ಒಲಿಂಪಿಕ್ಸ್: 89.45ಮೀ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ; ಪಾಕ್‌ ಆಟಗಾರನಿಗೆ ದಾಖಲೆಯ ಬಂಗಾರ-neeraj chopra win silver medal at paris olympics javelin throw pakistan arshad nadeem breaks olympic record to win gold ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಲಿಂಪಿಕ್ಸ್: 89.45ಮೀ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ; ಪಾಕ್‌ ಆಟಗಾರನಿಗೆ ದಾಖಲೆಯ ಬಂಗಾರ

ಒಲಿಂಪಿಕ್ಸ್: 89.45ಮೀ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ; ಪಾಕ್‌ ಆಟಗಾರನಿಗೆ ದಾಖಲೆಯ ಬಂಗಾರ

  • Neeraj Chopra win Silver: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಬಂಗಾರದ ಭರವಸೆ ಬಹುತೇಕ ಕಮರಿದೆ. ಆದರೆ ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಹುಡುಗ ನೀರಜ್‌ ಚೋಪ್ರ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪ್ಯಾರಿಸ್‌ನಲ್ಲಿ ಭಾರತಕ್ಕೆ ಮೊದಲ ರಜತ ಪದಕ. ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ ದಾಖಲೆ ಮುರಿದು ಐತಿಹಾಸಿಕ ಚಿನ್ನ ಗೆದ್ದಿದ್ದಾರೆ.

ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಎರಡನೇ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ 89.45 ಮೀಟರ್ ದೂರಕ್ಕೆ ಬರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಮೂಲಕ ಕಳೆದ ಬಾರಿಯ ಚಿನ್ನವನ್ನು ಕಳೆದುಕೊಂಡಿದ್ದಾರೆ.
icon

(1 / 7)

ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಎರಡನೇ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ 89.45 ಮೀಟರ್ ದೂರಕ್ಕೆ ಬರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಮೂಲಕ ಕಳೆದ ಬಾರಿಯ ಚಿನ್ನವನ್ನು ಕಳೆದುಕೊಂಡಿದ್ದಾರೆ.(PTI)

ಫೈನಲ್‌ನಲ್ಲಿ ನೀರಜ್ ಆರಂಭವೇ ಅಸ್ಥಿರವಾಗಿತ್ತು. ಮೊದಲ ಪ್ರಯತ್ನದಲ್ಲಿಯೇ ನೀರಸ ಫೌಲ್‌ನೊಂದಿಗೆ ಆರಂಭಿಸಿದರು. ಅತ್ತ ಪ್ರಬಲ ಪ್ರತಿಸ್ಪರ್ಧಿ ಪಾಕಿಸ್ತಾನದ ನದೀಮ್, ತಮ್ಮ ಎರಡನೇ ಪ್ರಯತ್ನದಲ್ಲಿಯೇ ನೂತನ ಒಲಿಂಪಿಕ್ ದಾಖಲೆಯನ್ನು ನಿರ್ಮಿಸಿದಾಗ, ಚಿನ್ನದ ಹುಡುಗನಿಗೆ ಒತ್ತಡ ಹೆಚ್ಚಾಯಿತು.
icon

(2 / 7)

ಫೈನಲ್‌ನಲ್ಲಿ ನೀರಜ್ ಆರಂಭವೇ ಅಸ್ಥಿರವಾಗಿತ್ತು. ಮೊದಲ ಪ್ರಯತ್ನದಲ್ಲಿಯೇ ನೀರಸ ಫೌಲ್‌ನೊಂದಿಗೆ ಆರಂಭಿಸಿದರು. ಅತ್ತ ಪ್ರಬಲ ಪ್ರತಿಸ್ಪರ್ಧಿ ಪಾಕಿಸ್ತಾನದ ನದೀಮ್, ತಮ್ಮ ಎರಡನೇ ಪ್ರಯತ್ನದಲ್ಲಿಯೇ ನೂತನ ಒಲಿಂಪಿಕ್ ದಾಖಲೆಯನ್ನು ನಿರ್ಮಿಸಿದಾಗ, ಚಿನ್ನದ ಹುಡುಗನಿಗೆ ಒತ್ತಡ ಹೆಚ್ಚಾಯಿತು.(PTI)

ನೀರಜ್ ಚೋಪ್ರಾ ಬೆಳ್ಳಿ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 5 ಪದಕ ಗೆದ್ದಂತಾಗಿದೆ. ಇದರಲ್ಲಿ ನಾಲ್ಕು ಕಂಚು ಹಾಗೂ ಒಂದು ಬೆಳ್ಳಿ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿದೆ
icon

(3 / 7)

ನೀರಜ್ ಚೋಪ್ರಾ ಬೆಳ್ಳಿ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 5 ಪದಕ ಗೆದ್ದಂತಾಗಿದೆ. ಇದರಲ್ಲಿ ನಾಲ್ಕು ಕಂಚು ಹಾಗೂ ಒಂದು ಬೆಳ್ಳಿ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿದೆ(PTI)

ನೀರಜ್ ಅವರಿಗೆ ನೀಡಲಾಗಿದ್ದ ಒಟ್ಟು ಆರು ಅವಕಾಶಗಳಲ್ಲಿ ಒಂದು ಎಸೆತ ಮಾತ್ರವೇ ಕಾನೂನುಬದ್ಧ ಎಸೆತವಾಗಿತ್ತು. ಅವರ ಉಳಿದ ಐದು ಪ್ರಯತ್ನಗಳು ಫೌಲ್ ಆಗಿದ್ದವು. ಹೀಗಾಗಿ ನೀರಜ್‌ಗೆ ಬಂಗಾರಕ್ಕೆ ಸ್ಪರ್ಧಿಸುವುದು ಕಷ್ಟವಾಯ್ತು. ಅರ್ಹತಾ ಸುತ್ತಿನಲ್ಲಿ ನೀರಜ್‌ 89.34 ಮೀಟರ್ ಎಸೆತ ದಾಖಲಿಸಿದ್ದರು.
icon

(4 / 7)

ನೀರಜ್ ಅವರಿಗೆ ನೀಡಲಾಗಿದ್ದ ಒಟ್ಟು ಆರು ಅವಕಾಶಗಳಲ್ಲಿ ಒಂದು ಎಸೆತ ಮಾತ್ರವೇ ಕಾನೂನುಬದ್ಧ ಎಸೆತವಾಗಿತ್ತು. ಅವರ ಉಳಿದ ಐದು ಪ್ರಯತ್ನಗಳು ಫೌಲ್ ಆಗಿದ್ದವು. ಹೀಗಾಗಿ ನೀರಜ್‌ಗೆ ಬಂಗಾರಕ್ಕೆ ಸ್ಪರ್ಧಿಸುವುದು ಕಷ್ಟವಾಯ್ತು. ಅರ್ಹತಾ ಸುತ್ತಿನಲ್ಲಿ ನೀರಜ್‌ 89.34 ಮೀಟರ್ ಎಸೆತ ದಾಖಲಿಸಿದ್ದರು.(PTI)

ಜಾವೆಲಿನ್ ಥ್ರೋ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆಯುವ ಮೂಲಕ ಒಲಿಂಪಿಕ್ ದಾಖಲೆ ನಿರ್ಮಿಸಿದರು. ತಮ್ಮ ಎರಡನೇ ಪ್ರಯತ್ನದಲ್ಲಿಯೇ ಅವರು ಈ ಸಾಧನೆ ಮಾಡಿದರು. ನದೀಮ್ ಅವರು ನೀರಜ್‌ ಅನ್ನು ಸೋಲಿಸಿದ್ದು ಇದು ಮೊದಲನೇ ಬಾರಿ.
icon

(5 / 7)

ಜಾವೆಲಿನ್ ಥ್ರೋ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆಯುವ ಮೂಲಕ ಒಲಿಂಪಿಕ್ ದಾಖಲೆ ನಿರ್ಮಿಸಿದರು. ತಮ್ಮ ಎರಡನೇ ಪ್ರಯತ್ನದಲ್ಲಿಯೇ ಅವರು ಈ ಸಾಧನೆ ಮಾಡಿದರು. ನದೀಮ್ ಅವರು ನೀರಜ್‌ ಅನ್ನು ಸೋಲಿಸಿದ್ದು ಇದು ಮೊದಲನೇ ಬಾರಿ.(PTI)

ನೀರಜ್ ಚೋಪ್ರಾ ಅವರ 89.45 ಮೀಟರ್ ಎಸೆತವು ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟಿತು. ಅತ್ತ ನದೀಮ್ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು, ಆದರೆ ಚೋಪ್ರಾ ಗಾಯದಿಂದಾಗಿ ಕ್ರೀಡಾಕೂಟದಲ್ಲಿ ಭಾಗಿಯಾಗಿ ಇರಲಿಲ್ಲ. ಕಳೆದ ಒಲಿಂಪಿಕ್ಸ್‌ನಲ್ಲಿ ನದೀಮ್ 84.62 ಮೀಟರ್ ದೂರ ಜಿಗಿದು ಐದನೇ ಸ್ಥಾನ ಪಡೆದಿದ್ದರು.
icon

(6 / 7)

ನೀರಜ್ ಚೋಪ್ರಾ ಅವರ 89.45 ಮೀಟರ್ ಎಸೆತವು ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟಿತು. ಅತ್ತ ನದೀಮ್ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು, ಆದರೆ ಚೋಪ್ರಾ ಗಾಯದಿಂದಾಗಿ ಕ್ರೀಡಾಕೂಟದಲ್ಲಿ ಭಾಗಿಯಾಗಿ ಇರಲಿಲ್ಲ. ಕಳೆದ ಒಲಿಂಪಿಕ್ಸ್‌ನಲ್ಲಿ ನದೀಮ್ 84.62 ಮೀಟರ್ ದೂರ ಜಿಗಿದು ಐದನೇ ಸ್ಥಾನ ಪಡೆದಿದ್ದರು.(PTI)

ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಬಂಗಾರ ಗೆದ್ದರೆ, ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದರು.
icon

(7 / 7)

ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಬಂಗಾರ ಗೆದ್ದರೆ, ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದರು.(REUTERS)


ಇತರ ಗ್ಯಾಲರಿಗಳು