300 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಪಂಚಗ್ರಹಿ ಯೋಗ; ಕೆಲಸದಲ್ಲಿ ಬಡ್ತಿ, ಆರ್ಥಿಕ ಲಾಭ, ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಗ್ರಹಗಳ ರಾಶಿ ಬದಲಾವಣೆಯಿಂದ ಕೆಲವೊಂದು ಯೋಗ ಉಂಟಾಗುತ್ತದೆ. ಅದರಲ್ಲಿ ಪಂಚಗ್ರಹಿ ಯೋಗ ಕೂಡಾ ಒಂದು. ಜೂನ್‌ನಲ್ಲಿ ಸೂರ್ಯ, ಶುಕ್ರ, ಬುಧ, ಗುರು ಮತ್ತು ಚಂದ್ರರು ವೃಷಭ ರಾಶಿಯಲ್ಲಿರುತ್ತಾರೆ.ಈ ಪಂಚಗ್ರಹಿ ಯೋಗದಿಂದ ಕೆಲವೊಂದು ರಾಶಿಯವರಿಗೆ ಬಹಳ ಒಳ್ಳೆಯದಾಗಲಿದೆ. ಯಾವ ರಾಶಿಯವರು ಯಾವ ರೀತಿಯ ಫಲಗಳನ್ನು ಪಡೆಯಲಿದ್ದಾರೆ ನೋಡೊಣ.
(1 / 9)
ನಿರಂತರ ಚಲನೆಯಿಂದಾಗಿ ಗ್ರಹಗಳ ರಾಶಿಯು ಬದಲಾಗುತ್ತಲೇ ಇರುತ್ತದೆ ಮತ್ತು ಈ ಕಾರಣದಿಂದಾಗಿ ರಾಶಿಯಲ್ಲಿ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಲ್ಲಿ ಪಂಚಗ್ರಾಹಿ ಯೋಗಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಪಂಚಗ್ರಹಿ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕುಂಡಲಿಯಲ್ಲಿ ಒಂದು ಮನೆಯಲ್ಲಿ 5 ಗ್ರಹಗಳು ಸೇರಿದಾಗ ಪಂಚಗ್ರಹಿ ಯೋಗ ಉಂಟಾಗುತ್ತದೆ.
(2 / 9)
ಪಂಚಗ್ರಾಹಿ ಯೋಗದ ಪರಿಣಾಮಗಳು: ಪಂಚಗ್ರಾಹಿ ಯೋಗವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಮಂಗಳಕರ ಯೋಗದಿಂದಾಗಿ ವ್ಯಕ್ತಿಯು ಸಮಾಜದಲ್ಲಿ ಗೌರವ ಪಡೆಯುತ್ತಾನೆ ಮತ್ತು ಉನ್ನತ ಸ್ಥಾನ ಪಡೆದುಕೊಳ್ಳುತ್ತಾನೆ. ಅಲ್ಲದೆ ಕೆಲವರು ಪಂಚಗ್ರಹಿ ಯೋಗದಿಂದ ಪ್ರಭಾವಿತರಾಗಿ ನಷ್ಟ ಅನುಭವಿಸಬಹುದು. ಪಂಚಗ್ರಹಿ ಯೋಗದ ಪರಿಣಾಮವು ಪ್ರತಿ ರಾಶಿಗೆ ವಿಭಿನ್ನವಾಗಿರುತ್ತದೆ.
(3 / 9)
ಹಿಂದೂ ಪಂಚಾಂಗದ ಪ್ರಕಾರ, ಸುಮಾರು 300 ವರ್ಷಗಳ ನಂತರ ಜೂನ್ ತಿಂಗಳಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತಿದೆ ಮತ್ತು ಈ ಸಮಯದಲ್ಲಿ ಕೇತುವು ಈ ಯೋಗವನ್ನು ಸೃಷ್ಟಿಸುತ್ತಾನೆ. ಈ ಕಾರಣದಿಂದಾಗಿ ಮೇಷ, ಕರ್ಕ, ತುಲಾ ಮತ್ತು ವೃಶ್ಚಿಕ ರಾಶಿಯ ಸ್ಥಳೀಯರು ಹೆಚ್ಚಿನ ಲಾಭವನ್ನು ಪಡೆಯಬಹುದು.ಜೂನ್ 05 ರಂದು ಬೆಳಗ್ಗೆ 04:14 ರಿಂದ ಜೂನ್ 07 ರ ಬೆಳಗ್ಗೆ 07:55 ರವರೆಗೆ, ಸೂರ್ಯ, ಶುಕ್ರ, ಬುಧ, ಗುರು ಮತ್ತು ಚಂದ್ರರು ವೃಷಭ ರಾಶಿಯಲ್ಲಿರುತ್ತಾರೆ. ಇದಕ್ಕೂ ಮುನ್ನವೇ ಪಂಚಗ್ರಾಹಿ ಯೋಗ ರೂಪುಗೊಂಡಿತ್ತು. ಆ ಸಮಯದಲ್ಲಿ ಕೇತುವೂ ಪಂಚಗ್ರಹಗಳಿಗೆ ಸೇರಿದ್ದರಿಂದ ಈ ಯೋಗದ ಶುಭ ಫಲಗಳು ಕಡಿಮೆಯಾಗಿದ್ದವು.
(4 / 9)
ಮೇಷ ರಾಶಿಯ ಎರಡನೇ ಮನೆಯಲ್ಲಿ ಪಂಚಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಈ ಸೇರ್ಪಡೆಯು ಆರ್ಥಿಕ ಲಾಭವನ್ನು ತರುತ್ತದೆ. ಗೌರವ ಹೆಚ್ಚಾಗುತ್ತದೆ ಮತ್ತು ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.
(5 / 9)
ವೃಷಭ ರಾಶಿಯವರಿಗೆ ಆರೋಗ್ಯ ಸಾಮಾನ್ಯವಾಗಿರುತ್ತದೆ. ವ್ಯಾಪಾರ ಲಾಭದಾಯಕವಾಗಿರುತ್ತದೆ. ಪಂಚಗ್ರಹಿ ಯೋಗದಿಂದಾಗಿ ಶೀಘ್ರದಲ್ಲೇ ವಿವಾಹವಾಗುವ ಸಾಧ್ಯತೆಯಿದೆ.
(6 / 9)
ಮಿಥುನ ರಾಶಿಯವರಿಗೆ ಆದಾಯ ಹೆಚ್ಚಾದಂತೆ ಖರ್ಚುಗಳೂ ಹೆಚ್ಚಾಗುತ್ತವೆ. ಆದ್ದರಿಂದ ಖರ್ಚು ವೆಚ್ಚದ ಕಡೆ ಗಮನ ನೀಡಬೇಕು. ಕಾನೂನು ವಿಷಯಗಳಲ್ಲಿ ಜಯ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿ ಯಶಸ್ಸು ಕಾಣುವಿರಿ.
(7 / 9)
ಕರ್ಕಾಟಕ ರಾಶಿಯವರಿಗೆ ಪಂಚಗ್ರಹಿ ಯೋಗದಿಂದ ಹಣ ಮತ್ತು ವ್ಯವಹಾರದಲ್ಲಿ ಲಾಭವಿದೆ. ಒತ್ತಡ ಕಡಿಮೆ ಆಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಬಹುದು.
(8 / 9)
ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಒತ್ತಡ ದೂರವಾಗುತ್ತದೆ. ಪೋಷಕರ ಆರೋಗ್ಯ ಸುಧಾರಿಸುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಇತರ ಗ್ಯಾಲರಿಗಳು