ಕನ್ನಡ ಸುದ್ದಿ  /  Photo Gallery  /  Political News Bjp Changed Working Chief Ministers In Karnataka Haryana Uttarakhand Tripura Gujrat Kub

BJP CM Change: 3 ವರ್ಷದಲ್ಲೇ 7 ಸಿಎಂಗಳನ್ನು ಬದಲು ಮಾಡಿದ ಬಿಜೆಪಿ, ಯಾವ ರಾಜ್ಯದ ಮುಖ್ಯಮಂತ್ರಿ ಬದಲಾವಣೆ photos

  • ಬಿಜೆಪಿ ಅಧಿಕಾರದಲ್ಲಿರುವ ಐದು ರಾಜ್ಯಗಳಲ್ಲಿ ಏಳು ಮುಖ್ಯಮಂತ್ರಿಗಳನ್ನು ಮೂರು ವರ್ಷದ ಅವಧಿಯಲ್ಲಿ ಬದಲಾಯಿಸಲಾಗಿದೆ. 

ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ತಂದು ಕೊಟ್ಟವರು ಬಿ.,ಎಸ್‌.ಯಡಿಯೂರಪ್ಪ. ನಾಲ್ಕು ಬಾರಿ ಸಿಎಂ ಆದರೂ ಒಮ್ಮೆಯೂ ಪೂರ್ಣಾವಧಿ ಆಗಲಿಲ್ಲ. ಎರಡು ಬಾರಿ ಅವರನ್ನು ಬದಲಾಯಿಸಲಾಯಿತು. ಮೊದಲ ಬಾರಿ ಲೋಕಾಯುಕ್ತ ಕಾರಣಕ್ಕೆ.ಎರಡನೇ ಬಾರಿ ವಯಸ್ಸಿನ ಕಾರಣ ನೀಡಿ ಮೂರು ವರ್ಷದ ಹಿಂದೆ ಬಿಜೆಪಿ ನಾಯಕರು ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟ ನೀಡಿದರು.
icon

(1 / 7)

ಗುಜರಾತ್‌ನಲ್ಲಿ ಎರಡು ಬಾರಿ ಸಿಎಂ ಆಗಿದ್ದ ವಿಜಯರೂಪಾಣಿ ಅವರನ್ನು ಮೂರು ವರ್ಷದ ಹಿಂದೆ ಬದಲಿಸಿ ಭುಪೇಂದ್ರ ಬಾಯ್‌ ಪಟೇಲ್‌ ಅವರನ್ನು ನೇಮಿಸಲಾಯಿತು. 
icon

(2 / 7)

ತ್ರಿಪುರದಲ್ಲಿ ಕಾಮ್ರೆಡ್‌ ಸರ್ಕಾರವನ್ನು ಬದಲಿಸಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದ್ದ ಬಿಪ್ಲವ್‌ ಕುಮಾರ್ ದೇಬ್‌ ‌ ಅವರನ್ನು ಮೂರು ವರ್ಷದ ಹಿಂದೆ ಬದಲಾಯಿಸಲಾಯಿತು. ನಾಲ್ಕು ವರ್ಷ ಸಿಎಂ ಆಗಿದ್ದ ದೇಬ್‌ ಅವರು ದಂತ ತಜ್ಞರಾದ ಮಾಣಿಕ್‌ ಸಹಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಅಧಿಕಾರವನ್ನು ದೇಬ್‌ ಕಳೆದುಕೊಂಡು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.
icon

(3 / 7)

ಉತ್ತರಾಖಂಡ ಕೆಲವೇ ದಿನದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ಮೊದಲು ತ್ರಿವೇಂದ್ರ ಸಿಂಗ್‌ ರಾವತ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅವರನ್ನು ಬದಲಾಯಿಸಲಾಯಿತು. 
icon

(4 / 7)

ಸಂಸದರಾಗಿದ್ದ ತೀರತ್‌ ಸಿಂಗ್‌ ರಾವತ್‌ ಅವರಿಗೆ ಉತ್ತರಾಖಂಡದಲ್ಲಿ ಅಧಿಕಾರ ನೀಡಲಾಯಿತು. ಆದರೆ ಅವರು ನಾಲ್ಕು ತಿಂಗಳೂ ಸಿಎಂ ಆಗಿರಲಿಲ್ಲ. ಏಕಾಏಕಿ ಅವರನ್ನು ಬದಲಾಯಿಸಿತು ಬಿಜೆಪಿ.
icon

(5 / 7)

ಆನಂತರ ಮೋದಿ ಹಾಗೂ ಅಮಿತ್‌ ಶಾ ಅವರೊಂದಿಗೆ ಆತ್ಮೀಯವಾಗಿರುವ ಯುವ ನಾಯಕ ಪುಷ್ಕರ್‌ ಸಿಂಗ್‌ ಧಮಿ ಅವರನ್ನು ಸಿಎಂ ಆಗಿ ನಿಯೋಜಿಸಲಾಯಿತು. ಈಗ ಅವರು ಎರಡನೇ ಅವಧಿಗೂ ಸಿಎಂ ಆಗಿ ಎರಡು ವರ್ಷದಿಂದ ಇದ್ದಾರೆ. 
icon

(6 / 7)

ಹರಿಯಾಣದ ಹಿರಿಯ ಬಿಜೆಪಿ ನಾಯಕ ಮನೋಹರಲಾಲ್‌ ಖಟ್ಟರ್‌ ಎರಡು ಅವಧಿಯಿಂದ ಸಿಎಂ ಆಗಿದ್ದವರು. ಇನ್ನು ಆರು ತಿಂಗಳ ಅವಧಿ ಇರುವ ಮುನ್ನವೇ ಹರಿಯಾಣದಲ್ಲಿ ಅಧಿಕಾರದಿಂದ ಕೆಳಕ್ಕೆ ಇಳಿಸಲಾಯಿತು. ಈಗ ನಯಾಬ್‌ ಸಿಂಗ್‌ ಸೈನಿ ಅವರನ್ನು ಹರಿಯಾಣ ಸಿಎಂ ಆಗಿ ನಿಯೋಜಿಸಲಾಗಿದೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು