Karnataka News Live December 1, 2024 : ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ದುರ್ಮರಣ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 01 Dec 202405:45 PM IST
ಹಾಸನ: ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಮಧ್ಯಪ್ರದೇಶ ಮೂಲದ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಹರ್ಷವರ್ಧನ್ ಸಾವನ್ನಪ್ಪಿದ್ದಾರೆ.
Sun, 01 Dec 202403:40 PM IST
- ಡಿಸೆಂಬರ್ 9ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನಕ್ಕೆ 13 ಕೋಟಿ ರೂ ಅಂದಾಜುಪಟ್ಟಿಯನ್ನು ಜಿಲ್ಲಾಡಳಿತ ಸಲ್ಲಿಸಿದೆ. ಊಟ ವಸತಿ ಸಾರಿಗೆಗಾಗಿಯೇ ಬಹುತೇಕ ವೆಚ್ಚ ಖರ್ಚಾಗಲಿದೆ. (ವರದಿ-ಎಚ್ ಮಾರುತಿ)
Sun, 01 Dec 202402:56 PM IST
- ಮುಡಾ ಹಗರಣದಿಂದ ಕಳೆದುಹೋಗಿರುವ ಇಮೇಜ್ ಅನ್ನು ಮರುಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಏರ್ಪಡಿಸಲಾಗಿದೆ. ಆದರೆ ಪಕ್ಷ, ಚಿನ್ಹೆ ಅಡಿಯಲ್ಲಿ ಸಮಾವೇಶಕ್ಕೆ ಡಿಸಿಎಂ ಹರಸಾಹಸಪಡುತ್ತಿದ್ದಾರೆ. ಆದರೆ ಬೆಂಬಲ ಸಿಗುತ್ತಿಲ್ಲ. (ವರದಿ: ಎಚ್.ಮಾರುತಿ)
Sun, 01 Dec 202412:20 PM IST
- Cook Resume: ಅಡುಗೆ ಕೆಲಸಕ್ಕಾಗಿ ಭಿನ್ನ, ವಿಭಿನ್ನ, ವಿನೂತನವಾಗಿ ಸಿದ್ದಪಡಿಸಿದ ರೆಸ್ಯೂಮ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ರೆಸ್ಯೂಮ್ಗೆ ಎಲ್ಲರೂ ಫಿದಾ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Sun, 01 Dec 202410:05 AM IST
- Hubli Dharwad Crime News: ತಂದೆಯನ್ನು ಕೊಲೆಗೈದು ಪರಾರಿಯಾಗಿದ್ದ ಮಗ ಮತ್ತು ಸೊಸೆಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಪ್ಪ ಮಾಡಿದ ಸಾಲಕ್ಕೆ ಸರಪಳಿ ಹಾಕಿದ್ದ ಮಗನನ್ನು ರಕ್ಷಿಸಲಾಗಿದೆ.
Sun, 01 Dec 202409:00 AM IST
Dharmasthala Laksha Deepotsava: ಸರ್ವಧರ್ಮ ಸಮನ್ವಯದ ಕ್ಷೇತ್ರದ ಸರ್ವಧರ್ಮ ಸಮ್ಮೇಳನ ಸಂಪನ್ನವಾಗಿದೆ. ಭಕ್ತರ ಪ್ರೀತಿಗೆ ಶರಣೆಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಲೌಕಿಕ ಹಾಗೂ ಪಾರಮಾರ್ಥಿಕ ಎರಡು ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇವೆ ಎಂದು ಹೇಳಿದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Sun, 01 Dec 202407:55 AM IST
Dharmasthala Laksha Deepotsava 2024: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಅಂಗವಾಗಿ ಶುಕ್ರವಾರ, ಶನಿವಾರ 92ನೇ ಸರ್ವಧರ್ಮ, ಸಾಹಿತ್ಯ ಸಮ್ಮೇಳನ ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.
Sun, 01 Dec 202407:51 AM IST
ಜಾತಿ ನಿಂದನೆ ಪ್ರಕರಣ ಕೇಸ್‌ನಲ್ಲಿ ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಇದಕ್ಕೂ ಮೊದಲು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಆಡಿಯೋದಲ್ಲಿರುವ ಧ್ವನಿಯಲ್ಲಿ ಜಾತಿ ನಿಂದನೆಯ ಧ್ವನಿ ಮುನಿರತ್ನ ಅವರ ಧ್ವನಿ ಎಂದು ದೃಢಪಟ್ಟಿತ್ತು. ಇದಲ್ಲದೆ ಹೊಸ ಕೇಸ್ ಕೂಡ ಮುನಿರತ್ನ ವಿರುದ್ಧ ದಾಖಲಾಗಿದೆ. (ವರದಿ-ಎಚ್. ಮಾರುತಿ, ಬೆಂಗಳೂರು)
Sun, 01 Dec 202406:42 AM IST
Bharatanatyam Rangarohana: ಬೆಂಗಳೂರು ಕೃಷ್ಣದೇವರಾಯ ರಂಗಮಂದಿರದಲ್ಲಿ ಭರತನಾಟ್ಯ ರಂಗಾರೋಹಣಕ್ಕೆ ಶ್ರೀನಿಧಿ ಹೆಗಡೆ ಸಜ್ಜಾಗಿದ್ದು ಇಂದು ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಗುರು ಸುಪರ್ಣಾ ವೆಂಕಟೇಶ್ ಸಾರಥ್ಯದ ಈ ಕಾರ್ಯಕ್ರಮದ ಮೂಲಕ ಶ್ರೀನಿಧಿ ಹೆಗಡೆ ಭರತನಾಟ್ಯ ರಂಗಯಾನ ಶುರುವಾಗಲಿದೆ. (ಲೇಖನ- ಶಿವಮೊಗ್ಗ ರಾಮ್)
Sun, 01 Dec 202405:00 AM IST
Cyclone Fengal Effect: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ತಾಪಮಾನ ಕುಸಿದಿದೆ. ಶನಿವಾರ ರಾತ್ರಿಯೇ ಮಳೆ ಸುರಿಯುತ್ತಿದ್ದು, ಭಾನುವಾರ ಬೆಳ್ಳಂಬೆಳಗ್ಗೆ ಹನಿ ಮಳೆ ಕಾಡಿದೆ. ನಾಳೆ ಕೂಡ ಭಾರಿ ಮಳೆ ಸಾಧ್ಯತೆ ಇರುವಾ ಕಾರಣ, ಅಧಿಕಾರಿಗಳ ಭಾನುವಾರದ ರಜೆಯನ್ನು ಬಿಬಿಎಂಪಿ ರದ್ದುಗೊಳಿಸಿದ್ದು, ಮುಂಜಾಗ್ರತಾ ಕ್ರಮ ಜರುಗಿಸುವಂತೆ ಸೂಚಿಸಿದೆ.
Sun, 01 Dec 202402:45 AM IST
- Karnataka Congress New Chief: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರ ನೇಮಕದ ಚರ್ಚೆಗಳೂ ಶುರುವಾಗಿದೆ.ಯಾರು ಅಧ್ಯಕ್ಷರಾಗಿ ನೇಮಕಗೊಳ್ಳಬಹುದು ಎನ್ನುವ ಕುರಿತ ರಾಜಕೀಯ ವಿಶ್ಲೇಷಣೆ ಇಲ್ಲಿದೆ.
Sun, 01 Dec 202401:45 AM IST
- Aero India 2025 Registration: ಏರೋ ಇಂಡಿಯಾ 2025 ಮೊದಲ ಮೂರು ದಿನಗಳು ವ್ಯಾಪಾರ ಸಂಬಂಧಿ ಚಟುವಟಿಕೆ, ವಹಿವಾಟುದಾರರಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಅಂದರೆ ಫೆಬ್ರವರಿ 13 ಹಾಗೂ 14 ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರದರ್ಶನವು ಪ್ರತಿದಿನ ಬೆಳಿಗೆ 09ರಿಂದ ರಿಂದ ಸಂಜೆ 06 ವರೆಗೆ ನಡೆಯುತ್ತದೆ. ಇದಕ್ಕಾಗಿ ನೋಂದಣಿ ಮಾಡಿಸಲು ಮಾಹಿತಿ ಇಲ್ಲಿದೆ.
Sun, 01 Dec 202401:22 AM IST
Cyclone Fengal: ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡು, ಪುದುಚೇರಿ, ಕೇರಳ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗಬಹುದು ಉಳಿದೆಡೆ ಒಣಹವೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.