TN Heavy Rains: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ಜಲಪಾತಗಳು, ಹೀಗಿದೆ ಮಳೆ ನೋಟ
- ತಮಿಳುನಾಡಿನಲ್ಲಿ ಡಿಸೆಂಬರ್ ಭಾರೀ ಮಳೆ ಸಮಯ. ಕಳೆದ ವಾರ ಚೆನ್ನೈ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗಿತ್ತು. ಈಗ ದಕ್ಷಿಣ ತಮಿಳುನಾಡಿನಲ್ಲಿ ಕುಂಭದ್ರೋಣ ಮಳೆ. ಕನ್ಯಾಕುಮಾರಿ, ತಿರುನೆಲ್ವೇಲಿ ಸಹಿತ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಭಾನುವಾರ ಜೋರಾಗಿದೆ. ಕೆಲವು ಕಡೆ ಮನೆಗಳು ಜಲಾವೃತವಾಗಿದ್ದು, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಹೀಗಿದೆ ಮಳೆಯ ನೋಟ.

(1 / 7)
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಟ್ಟಣ ಒಂದರಲ್ಲಿ ಭಾನುವಾರ ಭಾರೀ ಮಳೆ ಸುರಿದು ಮನೆಯ ಪಕ್ಕದಲ್ಲೇ ಹೊಳೆ ರೀತಿ ನೀರು ಹರಿಯುತ್ತಿದೆ. ಈ ಭಾಗದಲ್ಲಿ ಇನ್ನೂ ಒಂದು ವಾರ ಮಳೆ ಇರುವ ಮಾಹಿತಿ ನೀಡಲಾಗಿದೆ.
(2 / 7)
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮಣಿ ಮುತ್ತಾರ್ ಜಲಪಾತ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಉಕ್ಕಿ ಹರಿದು ಮನಮೋಹಕ ವಾತಾವರಣ ನಿರ್ಮಾಣವಾಗಿತ್ತು.
(4 / 7)
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಈಗ ಎಲ್ಲೆಲ್ಲೂ ಮಳೆ. ಈಗ ಮೂರ್ನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು. ಒಂದೆರಡು ದಿನಗಳಲ್ಲಿ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗುವ ಸೂಚನೆಯಿದೆ.
(5 / 7)
ತಮಿಳುನಾಡಿನ ಕೊಯಮತ್ತೂರು ಭಾಗದಲ್ಲಿ ಭಾನುವಾರ ಮಧ್ಯಾಹ್ನವೇ ಮೋಡ ಕವಿದ ವಾತಾವರಣವಿತ್ತು.ಸಂಜೆ ನಂತರ ಇಲ್ಲಿಯೂ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
(6 / 7)
ಕನ್ಯಾಕುಮಾರಿ, ತಿರುನೆಲ್ವೇಲಿ ಸಹಿತ ಹಲವು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ವಾಹನ ಸವಾರರು ಹಗಲು ವೇಳೆಯೇ ದೀಪ ಹಾಕಿಕೊಳ್ಳುವಂತಾಯಿತು.
ಇತರ ಗ್ಯಾಲರಿಗಳು