Happy Navratri 2022: ಹ್ಯಾಪಿ ದಸರಾ ಅಂದ್ರೆ ಮುಗೀತಾ: ಆಯುಧಪೂಜೆ, ವಿಜಯದಶಮಿಗೆ ಹೇಗೆ ವಿಶ್ ಮಾಡೋದು..ಇಲ್ಲಿದೆ ಕೆಲವು ಸುಂದರ ಸಾಲುಗಳು
- ಪ್ರತಿ ಹಬ್ಬ, ಶುಭದಿನದಂದು ನಮ್ಮ ಆತ್ಮೀಯರಿಗೆ ಶುಭ ಹಾರೈಸುತ್ತೇವೆ. ಆದರೆ ಪ್ರತಿ ಬಾರಿಯೂ ಒಂದೇ ರೀತಿ ಶುಭ ಕೋರುವ ಬದಲಿಗೆ ಆ ಹಬ್ಬ-ಹರಿದಿನ ಅಥವಾ ಆ ವಿಶೇಷ ದಿನಕ್ಕೆ ಒಪ್ಪುವಂತ ಸುಂದರವಾದ ಸಾಲುಗಳಿಂದ ಶುಭ ಹಾರೈಸಿದರೆ ಎಂದು ಚೆಂದ ಅಲ್ಲವೇ.
- ಪ್ರತಿ ಹಬ್ಬ, ಶುಭದಿನದಂದು ನಮ್ಮ ಆತ್ಮೀಯರಿಗೆ ಶುಭ ಹಾರೈಸುತ್ತೇವೆ. ಆದರೆ ಪ್ರತಿ ಬಾರಿಯೂ ಒಂದೇ ರೀತಿ ಶುಭ ಕೋರುವ ಬದಲಿಗೆ ಆ ಹಬ್ಬ-ಹರಿದಿನ ಅಥವಾ ಆ ವಿಶೇಷ ದಿನಕ್ಕೆ ಒಪ್ಪುವಂತ ಸುಂದರವಾದ ಸಾಲುಗಳಿಂದ ಶುಭ ಹಾರೈಸಿದರೆ ಎಂದು ಚೆಂದ ಅಲ್ಲವೇ.
(1 / 12)
ಸದ್ಯಕ್ಕೆ ನಾಡಿನಾದ್ಯಂತ ದಸರಾ ಹಬ್ಬ ಆಚರಿಸಲಾಗುತ್ತಿದೆ. ಮಂಗಳವಾರ ಆಯುಧಪೂಜೆ ಹಾಗೂ ಬುಧವಾರ ವಿಜಯದಶಮಿ ಇದೆ. ಈ ದಿನದಂದು ನಿಮ್ಮ ಆತ್ಮೀಯರಿಗೆ ಈ ರೀತಿಯಾಗಿಯೂ ಶುಭ ಹಾರೈಸಬಹುದು. (PC: southtourism.in)
(2 / 12)
ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೆ ಅದೇ ವಿಜಯ, ಎರಡೂ ಸದಾ ನಿಮ್ಮಲ್ಲಿದ್ದು ನವಚೈತನ್ಯ ನೀಡಲಿ, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.(PC: Megharaj Reddy Pinterest )
(3 / 12)
ದೇವರು ಬುದ್ಧಿಯೆಂಬ ಆಯುಧವನ್ನು ಮನುಷ್ಯನಿಗೆ ನೀಡಿರುವುದು ಸಮಯ ಬಂದಾಗ ಉಪಯೋಗಿಸಲೆಂದೇ ವಿನ: ಅನಗತ್ಯವಾಗಿ ಪ್ರದರ್ಶಿಸಲು ಅಲ್ಲ, ಆಯುಧಪೂಜೆ ಹಾಗೂ ವಿಜಯದಶಮಿ ಶುಭಾಶಯಗಳು.(PC: Unsplash.com)
(4 / 12)
ನಮ್ಮ ಜೀವನದಲ್ಲಿ ಈಗ ಎದುರಿಸುತ್ತಿರುವ ಮುಂದೆ ಬರುವ ಕಷ್ಟಗಳನ್ನು ಕಂಡು ರಾವಣನಂತೆ ಹೆದರದೆ, ರಾಮನಂತೆ ಧೈರ್ಯದಿಂದ, ಆತ್ಮಸ್ಥೈರ್ಯದಿಂದ, ಬುದ್ಧಿವಂತಿಕೆಯಿಂದ ಸದೆಬಡಿದು, ನೆಮ್ಮದಿಯ ಜೀವನವನ್ನು ನಮ್ಮದಾಗಿಸೋಣ. ದುಷ್ಟತನದ ದುಸ್ಸಾಹಸದ ಮೇಲೆ ನ್ಯಾಯ ನೀತಿಯ, ನೆಮ್ಮದಿಯ ವಿಜಯ ಪತಾಕೆ ಹಾರಿಸೋಣ. ಎಲ್ಲರಿಗೂ ವಿಜಯದಶಮಿ ಶುಭಾಶಯಗಳು.(PC: Unsplash.com)
(5 / 12)
ನವದುರ್ಗೆಯರು ನಿಮ್ಮ ಬಾಳಿನಲ್ಲಿ ಖುಷಿಯ ಬೆಳಕು ಚೆಲ್ಲಲಿ. ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು.(PC: southtourism.in)
(6 / 12)
ಮನೆ ಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯ ಕರುಣಿಸಲಿ. ನವರಾತ್ರಿಯ ಶುಭಾಶಯಗಳು.( PC: Unsplash.com)
(7 / 12)
ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮ: ತಾಯಿ ಚಾಮುಂಡೇಶ್ವರಿಯು ಸಕಲರಿಗೂ ಸರ್ವ ಮಂಗಳವನ್ನು ಕರುಣಿಸಲಿ. ಆಯುಧಪೂಜೆ ಹಾಗೂ ವಿಜಯದಶಮಿಯ ಶುಭ ಹಾರೈಕೆಗಳು.
(8 / 12)
ನಾಡಿನ ಅಧಿದೇವತೆ ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹರಿಸಿದ ಮರುದಿನ ಆ ಶಸ್ತ್ರಾಸ್ತ್ರಗಳನ್ನು ಪೂಜಿಸಿ ಶಾಂತಿ ಮಾಡಲಾದ ದಿನವೇ ಆಯುಧ ಪೂಜೆ. ತಾಯಿ ಚಾಮುಂಡಿಯು ನಿಮಗೆ ಆರೋಗ್ಯ, ಆಯಸ್ಸು, ನೆಮ್ಮದಿ ಕರುಣಿಸಲಿ, ಆಯುಧಪೂಜೆಯ ಶುಭಾಶಯಗಳು.(PC: Pixaby)
(9 / 12)
ಎಲ್ಲರಿಗೂ ಬಂಗಾರ ಹಂಚುವಷ್ಟು ಶ್ರೀಮಂತ ನಾನಲ್ಲ. ಆದರೆ ನನ್ನ ಭಾಗ್ಯದಲ್ಲಿ ಬಂಗಾರದಂತಹ ನೀವೆಲ್ಲರೂ ದೊರೆತಿದ್ದೀರಿ. ನಿಮ್ಮನ್ನು ನೆನಪಿಸಿಕೊಳ್ಳುವುದು ನನ್ನ ಕರ್ತವ್ಯ. ಬಂಗಾರದಂತೆ ನೀವು ಇದ್ದೀರಿ, ಹಾಗೇ ಸದಾ ನಮ್ಮವರಾಗಿರಿ. ನಿಮ್ಮ ಬಾಳು ಬಂಗಾರವಾಗಲಿ ನಿಮಗೂ ನಿಮ್ಮ ಪರಿವಾರಕ್ಕೂ ಚಾಮುಂಡೇಶ್ವರಿ ಆಶೀರ್ವದಿಸಲಿ. ಆಯುಧಪೂಜೆ-ವಿಜಯದಶಮಿ ಶುಭಾಶಯಗಳು.(PC: southtourism.in)
(10 / 12)
ಶಮಿ ಶಮಯತೇ ಪಾಪಂ ಶಮಿ ಶತ್ರು ವಿನಾಸನಂ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯ ದರ್ಶನಮ್.. ಶಮಿ (ಬನ್ನಿ)ಯನ್ನು ಗುರುಹಿರಿಯರಿಗೆ, ಬಂಧುಮಿತ್ರರಿಗೆ ನೀಡಿ ಅವರಿಂದ ಆಶಿರ್ವಾದ ಪಡೆದು, ನೀವು ಮಕ್ಕಳಿಗೆ ನೀಡಿ ಅವರನ್ನು ಆಶೀರ್ವದಿಸಿ. ಸಮಾನ ವಯಸ್ಕರಿಗೆ ನೀಡಿ ಪ್ರೀತಿಯಿಂದ ಶುಭ ಕೋರಿ. ದ್ವೇಷ ಮರೆತು ಸುಖ ಸಂತೋಷದಿಂದ ಬಾಳೋಣ. ನಿಮ್ಮೆಲ್ಲರಿಗೂ ವಿಜಯದಶಮಿ ಶುಭ ಹಾರೈಕೆಗಳು.(PC: Girish Govindaiah Faceook)
(11 / 12)
ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯವಾದಿನೀ ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ(Twitter)
ಇತರ ಗ್ಯಾಲರಿಗಳು