Parenting Tips: ಮಕ್ಕಳು ಮಾತು ಕೇಳುತ್ತಿಲ್ಲವೇ; ಹಟವಾದಿ ಮಕ್ಕಳೊಂದಿಗೆ ಹೀಗಿರಲಿ ಪೋಷಕರ ವರ್ತನೆ-parenting tips things to do when your kid refuses to listen children love child care father and mother kannada rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Parenting Tips: ಮಕ್ಕಳು ಮಾತು ಕೇಳುತ್ತಿಲ್ಲವೇ; ಹಟವಾದಿ ಮಕ್ಕಳೊಂದಿಗೆ ಹೀಗಿರಲಿ ಪೋಷಕರ ವರ್ತನೆ

Parenting Tips: ಮಕ್ಕಳು ಮಾತು ಕೇಳುತ್ತಿಲ್ಲವೇ; ಹಟವಾದಿ ಮಕ್ಕಳೊಂದಿಗೆ ಹೀಗಿರಲಿ ಪೋಷಕರ ವರ್ತನೆ

  • kid Refuses to listen Parents: ಮಕ್ಕಳು ಮಾತು ಕೇಳುತ್ತಿಲ್ಲ, ಅವರದ್ದೇ ನಡೆಯಬೇಕು ಎನ್ನುವ ಹಟ, ಇದು ನಿಜಕ್ಕೂ ಬೇಸರ ತರಿಸುತ್ತಿದೆʼ ಇದು ಇಂದಿನ ಬಹುತೇಕ ಪೋಷಕರ ಅಳಲು. ನಿಮ್ಮ ನಿರ್ಧಾರಗಳಿಂದ ಒಂದು ಹೆಜ್ಜೆ ಹಿಂದೆ ಸರಿಯುವುದರಿಂದ ಹಿಡಿದು, ಇತಿಮಿತಿಗಳನ್ನು ಅರಿಯುವವರೆಗೆ ಮಾತು ಕೇಳದ ಮಕ್ಕಳ ಹೀಗಿರಲಿ ಪೋಷಕರ ವರ್ತನೆ.

ಮಕ್ಕಳು ಪೋಷಕರ ಮಾತು ಕೇಳದೇ ಇರುವುದು ಇತ್ತೀಚೆಗೆ ಸಾಮಾನ್ಯ. ಹಲವು ಮನೆಗಳಲ್ಲಿ ಮಕ್ಕಳು ಮಾತು ಕೇಳುತ್ತಿಲ್ಲ ಎಂದು ದೂರುವ ಪೋಷಕರನ್ನು ನೋಡಿದ್ದೇವೆ. ಅವರು ನಿಮ್ಮ ಮೇಲೆ ಸಿಟ್ಟಾಗುವುದು, ಅವರು ಹೇಳಿದ್ದನ್ನು ಕೇಳದೇ ಇದ್ದಾಗ ಅವರದ್ದೇ ಮಾರ್ಗದಲ್ಲಿ ಹೋಗಿ ಅದನ್ನು ಪಡೆಯಲು ಯತ್ನಿಸುವುದು ಇದೆಲ್ಲವೂ ಸಹಜ. ಆದರೆ ಮಕ್ಕಳ ಈ ವರ್ತನೆಯಿಂದ ಕೆಲವೊಮ್ಮೆ ನಾವು ತಾಳ್ಮೆ ಕಳೆದುಕೊಳ್ಳುತ್ತೇವೆ. ಅವರಿಗೆ ಹೊಡೆಯುವುದು ಬಡಿಯುವುದು ಮಾಡುತ್ತೇವೆ. ಆದರೆ ಈ ವರ್ತನೆ ಸಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞ ಜಾಜ್ಮಿನ್‌ ಮೆಕಾಯ್‌. ಈ ಬಗ್ಗೆ ಪೋಷಕರಿಗೆ ಸಲಹೆ ನೀಡುವ ಅವರು ʼಹಟವಾದಿ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರೊಂದಿಗೆ ಆರೋಗ್ಯಕರ ಗಡಿ ಹೊಂದಿಸಲು ಪ್ರಯತ್ನಿಸಬೇಕು. ಇದರಿಂದ ಅವರು ಅರ್ಥ ಮಾಡಿಕೊಳ್ಳಬಹುದು. ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬಹುದುʼ ಹಾಗಾದರೆ ಹಟವಾದಿ ಮಕ್ಕಳೊಂದಿಗೆ ನಿಮ್ಮ ವರ್ತನೆ ಹೇಗಿರಬೇಕು, ನೋಡಿ.  
icon

(1 / 6)

ಮಕ್ಕಳು ಪೋಷಕರ ಮಾತು ಕೇಳದೇ ಇರುವುದು ಇತ್ತೀಚೆಗೆ ಸಾಮಾನ್ಯ. ಹಲವು ಮನೆಗಳಲ್ಲಿ ಮಕ್ಕಳು ಮಾತು ಕೇಳುತ್ತಿಲ್ಲ ಎಂದು ದೂರುವ ಪೋಷಕರನ್ನು ನೋಡಿದ್ದೇವೆ. ಅವರು ನಿಮ್ಮ ಮೇಲೆ ಸಿಟ್ಟಾಗುವುದು, ಅವರು ಹೇಳಿದ್ದನ್ನು ಕೇಳದೇ ಇದ್ದಾಗ ಅವರದ್ದೇ ಮಾರ್ಗದಲ್ಲಿ ಹೋಗಿ ಅದನ್ನು ಪಡೆಯಲು ಯತ್ನಿಸುವುದು ಇದೆಲ್ಲವೂ ಸಹಜ. ಆದರೆ ಮಕ್ಕಳ ಈ ವರ್ತನೆಯಿಂದ ಕೆಲವೊಮ್ಮೆ ನಾವು ತಾಳ್ಮೆ ಕಳೆದುಕೊಳ್ಳುತ್ತೇವೆ. ಅವರಿಗೆ ಹೊಡೆಯುವುದು ಬಡಿಯುವುದು ಮಾಡುತ್ತೇವೆ. ಆದರೆ ಈ ವರ್ತನೆ ಸಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞ ಜಾಜ್ಮಿನ್‌ ಮೆಕಾಯ್‌. ಈ ಬಗ್ಗೆ ಪೋಷಕರಿಗೆ ಸಲಹೆ ನೀಡುವ ಅವರು ʼಹಟವಾದಿ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರೊಂದಿಗೆ ಆರೋಗ್ಯಕರ ಗಡಿ ಹೊಂದಿಸಲು ಪ್ರಯತ್ನಿಸಬೇಕು. ಇದರಿಂದ ಅವರು ಅರ್ಥ ಮಾಡಿಕೊಳ್ಳಬಹುದು. ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬಹುದುʼ ಹಾಗಾದರೆ ಹಟವಾದಿ ಮಕ್ಕಳೊಂದಿಗೆ ನಿಮ್ಮ ವರ್ತನೆ ಹೇಗಿರಬೇಕು, ನೋಡಿ.  (Unsplash)

ಮಗು ಪೋಷಕರನ್ನು ವಿರೋಧಿಸಲು ಆರಂಭಿಸಿದರೆ, ನಾವೇ ಒಂದು ಹೆಜ್ಜೆ ಹಿಂದೆ ಸರಿಯಬೇಕು. ಸಂಬಂಧದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುವ ಬದಲು ಅವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.  
icon

(2 / 6)

ಮಗು ಪೋಷಕರನ್ನು ವಿರೋಧಿಸಲು ಆರಂಭಿಸಿದರೆ, ನಾವೇ ಒಂದು ಹೆಜ್ಜೆ ಹಿಂದೆ ಸರಿಯಬೇಕು. ಸಂಬಂಧದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುವ ಬದಲು ಅವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.  (Unsplash)

ಕೆಲವೊಮ್ಮೆ ಮಗುವಿಗೆ ನೀವು ವಿಧಿಸಿದ ಗಡಿ ರೇಖೆಗಳು ತೊಂದರೆ ಉಂಟು ಮಾಡಬಹುದು. ನಿಮ್ಮ ಇತಿಮಿತಿಗಳು ಮಕ್ಕಳ ಮನಸ್ಸಿನ ಮೇಲೆ ಬೇರೆಯದ್ದೇ ರೀತಿ ಪರಿಣಾಮ ಬೀರಬಹುದು. ಆದರೆ ಮಗುವಿನ ಬಗ್ಗೆ ನಾನು ಅನುಭೂತಿ ಹಾಗೂ ಕಾಳಜಿ ತೋರುವುದು ಮುಖ್ಯವಾಗುತ್ತದೆ. 
icon

(3 / 6)

ಕೆಲವೊಮ್ಮೆ ಮಗುವಿಗೆ ನೀವು ವಿಧಿಸಿದ ಗಡಿ ರೇಖೆಗಳು ತೊಂದರೆ ಉಂಟು ಮಾಡಬಹುದು. ನಿಮ್ಮ ಇತಿಮಿತಿಗಳು ಮಕ್ಕಳ ಮನಸ್ಸಿನ ಮೇಲೆ ಬೇರೆಯದ್ದೇ ರೀತಿ ಪರಿಣಾಮ ಬೀರಬಹುದು. ಆದರೆ ಮಗುವಿನ ಬಗ್ಗೆ ನಾನು ಅನುಭೂತಿ ಹಾಗೂ ಕಾಳಜಿ ತೋರುವುದು ಮುಖ್ಯವಾಗುತ್ತದೆ. (Unsplash)

ಮಕ್ಕಳ ದಿನಚರಿಯ ವಿಚಾರದಲ್ಲಿ ಹಾಗೂ ಗಡಿ ವಿಧಿಸುವ ವಿಚಾರದಲ್ಲಿ ಪ್ರಮಾಣಿಕವಾಗಿರಬೇಕು ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು. ಮಗುವಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಮಗುವಿಗೆ ನೀಡುವ ಪ್ರಾಮುಖ್ಯದ ವಿಚಾರದಲ್ಲಿ ವ್ಯತ್ಯಾಸ ಉಂಟಾಗಬಾರದು. 
icon

(4 / 6)

ಮಕ್ಕಳ ದಿನಚರಿಯ ವಿಚಾರದಲ್ಲಿ ಹಾಗೂ ಗಡಿ ವಿಧಿಸುವ ವಿಚಾರದಲ್ಲಿ ಪ್ರಮಾಣಿಕವಾಗಿರಬೇಕು ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು. ಮಗುವಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಮಗುವಿಗೆ ನೀಡುವ ಪ್ರಾಮುಖ್ಯದ ವಿಚಾರದಲ್ಲಿ ವ್ಯತ್ಯಾಸ ಉಂಟಾಗಬಾರದು. (Unsplash)

ಮಗುವಿನೊಂದಿಗೆ ಸ್ನೇಹಭಾವದಿಂದ ವರ್ತಿಸಿ. ಅವರು ಹೇಳುವುದನ್ನು ಕೇಳಿಸಿಕೊಂಡು ಸರಿ, ತಪ್ಪು ಯಾವುದು ಎಂಬುದನ್ನು ವಿವರಿಸಿ. ಅರ್ಥ ಮಾಡಿಸಿ, ತಿಳಿ ಹೇಳಲು ಪ್ರಯತ್ನಿಸಿ. 
icon

(5 / 6)

ಮಗುವಿನೊಂದಿಗೆ ಸ್ನೇಹಭಾವದಿಂದ ವರ್ತಿಸಿ. ಅವರು ಹೇಳುವುದನ್ನು ಕೇಳಿಸಿಕೊಂಡು ಸರಿ, ತಪ್ಪು ಯಾವುದು ಎಂಬುದನ್ನು ವಿವರಿಸಿ. ಅರ್ಥ ಮಾಡಿಸಿ, ತಿಳಿ ಹೇಳಲು ಪ್ರಯತ್ನಿಸಿ. (Unsplash)

ಕೋಪದಿಂದ ಎಂದಿಗೂ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಪ್ರಯತ್ನಿಸಬೇಡಿ. ಇದರಿಂದ ಎಂದಿಗೂ ಒಳಿತಾಗುವುದಿಲ್ಲ. ಮಗುವಿನೊಂದಿಗೆ ಶಾಂತ ಮನೋಭಾವದಿಂದ ಕುಳಿತು ಮಾತನಾಡಿ. ಮಾತನಾಡಿದ ಬಳಿಕ ಶಾಂತ ಮನಸ್ಸಿನಿಂದ, ತಿಳುವಳಿಕೆ ನಿರ್ಧಾರ ತೆಗೆದುಕೊಳ್ಳಿ. 
icon

(6 / 6)

ಕೋಪದಿಂದ ಎಂದಿಗೂ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಪ್ರಯತ್ನಿಸಬೇಡಿ. ಇದರಿಂದ ಎಂದಿಗೂ ಒಳಿತಾಗುವುದಿಲ್ಲ. ಮಗುವಿನೊಂದಿಗೆ ಶಾಂತ ಮನೋಭಾವದಿಂದ ಕುಳಿತು ಮಾತನಾಡಿ. ಮಾತನಾಡಿದ ಬಳಿಕ ಶಾಂತ ಮನಸ್ಸಿನಿಂದ, ತಿಳುವಳಿಕೆ ನಿರ್ಧಾರ ತೆಗೆದುಕೊಳ್ಳಿ. (Unsplash)


ಇತರ ಗ್ಯಾಲರಿಗಳು