ತಾಜಾ ತಾಜಾ ಕಡ್ಲೆ ಕಾಯಿ; ಬಸವನಗುಡಿಯಲ್ಲಿ ಇಂದಿನಿಂದಲೇ ಕಡ್ಲೆ ಕಾಯಿ ಪರಿಷೆಗೆ ಜಮಾಯಿಸಿದ ಜನ, ವ್ಯಾಪಾರ ಜೋರು; ಫೋಟೊಸ್
ಬೆಂಗಳೂರಿನಲ್ಲಿ ಡಿಸೆಂಬರ್ 11ರ ಸೋಮವಾರದಿಂದ ಐತಿಹಾಸಿಕ ಬಸವನಗುಡಿ ಕಡ್ಲೆ ಕಾಯಿ ಪರಿಷೆ ಆರಂಭವಾಗಲಿದೆ. ಆದರೆ ಇಂದಿನಿಂದ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಫೋಟೊಸ್ ನೋಡಿ.
(1 / 8)
ನಾಳೆಯಿಂದ (ಡಿಸೆಂಬರ್ 11, ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿ ಅದ್ಧೂರಿಯ ಕಡ್ಲೆ ಕಾಯಿ ಪರಿಷೆ ಆರಂಭವಾಗಲಿದೆ. ಇಂದಿನಿಂದಲೇ (ಡಿಸೆಂಬರ್ 10, ಭಾನುವಾರ) ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ತಾಜಾ ತಾಜಾ ಕಡ್ಲೆ ಕಾಯಿ ರಾಶಿಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ.
(2 / 8)
ತಾಜಾ ತಾಜಾ ಕಡಲೆ ಕಾಯಿ ಸವಿಯಬೇಕಾದರೆ ನೀವು ಕೂಡ ನಾಳೆಯಿಂದ 4 ದಿನಗಳ ಕಾಲ ನಡೆಯುವ ಬಸವನಗುಡಿ ಕಡ್ಲೆ ಕಾಯಿ ಪರಿಷೆಗೆ ಭೇಟಿ ನೀಡಿ. ಈ ಬಾರಿ ಪರಿಷೆಗೆ ಬನ್ನಿ ಕೈ ಚೀಲ ತನ್ನಿ ಎಂಬ ಅಭಿಯಾನದೊಂದಿಗೆ ಜಾತ್ರೆಯನ್ನು ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆ ಇದರ ಉದ್ದೇಶವಾಗಿದೆ.
(3 / 8)
ನೀವು ಕಡ್ಲೆ ಕಾಯಿ ಪರಿಷೆಗೆ ಹೋದರೆ ತಾಜಾ ತಾಜಾ ಕಡ್ಲೆ ಕಾಯಿ ಜೊತೆಗೆ ಕಡಲೆಪುರಿ, ಮಿಕ್ಸರ್, ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಸವಿಯಬಹುದು.
(4 / 8)
ಬಸವನಗುಡಿ ಕಡ್ಲೆ ಕಾಯಿ ಪರಿಷೆಯಲ್ಲಿ ಮಕ್ಕಳ ಮನರಂಜನೆಗಾಗಿ ವಿವಿಧ ಆಟಗಳು ಕೂಡ ಇರಲಿವೆ. ಮಕ್ಕಳನ್ನು ಕರೆದುಕೊಂಡು ಹೋದರೆ ಸಖತ್ ಎಂಜಾಯ್ ಮಾಡಲಿದ್ದಾರೆ.
(5 / 8)
ಮರದಿಂದ ಮಾಡಿದ ಮಕ್ಕಳಿಗೆ ಬೇಕಾದ ಆಟದ ವಸ್ತುಗಳನ್ನು ಕಡ್ಲೆಕಾಯಿ ಪರಿಷೆಯಲ್ಲಿ ಕಾಣಬಹುದು. ಪರಿಷೆಯಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಕವರ್ ನಿಷೇಧಿಸಲಾಗಿದೆ.
(6 / 8)
ರೈತರೇ ನೇರವಾಗಿ ಕಡ್ಲೆ ಕಾಯಿಯನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಹೀಗಾಗಿ ಕಡಿಮೆ ಬೆಲೆಗೆ ತಾಜಾ ತಾಜಾ ಕಡ್ಲೆ ಕಾಯಿ ಖರೀದಿಸಬಹುದು.
(7 / 8)
ವರ್ಷಕ್ಕೊಮ್ಮೆ ನಡೆಯುವ ಬಸವನಗುಡಿ ಕಡ್ಲೆ ಕಾಯಿ ಪರಿಷೆಗೆ ಮಿಸ್ ಮಾಡದೆ ಭೇಟಿ ಕೊಟ್ಟು ನೋಡಿ. ಬಸವನಗುಡಿ ಸುತ್ತಮುತ್ತಲಿನ ಜನರು ಮಾತ್ರವಲ್ಲದೆ, ನಗರ ಇತರೆ ಪ್ರದೇಶಗಳಿಂದ ಜನರು ಇಲ್ಲಿಗೆ ಪರಿಷೆ ನೋಡಲು ಬರುತ್ತಾರೆ.
ಇತರ ಗ್ಯಾಲರಿಗಳು