ಮಹಿಳೆಯರ ಆರ್ಚರಿಯಲ್ಲಿ ಮೊದಲ ದಿನವೇ ವಿಶ್ವದಾಖಲೆ; ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಲಿಮ್ ಸಿ-ಹೈಯಾನ್ ಇತಿಹಾಸ ಸೃಷ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಿಳೆಯರ ಆರ್ಚರಿಯಲ್ಲಿ ಮೊದಲ ದಿನವೇ ವಿಶ್ವದಾಖಲೆ; ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಲಿಮ್ ಸಿ-ಹೈಯಾನ್ ಇತಿಹಾಸ ಸೃಷ್ಟಿ

ಮಹಿಳೆಯರ ಆರ್ಚರಿಯಲ್ಲಿ ಮೊದಲ ದಿನವೇ ವಿಶ್ವದಾಖಲೆ; ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಲಿಮ್ ಸಿ-ಹೈಯಾನ್ ಇತಿಹಾಸ ಸೃಷ್ಟಿ

  • Lim Si-Hyeon: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮಹಿಳೆಯರ ಆರ್ಚರಿಯ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ದಕ್ಷಿಣ ಕೊರಿಯಾದ ಆಟಗಾರ್ತಿ ಲಿಮ್ ಸಿ-ಹೈಯಾನ್ ಹೊಸ ವಿಶ್ವ ಮತ್ತು ಒಲಿಂಪಿಕ್ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​​ ಸ್ಪರ್ಧೆಗಳು ಶುರುವಾದ ಎರಡನೇ ದಿನದಂದು (ಜುಲೈ 25) ಮಹಿಳೆಯರ ಆರ್ಚರಿಯಲ್ಲಿ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಲಿಮ್ ಸಿ-ಹೈಯಾನ್ 694 ಅಂಕ ಸಂಪಾದಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
icon

(1 / 5)

ಪ್ಯಾರಿಸ್ ಒಲಿಂಪಿಕ್ಸ್​​ ಸ್ಪರ್ಧೆಗಳು ಶುರುವಾದ ಎರಡನೇ ದಿನದಂದು (ಜುಲೈ 25) ಮಹಿಳೆಯರ ಆರ್ಚರಿಯಲ್ಲಿ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಲಿಮ್ ಸಿ-ಹೈಯಾನ್ 694 ಅಂಕ ಸಂಪಾದಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.(AFP)

ಶ್ರೇಯಾಂಕದ ಸುತ್ತಿನ ಅಂತ್ಯದ ವೇಳೆಗೆ 720 ಅಂಕಗಳ ಪೈಕಿ 694 ಅಂಕ ಗಳಿಸಿದ ಲಿಮ್ ಸಿ-ಹೈಯಾನ್ ಅವರು 2019ರಲ್ಲಿ ತಮ್ಮ ದೇಶದ ಚೆಯುಂಗ್ ಕಾಂಗ್ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
icon

(2 / 5)

ಶ್ರೇಯಾಂಕದ ಸುತ್ತಿನ ಅಂತ್ಯದ ವೇಳೆಗೆ 720 ಅಂಕಗಳ ಪೈಕಿ 694 ಅಂಕ ಗಳಿಸಿದ ಲಿಮ್ ಸಿ-ಹೈಯಾನ್ ಅವರು 2019ರಲ್ಲಿ ತಮ್ಮ ದೇಶದ ಚೆಯುಂಗ್ ಕಾಂಗ್ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.(AFP)

ಆರಂಭದಿಂದಲೂ ಪರಾಕ್ರಮ ಪ್ರದರ್ಶಿಸಿದ ಲಿಮ್ ಸಿ-ಹ್ಯೆನ್, ಯಾವ ಹಂತದಲ್ಲೂ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 2019ರಂದು ತನ್ನ ದೇಶವಾಸಿ ಕಾಂಗ್ ಚೇ-ಯಂಗ್ ಗಳಿಸಿದ್ದ 692 ಅಂಕಗಳ ಹಿಂದಿನ ವಿಶ್ವದಾಖಲೆಯನ್ನು ಹೈಯಾನ್ ಮೀರಿಸಿದ್ದಾರೆ.
icon

(3 / 5)

ಆರಂಭದಿಂದಲೂ ಪರಾಕ್ರಮ ಪ್ರದರ್ಶಿಸಿದ ಲಿಮ್ ಸಿ-ಹ್ಯೆನ್, ಯಾವ ಹಂತದಲ್ಲೂ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 2019ರಂದು ತನ್ನ ದೇಶವಾಸಿ ಕಾಂಗ್ ಚೇ-ಯಂಗ್ ಗಳಿಸಿದ್ದ 692 ಅಂಕಗಳ ಹಿಂದಿನ ವಿಶ್ವದಾಖಲೆಯನ್ನು ಹೈಯಾನ್ ಮೀರಿಸಿದ್ದಾರೆ.(AP)

ಅಲ್ಲದೆ, ಟೊಕಿಯೊ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ಆರ್ಚರಿ ಆಟಗಾರ್ತಿ ದಾಖಲಿಸಿದ್ದ 680 ಅಂಕಗಳ ಒಲಿಂಪಿಕ್ ದಾಖಲೆಯನ್ನೂ ಲಿಮ್ ಮುರಿದಿದ್ದಾರೆ.
icon

(4 / 5)

ಅಲ್ಲದೆ, ಟೊಕಿಯೊ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ಆರ್ಚರಿ ಆಟಗಾರ್ತಿ ದಾಖಲಿಸಿದ್ದ 680 ಅಂಕಗಳ ಒಲಿಂಪಿಕ್ ದಾಖಲೆಯನ್ನೂ ಲಿಮ್ ಮುರಿದಿದ್ದಾರೆ.(AFP)

ಇನ್ನು ತಂಡದ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾವೇ ಮೊದಲ ಸ್ಥಾನ ಪಡೆಯಿತು. ಚೀನಾ ಎರಡನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದೆ. 2046 ಅಂಕ ಪಡೆದ ದಕ್ಷಿಣ ಕೊರಿಯಾ ತಂಡವು ತಾನು ಟೊಕಿಯೊ ಒಲಿಂಪಿಕ್ಸ್​​ನಲ್ಲಿ ದಾಖಲಿಸಿದ್ದ 2032 ಅಂಕಗಳ ಸಾಧನೆಯನ್ನು ಮೀರಿಸಿದೆ.
icon

(5 / 5)

ಇನ್ನು ತಂಡದ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾವೇ ಮೊದಲ ಸ್ಥಾನ ಪಡೆಯಿತು. ಚೀನಾ ಎರಡನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದೆ. 2046 ಅಂಕ ಪಡೆದ ದಕ್ಷಿಣ ಕೊರಿಯಾ ತಂಡವು ತಾನು ಟೊಕಿಯೊ ಒಲಿಂಪಿಕ್ಸ್​​ನಲ್ಲಿ ದಾಖಲಿಸಿದ್ದ 2032 ಅಂಕಗಳ ಸಾಧನೆಯನ್ನು ಮೀರಿಸಿದೆ.(AP)


ಇತರ ಗ್ಯಾಲರಿಗಳು