸಲಾಯಿತು.
(2 / 7)
ಅರಮನೆ ಬೆಳಕಿನ ನಡುವೆ ಕರ್ನಾಟಕ ಪೊಲೀಸ್ ಬ್ಯಾಂಡ್ ಕಲಾವಿದರು ಕನಕದಾಸರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ಗೀತೆ ನುಡಿಸಿ ಮೆಚ್ಚುಗೆ ಪಡೆದರು.
(3 / 7)
ಮಧ್ವಾಚಾರ್ಯರ ಕೃತಿಯಾದ ಪ್ರೇಣಯಾಮೋ ವಾಸುದೇವಂ ವಾದ್ಯಕ್ಕೆ ಜನರು ಮನಸೋತರು. ಸಂತ ತುಳಸಿದಾಸರ ಕೃತಿಯಾದ ಶ್ರೀ ರಾಮಚಂದ್ರ ಕೃಪಾಲು ಭಜಮನ ವಾದ್ಯಗಳನ್ನು ಕರ್ನಾಟಕ ವಾದ್ಯವೃಂದದವರು ಪ್ರಸ್ತುತಿ ಪಡಿಸಿದರು.
(4 / 7)
ಆಂಗ್ಲ ವಾದ್ಯ ವೃಂದದವರು ಹರ್ಮನ್ ಸ್ಪಾರ್ಕ್ ಅವರ ಲೈಟ್ ಕವಾಲಿ, ಎ ಆರ್ ರೆಹಮಾನ್ ಅವರ ಯಶಸ್ವಿ ಆರು ಗೀತೆಗಳನ್ನು ಒಟ್ಟುಗೂಡಿಸಿ ಪ್ರಸ್ತುತಪಡಿಸಿದ್ದು ವಿಶೇಷ.
(5 / 7)
ಕರ್ನಾಟಕ ವಾದ್ಯವೃಂದ ಮತ್ತು ಆಂಗ್ಲ ವಾದ್ಯವೃಂದದವರು ಡಾ.ಎಲ್ ಸುಬ್ರಹ್ಮಣ್ಯ ಅವರ ಕನ್ವರ್ಜೇಷನ್ ಎಂಬ ಸಂಯೋಜನೆಯ ಜುಗಲ್ ಬಂದಿ ನಡೆಸಿದರು.
(6 / 7)
ಬಹು ವಾದ್ಯೋಪಕರಣಗಳನ್ನು ಬಳಸಿ ತಮ್ಮದೇ ಆದ ಶೈಲಿಯ ವಾದ್ಯಮೇಳವನ್ನು ನೆರೆದಿದ್ದಂತಹ ಜನ ಸಾಗರದ ಮುಂದೆ ಪ್ರದರ್ಶಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಇತರ ಗ್ಯಾಲರಿಗಳು