Pakistan AQI: ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ವಾಯುಮಾಲಿನ್ಯ; ಶಾಲೆಗಳು, ಪಾರ್ಕ್ಗಳು 10 ದಿನ ಕ್ಲೋಸ್
- Pakistan Air Pollution: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಶಾಲೆಗಳಿಗೆ ಹತ್ತು ದಿನಗಳ ಕಾಲ ರಜೆ ನೀಡಲಾಗಿದೆ. ವಿಪರೀತ ಮಾಲಿನ್ಯದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
- Pakistan Air Pollution: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಶಾಲೆಗಳಿಗೆ ಹತ್ತು ದಿನಗಳ ಕಾಲ ರಜೆ ನೀಡಲಾಗಿದೆ. ವಿಪರೀತ ಮಾಲಿನ್ಯದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
(1 / 6)
ಅತಿಯಾದ ಮಾಲಿನ್ಯದಿಂದಾಗಿ ಪಾಕಿಸ್ತಾನ ದೇಶದಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಅನೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 2,000ಕ್ಕಿಂತ ಹೆಚ್ಚಾಗಿದೆ.(AFP)
(2 / 6)
ಸಾಮಾನ್ಯವಾಗಿ AQI 400ಕ್ಕಿಂತ ಹೆಚ್ಚಿನ ಗಾಳಿಯನ್ನು ಹೆಚ್ಚು ಕಲುಷಿತ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪಂಜಾಬ್ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿನ ಪರಿಸ್ಥಿತಿ ಸಾಕಷ್ಟು ಶೋಚನೀಯವಾಗಿದೆ. ಲಾಹೋರ್, ಫೈಸಲಾಬಾದ್, ಗುಜ್ರಾನ್ವಾಲಾ, ಚಿನಿಯೋಟ್ ಮತ್ತು ಬಿಹಾರಿಗಳಲ್ಲಿ ಪರಿಸ್ಥಿತಿ ಸಾಕಷ್ಟು ಕೆಟ್ಟದಾಗಿದೆ. (AFP)
(3 / 6)
ಪಾಕಿಸ್ತಾನದ ಪಂಜಾಬ್ ಸರ್ಕಾರ ಈಗಾಗಲೇ ಶಾಲೆಗಳು, ಉದ್ಯಾನವನಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಮುಚ್ಚಲು ಆದೇಶಿಸಿದೆ. ಈ ಸಂಸ್ಥೆಗಳು ಮುಂದಿನ 10 ದಿನಗಳವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ವೃದ್ಧರು ಮತ್ತು ಮಕ್ಕಳು ಮನೆಯಿಂದ ಹೊರಹೋಗದಂತೆ ಸೂಚಿಸಲಾಗಿದೆ.(AFP)
(4 / 6)
ಪ್ರಸ್ತುತ, ಪಂಜಾಬ್ ಪ್ರಾಂತ್ಯದ ಅತಿದೊಡ್ಡ ನಗರವಾದ ಮುಲ್ತಾನ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 2135 ಆಗಿದೆ. ಮತ್ತೊಂದೆಡೆ, ಸಂಸಾಬಾದ್ ಕಾಲೋನಿ ಮತ್ತು ಮುಲ್ತಾನ್ ಕಂಟೋನ್ಮೆಂಟ್ನಲ್ಲಿ ಕ್ರಮವಾಗಿ 1635 ಮತ್ತು 1527 ಆಗಿದೆ.(AFP)
(5 / 6)
ವಾಯುಮಾಲಿನ್ಯದಿಂದ ಶ್ವಾಸಕೋಶಗಳು ಹಾನಿಗೊಳಗಾಗುವ ಪ್ರಕರಣಗಳು ಹೆಚ್ಚಾಗಿವೆ. ಅನೇಕ ಗಂಭೀರ ಸಮಸ್ಯೆಗಳೂ ಕಂಡು ಬರಬಹುದು. ಗಾಳಿಯಲ್ಲಿರುವ ಕಣಗಳ ಪ್ರಮಾಣ 2.5ರ ಆಧಾರದ ಮೇಲೆ ಗಾಳಿಯ ಶುದ್ಧತೆಯನ್ನು ಅಳೆಯಲಾಗುತ್ತದೆ.(AFP)
ಇತರ ಗ್ಯಾಲರಿಗಳು