Mysore Tourism: ಮೈಸೂರಿನ ಶತಮಾನದ ಹಾದಿಯಲ್ಲಿರುವ ಲಲಿತಮಹಲ್ ಹೊಟೇಲ್ ಇನ್ನು ಖಾಸಗಿ ನಿರ್ವಹಣೆ, ಈ ನಿರ್ಧಾರ ಏಕೆ
Mysore Tourism: ಮೈಸೂರಿನ ಐತಿಹಾಸಿಕ ಲಲಿತ್ ಮಹಲ್ ಹೊಟೇಲ್ ಅನ್ನು ಖಾಸಗಿ ನಿರ್ವಹಣೆಗೆ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಟೆಂಡರ್ ಕರೆಯುವ ಪ್ರಕ್ರಿಯೆ ಶುರುವಾಗಲಿದೆ.
(1 / 6)
ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ , ನಿರ್ವಹಣೆಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಿಂದ ಟೆಂಡರ್ ಮೂಲಕ ಹೋಟೆಲ್ ಆಪರೇಟರ್ನ್ನು ಆಯ್ಕೆ ಮಾಡಲು ಅನುಮೋದನೆ ನೀಡಲಾಗಿದೆ(Akhilesh gowda)
(2 / 6)
ಪಂಚತಾರಾ ಹೋಟೆಲ್ ಗಳ ಸಮರ್ಪಕ ನಿರ್ವಹಣೆಯ ಸಲುವಾಗಿ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡದ ಪುನರ್ ನಿರ್ಮಾಣ,ನವೀಕರಣ,ನಿವರ್ಹಣೆ ಗಾಗಿ ಖಾಸಗಿಯವರಿಂದ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮತಿ ನೀಡಿದೆ.
(3 / 6)
ಕೇಂದ್ರ ಸರ್ಕಾರಿ ಸ್ವಾಮ್ಯದ ಐಟಿಡಿಸಿ ನಂತರ ಸದ್ಯ ಕರ್ನಾಟಕ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್ ಲಿಮಿಟೆಡ್‌ನ ಸುಪರ್ದಿಯಲ್ಲಿರುವ ಮೈಸೂರಿನ ಲಲಿತ್ ಮಹಲ್ ಹೊಟೇಲ್ ಖಾಸಗಿ ನಿರ್ವಹಣೆಯ ಮೂಲಕ ಉತ್ತಮ ಲಾಭ ಹಾಗೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎನ್ನುವ ಲೆಕ್ಕಾಚಾರ ಹೊಂದಲಾಗಿದೆ.
(4 / 6)
ಯೂರೋಪ್ ಪ್ರವಾಸಿಗರು ಉಳಿದುಕೊಳ್ಳಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1930ರಲ್ಲಿ ಈ ಮಹಲ್ ನಿರ್ಮಿಸಿದ್ದರು. ಲಂಡನ್ ಕಟ್ಟಡಗಳ ವಿನ್ಯಾಸ ಆಧಾರವಾಗಿ ಇಟ್ಟುಕೊಂಡು ಮಹಾರಾಜರು, 52 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿದರು.
(5 / 6)
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಈ ಹೋಟೆಲ್ ನಿರ್ವಹಣೆಯನ್ನು ಮೊದಲಿಗೆ ಕೇಂದ್ರ ಸ್ವಾಮ್ಯದ ಐಟಿಡಿಸಿ ನಿರ್ವಹಿಸುತ್ತಿತ್ತು. 2018ರಲ್ಲಿ ಕರ್ನಾಟಕ ಸರ್ಕಾರಕ್ಕೆ ಇದನ್ನು ಹಸ್ತಾಂತರ ಮಾಡಲಾಯಿತು, ನಂತರ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಯ ಜೆಎಲ್‌ಆರ್ ಲಲಿತ ಮಹಲ್ ನಿರ್ವಹಣೆ ಮಾಡುತ್ತಿದೆ.
ಇತರ ಗ್ಯಾಲರಿಗಳು