ಕೊನೆಗೂ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಮಣಿದ ಪಿಸಿಬಿ; ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊನೆಗೂ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಮಣಿದ ಪಿಸಿಬಿ; ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆ

ಕೊನೆಗೂ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಮಣಿದ ಪಿಸಿಬಿ; ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆ

ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಿಸಿಬಿ ಕೊನೆಗೂ ಸಮ್ಮತಿ ಸೂಚಿಸಿದೆ. ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಿಸಿದ ಕಾರಣದಿಂದ ಟೀಮ್‌ ಇಂಡಿಯಾ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸುವ ಭರವಸೆ ಇದೆ.

ಕೊನೆಗೂ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಮಣಿದ ಪಿಸಿಬಿ
ಕೊನೆಗೂ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಮಣಿದ ಪಿಸಿಬಿ

ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕೊನೆಗೂ ತನ್ನ ನಿಲುವನ್ನು ಬಲಾಯಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ಕೊನೆಗೂ ಒಪ್ಪಿಕೊಂಡಿದೆ. ಆದರೆ, ಐಸಿಸಿಗೆ ಇನ್ನಷ್ಟೇ ಅಧಿಕೃತವಾಗಿ ತಿಳಿಸಬೇಕಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ ಅವರನ್ನು ಶನಿವಾರ (ನವೆಂಬರ್‌ 30) ಭೇಟಿಯಾಗಿದ್ದು, ಭಾರತದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ 29ರ ಶುಕ್ರವಾರ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಕ್ರಿಕೆಟ್‌ ಮಂಡಳಿ ನಾಯಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ನಂತರ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಪಂದ್ಯಾವಳಿಗೆ ಭಾರತವು ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಪಿಸಿಬಿ ಕೊನೆಗೂ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಭಾರತವಿಲ್ಲದೆ ಟೂರ್ನಿಯನ್ನು ನಡೆಸಲು ಐಸಿಸಿ ಕೂಡಾ ಒಪ್ಪಿಗೆ ಸೂಚಿಸುತ್ತಿಲ್ಲ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಹೈಬ್ರಿಡ್ ಮಾದರಿ. ಇದು ಕೊನೆಗೂ ಪಾಕಿಸ್ತಾನಕ್ಕೆ ಅರ್ಥವಾದಂತಿದೆ.

ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ಮುಂದುವರಿದರೆ, ಭಾರತವು ಯುಎಇಯ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡುವುದು ಬಹುತೇಕ ಖಚಿತ. ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್ 19 ಏಷ್ಯಾಕಪ್ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಯಾವುದೇ ನಿರ್ಧಾರವನ್ನು ಅಂತಿಮಗೊಳಿಸಿದರೂ, ಅದು ವಿಶ್ವ ಕ್ರಿಕೆಟ್‌ನ ಒಳಿತಿಗಾಗಿ ಇರುತ್ತದೆ ಎಂದು ಹೇಳಿದರು. “ನಾನು ಹೆಚ್ಚು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಏಕೆಂದರೆ ಅದು ಎಲ್ಲವನ್ನೂ ಹಾಳುಮಾಡುತ್ತದೆ. ನಾವು ನಮ್ಮ ದೃಷ್ಟಿಕೋನವನ್ನು ಐಸಿಸಿಗೆ ತಿಳಿಸಿದ್ದೇವೆ. ಭಾರತ ಕೂಡಾ ಹೇಳಿದೆ. ಎಲ್ಲರಿಗೂ ಗೆಲುವು ಖಾತ್ರಿಪಡಿಸುವುದೇ ನಮ್ಮ ಪ್ರಯತ್ನ” ಎಂದಿದ್ದಾರೆ.

“ಕೆಲವು ವಿಷಯಗಳಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ಭಾರತವು ಕೆಲವು ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಐಸಿಸಿ ಸದಸ್ಯ ಮಂಡಳಿಯು ಇದು ಗೆಲುವು ಎಂದು ಬಯಸುತ್ತದೆ. ನಾವು ಕೂಡ ಕ್ರಿಕೆಟ್ ಗೆಲ್ಲಬೇಕು ಮತ್ತು ಎಲ್ಲವೂ ಘನತೆಯಿಂದ ನಡೆಯಬೇಕು ಎಂದು ಬಯಸುತ್ತೇವೆ” ಎಂದು ನಖ್ವಿ ದುಬೈನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ."

ಭಾರತದಲ್ಲಿ ನಡೆಯೋ ಪಂದ್ಯಗಳಿಗೆ ನಾವು ಬರಲ್ಲ

ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ್ದಕ್ಕೆ ಪರಸ್ಪರ ಪ್ರತಿಕ್ರಿಯೆ ನೀಡಲು ಪಿಸಿಬಿ ಬಯಸಿದೆ. ಹೀಗಾಗಿ ಭವಿಷ್ಯದಲ್ಲಿ ಭಾರತ ಆತಿಥ್ಯ ವಹಿಸುವ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವ ಬೇಡಿಕೆ ಇಡಲು ಸಜ್ಜಾಗುತ್ತಿದೆ. “ಭಾರತವು ಪಾಕಿಸ್ತಾನಕ್ಕೆ ಬರದಿರುವುದು ಮತ್ತು ನಾವು ಅಲ್ಲಿಗೆ ಹೋಗದಿರುವು ಮುಂದುವರೆಯದಂತೆ ನೋಡಿಕೊಳ್ಳುವುದು ನನ್ನ ಪ್ರಯತ್ನವಾಗಿದೆ,” ಎಂದು ನಖ್ವಿ ಹೇಳಿದರು.

ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಭಾರತಕ್ಕೆ ಬರಲೇ ಬೇಕು

ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ಈ ಆಲೋಚನೆ ಸಾಧ್ಯವಿಲ್ಲ ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ. 2026ರ ಟಿ20 ವಿಶ್ವಕಪ್ ಮತ್ತು 2031ರ ಏಕದಿನ ವಿಶ್ವಕಪ್‌ಗೆ ವೇಳಾಪಟ್ಟಿಯನ್ನು ರೂಪಿಸುವುದು ಸುಲಭ. ಏಕೆಂದರೆ ಪಾಕಿಸ್ತಾನದ ಪಂದ್ಯಗಳು ಕ್ರಮವಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆಯುತ್ತವೆ. ಆದರೆ ಭಾರತವು ಏಕೈಕ ಆತಿಥೇಯ ದೇಶವಾಗಿರುವಾಗ (2025 ಮಹಿಳಾ ಏಕದಿನ ವಿಶ್ವಕಪ್ ಮತ್ತು 2029ರ ಚಾಂಪಿಯನ್ಸ್ ಟ್ರೋಫಿ) ವೇಳೆ ಇದು ಸಾಧ್ಯವಿಲ್ಲ. ಇದಲ್ಲದೆ, ಭಾರತದಲ್ಲಿ ನಾಕೌಟ್ ಪಂದ್ಯಗಳು ಭಾರತದಲ್ಲೇ ನಡೆಯುವುದು ನಿಚ್ಛಳವಾಗಿದ್ದು, ಪಾಕಿಸ್ತಾನವು ಅರ್ಹತೆ ಪಡೆಯಲಿ ಅಥವಾ ಇಲ್ಲದಿರಲಿ, ಐಸಿಸಿ ಮತ್ತು ಬಿಸಿಸಿಐ ಅವರು ಭಾರತದಲ್ಲಿ ನಡೆಸಲು ಬಯಸುತ್ತದೆ.

ಪಿಸಿಬಿ ಸದ್ಯ ತನ್ನ ಸೀಮಿತ ಆಯ್ಕೆಗಳೊಂದಿಗೆ, 29 ವರ್ಷಗಳ ಅಂತರದ ನಂತರ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಲು ಸಿದ್ಧವಾಗುತ್ತಿದೆ. 1996ರ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಿದ್ದವು.

Whats_app_banner