ಏಕಾಏಕಿ 6 ಸ್ಥಾನ ಕುಸಿದ ಬಾಬರ್ ಅಜಮ್; 2 ಸ್ಥಾನ ಮೇಲೇರಿದ ವಿರಾಟ್ ಕೊಹ್ಲಿ; 6, 7, 8ನೇ ಶ್ರೇಯಾಂಕದಲ್ಲಿ ಭಾರತೀಯರು!-pakistan babar azam goes below virat kohli in latest icc test batting rankings after his twin failures vs bangladesh prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಕಾಏಕಿ 6 ಸ್ಥಾನ ಕುಸಿದ ಬಾಬರ್ ಅಜಮ್; 2 ಸ್ಥಾನ ಮೇಲೇರಿದ ವಿರಾಟ್ ಕೊಹ್ಲಿ; 6, 7, 8ನೇ ಶ್ರೇಯಾಂಕದಲ್ಲಿ ಭಾರತೀಯರು!

ಏಕಾಏಕಿ 6 ಸ್ಥಾನ ಕುಸಿದ ಬಾಬರ್ ಅಜಮ್; 2 ಸ್ಥಾನ ಮೇಲೇರಿದ ವಿರಾಟ್ ಕೊಹ್ಲಿ; 6, 7, 8ನೇ ಶ್ರೇಯಾಂಕದಲ್ಲಿ ಭಾರತೀಯರು!

  • ICC Test Ranking: ಐಸಿಸಿ ಟೆಸ್ಟ್ ಕ್ರಿಕೆಟ್ ನೂತನ ರ್ಯಾಂಕಿಂಗ್​ ಪಟ್ಟಿ ಪ್ರಕಟಗೊಂಡಿದೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್​​ಮನ್​ ಬಾಬರ್ ಅಜಮ್ ಏಕಾಏಕಿ 6 ಸ್ಥಾನ ಕುಸಿದಿದ್ದಾರೆ. ಯಾರಿಗೆ ಯಾವ ಸ್ಥಾನದಲ್ಲಿದ್ದಾರೆ ಎಂಬುದರ ವಿವರ ಇಲ್ಲಿದೆ.

ಪಾಕಿಸ್ತಾನದ ಸ್ಟಾರ್​ ಬ್ಯಾಟರ್​ ಬಾಬರ್ ಅಜಮ್ ಅವರು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಸೀಮಿತ ಓವರ್​​ಗಳ ಕ್ರಿಕೆಟ್​ ಜೊತೆಗೆ ಟೆಸ್ಟ್ ಕ್ರಿಕೆಟ್​​​ನಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದು ಅವರ ಟೆಸ್ಟ್​ ರ್ಯಾಂಕಿಂಗ್ ಮೇಲೆ ಪರಿಣಾಮ ಬೀರಿದೆ.
icon

(1 / 7)

ಪಾಕಿಸ್ತಾನದ ಸ್ಟಾರ್​ ಬ್ಯಾಟರ್​ ಬಾಬರ್ ಅಜಮ್ ಅವರು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಸೀಮಿತ ಓವರ್​​ಗಳ ಕ್ರಿಕೆಟ್​ ಜೊತೆಗೆ ಟೆಸ್ಟ್ ಕ್ರಿಕೆಟ್​​​ನಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದು ಅವರ ಟೆಸ್ಟ್​ ರ್ಯಾಂಕಿಂಗ್ ಮೇಲೆ ಪರಿಣಾಮ ಬೀರಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ನ​ ಮೊದಲ ಇನ್ನಿಂಗ್ಸ್​​​​ನಲ್ಲಿ ಡಕ್​ಔಟ್ ಆದರು. 2ನೇ ಇನ್ನಿಂಗ್ಸ್​​ನಲ್ಲಿ 22 ರನ್ ಗಳಿಸಿದರು. ಸತತ ವೈಫಲ್ಯಕ್ಕೆ ಒಳಗಾಗಿರುವ ಬಾಬರ್, ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತೀವ್ರ ಕುಸಿತ ಕಂಡಿದ್ದಾರೆ.
icon

(2 / 7)

ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ನ​ ಮೊದಲ ಇನ್ನಿಂಗ್ಸ್​​​​ನಲ್ಲಿ ಡಕ್​ಔಟ್ ಆದರು. 2ನೇ ಇನ್ನಿಂಗ್ಸ್​​ನಲ್ಲಿ 22 ರನ್ ಗಳಿಸಿದರು. ಸತತ ವೈಫಲ್ಯಕ್ಕೆ ಒಳಗಾಗಿರುವ ಬಾಬರ್, ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತೀವ್ರ ಕುಸಿತ ಕಂಡಿದ್ದಾರೆ.(AP)

ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ (ಆಗಸ್ಟ್ 28) ಬಾಬರ್, 6 ಸ್ಥಾನ ಕುಸಿತ ಕಂಡಿದ್ದಾರೆ. ಈ ಮೊದಲು ಅವರು 3ನೇ ಸ್ಥಾನದಲ್ಲಿದ್ದರು. ಇದೀಗ ಮೂರರಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನವು ಬಾಂಗ್ಲಾದೇಶದ ವಿರುದ್ಧ 10 ವಿಕೆಟ್​ ಹೀನಾಯ ಸೋಲು ಕಂಡಿತು.
icon

(3 / 7)

ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ (ಆಗಸ್ಟ್ 28) ಬಾಬರ್, 6 ಸ್ಥಾನ ಕುಸಿತ ಕಂಡಿದ್ದಾರೆ. ಈ ಮೊದಲು ಅವರು 3ನೇ ಸ್ಥಾನದಲ್ಲಿದ್ದರು. ಇದೀಗ ಮೂರರಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನವು ಬಾಂಗ್ಲಾದೇಶದ ವಿರುದ್ಧ 10 ವಿಕೆಟ್​ ಹೀನಾಯ ಸೋಲು ಕಂಡಿತು.(AP)

ಬಾಂಗ್ಲಾದೇಶ ವಿರುದ್ಧದ ಟೆಸ್ಟ್​​ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ವಿಕೆಟ್ ಕೀಪರ್​ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 7 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ. ಸೌದ್ ಶಕೀಲ್ ಒಂದು ಸ್ಥಾನ ಮೇಲೇರಿ 13ನೇ ಸ್ಥಾನದಲ್ಲಿದ್ದಾರೆ.
icon

(4 / 7)

ಬಾಂಗ್ಲಾದೇಶ ವಿರುದ್ಧದ ಟೆಸ್ಟ್​​ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ವಿಕೆಟ್ ಕೀಪರ್​ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 7 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ. ಸೌದ್ ಶಕೀಲ್ ಒಂದು ಸ್ಥಾನ ಮೇಲೇರಿ 13ನೇ ಸ್ಥಾನದಲ್ಲಿದ್ದಾರೆ.(AP)

ಈ ಟೆಸ್ಟ್​ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-10ರಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಬಾಬರ್ ಕುಸಿತ ಕಂಡರೆ, ವಿರಾಟ್ ಕೊಹ್ಲಿ 2, ಯಶಸ್ವಿ ಜೈಸ್ವಾಲ್ 1 ಸ್ಥಾನ ಏರಿಕೆ ಕಂಡಿದ್ದಾರೆ. ಇವರಿಬ್ಬರು ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿದ್ದಾರೆ. ರೋಹಿತ್​ ಶರ್ಮಾ 6ನೇ ಸ್ಥಾನ ಪಡೆದಿದ್ದಾರೆ.
icon

(5 / 7)

ಈ ಟೆಸ್ಟ್​ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-10ರಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಬಾಬರ್ ಕುಸಿತ ಕಂಡರೆ, ವಿರಾಟ್ ಕೊಹ್ಲಿ 2, ಯಶಸ್ವಿ ಜೈಸ್ವಾಲ್ 1 ಸ್ಥಾನ ಏರಿಕೆ ಕಂಡಿದ್ದಾರೆ. ಇವರಿಬ್ಬರು ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿದ್ದಾರೆ. ರೋಹಿತ್​ ಶರ್ಮಾ 6ನೇ ಸ್ಥಾನ ಪಡೆದಿದ್ದಾರೆ.(PTI)

ಇನ್ನು ಅಗ್ರಸ್ಥಾನದಲ್ಲಿ ಇಂಗ್ಲೆಂಡ್​ ಜೋ ರೂಟ್ ಮುಂದುವರೆದಿದ್ದಾರೆ. ನ್ಯೂಜಿಲೆಂಡ್​ನ ಕೇನ್​ ವಿಲಿಯಮ್ಸನ್, ಡೇರಿಲ್ ಮಿಚೆಲ್, ಇಂಗ್ಲೆಂಡ್​ನ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕ್ರಮವಾಗಿ 2, 3, 4, 5ನೇ ಸ್ಥಾನ ಪಡೆದಿದ್ದಾರೆ.
icon

(6 / 7)

ಇನ್ನು ಅಗ್ರಸ್ಥಾನದಲ್ಲಿ ಇಂಗ್ಲೆಂಡ್​ ಜೋ ರೂಟ್ ಮುಂದುವರೆದಿದ್ದಾರೆ. ನ್ಯೂಜಿಲೆಂಡ್​ನ ಕೇನ್​ ವಿಲಿಯಮ್ಸನ್, ಡೇರಿಲ್ ಮಿಚೆಲ್, ಇಂಗ್ಲೆಂಡ್​ನ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕ್ರಮವಾಗಿ 2, 3, 4, 5ನೇ ಸ್ಥಾನ ಪಡೆದಿದ್ದಾರೆ.(Action Images via Reuters)

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಬೌಲರ್ ಜೋಸ್ ಹೇಜಲ್​ವುಡ್ 2ನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಏಳನೇ ಸ್ಥಾನದಲ್ಲಿದ್ದಾರೆ. 
icon

(7 / 7)

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಬೌಲರ್ ಜೋಸ್ ಹೇಜಲ್​ವುಡ್ 2ನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಏಳನೇ ಸ್ಥಾನದಲ್ಲಿದ್ದಾರೆ. (PTI)


ಇತರ ಗ್ಯಾಲರಿಗಳು