OTT Releases This Week: ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು-ott releases this week saripodhaa sanivaaram to taaza khabar season 2 ott releases this week prime netflix zee5 m ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Releases This Week: ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು

OTT Releases This Week: ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸರಣಿಗಳಿವು

  • OTT Releases This Week: ಒಂದಕ್ಕಿಂತ ಒಂದು ವಿಭಿನ್ನ ಜಾನರ್‌ನ ಸಿನಿಮಾಗಳು ಈ ಸಲ ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ನ್ಯಾಚುರಲ್‌ ಸ್ಟಾರ್‌ ನಾನಿಯ ಸರಿಪೋದಾ ಶನಿವಾರಂ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ಈ ಚಿತ್ರದ ಜತೆಗೆ ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳೂ ಈ ವಾರ ಒಟಿಟಿಗೆ ಆಗಮಿಸಲಿವೆ.

ಈ ವಾರ ಯಾವೆಲ್ಲ ಸಿನಿಮಾಗಳು, ವೆಬ್‌ಸರಣಿಗಳು ಒಟಿಟಿಗೆ ಆಗಮಿಸಲಿವೆ? ಇಲ್ಲಿದೆ ನೋಡಿ ಲಿಸ್ಟ್‌ 
icon

(1 / 6)

ಸರಿಪೋದಾ ಶನಿವಾರಂ: ನ್ಯಾಚುರಲ್ ಸ್ಟಾರ್ ಹೀರೋ ನಾನಿ ಅಭಿನಯದ ಆಕ್ಷನ್ ಡ್ರಾಮಾ ಚಿತ್ರ ಸರಿಪೋದಾ ಶನಿವಾರಂ ಬಾಕ್ಸ್ ಆಫೀಸ್‌ನಲ್ಲಿ ಹಿಟ್‌ ಪಟ್ಟ ಪಡೆದುಕೊಂಡಿದೆ. ಆಗಸ್ಟ್‌ 27ರಂದು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದ ಈ ಸಿನಿಮಾ, ಇದೀಗ ಈ ವಾರ ಒಟಿಟಿಗೆ ಆಗಮಿಸುತ್ತಿದೆ. ಗುರುವಾರ (ಸೆಪ್ಟೆಂಬರ್ 26) ನೆಟ್‌ಫ್ಲಿಕ್ಸ್‌ನ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. 
icon

(2 / 6)

ತಾಜಾ ಖಬರ್: ಸೀಸನ್ 2: 'ತಾಜಾ ಖಬರ್ ವೆಬ್‌ಸರಣಿಯಲ್ಲಿ ಭವಿಷ್ಯವನ್ನು ಊಹಿಸುವ ವ್ಯಕ್ತಿಯೊಬ್ಬನ ಸುತ್ತ ಸುತ್ತುತ್ತದೆ. ಈ ಸಿರೀಸ್‌ನಲ್ಲಿ ಭುವನ್ ಬಾಮ್, ಶ್ರಿಯಾ ಪಿಲ್ಗಾಂವ್ಕರ್, ಜೆ.ಡಿ. ಚಕ್ರವರ್ತಿ, ದೇವೆನ್ ಭೋಜನಿ, ಪ್ರಥಮೇಶ್ ಪರಬ್, ನಿತ್ಯಾ ಮಾಥುರ್ ಮತ್ತು ಶಿಲ್ಪಾ ಶುಕ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. 
icon

(3 / 6)

ಲವ್‌ ಸಿತಾರಾ: ಶೋಭಿತಾ ಧೂಳಿಪಾಲ ಅವರ ಚಿತ್ರ 'ಲವ್ ಸಿತಾರಾ' ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಶುಕ್ರವಾರ ಅಂದರೆ ಸೆಪ್ಟೆಂಬರ್ 27 ರಂದು ಜಿ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆರಂಭಿಸಲಿದೆ. ಈ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ವಂದನಾ ಕಟಾರಿಯಾ ನಿರ್ದೇಶಿಸಿದ್ದಾರೆ. ಲವ್ ಸಿತಾರ ಚಿತ್ರದಲ್ಲಿ ರಾಜೀವ್ ಸಿದ್ಧಾರ್ಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
icon

(4 / 6)

ವಾಳೈ: ಕಾಲಿವುಡ್‌ನಲ್ಲಿ ಆಗಸ್ಟ್‌ನಲ್ಲಿ ತೆರೆಗೆ ಬಂದಿದ್ದ ವಾಳೈ ಸಿನಿಮಾ ಸೆಪ್ಟೆಂಬರ್ 27ರಂದು ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಕರ್ಣಂ ಮತ್ತು ಮಾಮನ್ನನ್ ಚಿತ್ರಗಳನ್ನು ನಿರ್ದೇಶಿಸಿದ್ದ ಮಾರಿ ಸೆಲ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆ ಮಕ್ಕಳ ನಡುವಿನದ್ದು. ಚಿತ್ರವು ಆಗಸ್ಟ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. 
icon

(5 / 6)

ಡಿಮಾಂಟಿ ಕಾಲೋನಿ 2: ಹಾರರ್ ಥ್ರಿಲ್ಲರ್ ಚಲನಚಿತ್ರ 'ಡಿಮಾಂಟಿ ಕಾಲೋನಿ 2' ಸೆಪ್ಟೆಂಬರ್ 27 ರಂದು ಜೀ5 OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮಿಳಿನಲ್ಲಿ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಅಜಯ್ ಜ್ಞಾನಮುತ್ತು ನಿರ್ದೇಶನದ ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು