ನಾರ್ವೆ ಚೆಸ್: ವಿಶ್ವದ ನಂಬರ್ 1 ಆಟಗಾರನ ಬಳಿಕ ಎರಡನೇ ಶ್ರೇಯಾಂಕಿತನನ್ನೂ ಸೋಲಿಸಿದ ಪ್ರಜ್ಞಾನಂದ
- R Praggnanandhaa: ಭಾರತದ ಯುವ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ, ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರನನ್ನು ಮಣಿಸಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಪ್ರಜ್ಞಾನಂದ, ನಾರ್ವೆ ಚೆಸ್ ಪಂದ್ಯಾವಳಿಯ ಐದನೇ ಸುತ್ತಿನ ಮುಕ್ತಾಯದ ನಂತರ ವಿಶ್ವ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.

(1 / 6)
ಭಾರತದ ಯುವ ಚೆಸ್ ಸೆನ್ಸೇಷನ್ ಪ್ರಜ್ಞಾನಂದ, ಶನಿವಾರ ರಾತ್ರಿ ನಡೆದ ನಾರ್ವೆ ಚೆಸ್ ಪಂದ್ಯಾವಳಿಯ ಐದನೇ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿದ್ದಾರೆ. ಇದರೊಂದಿಗೆ ಸ್ಪರ್ಧೆಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ.(PTI)
(2 / 6)
ಈ ಗೆಲುವಿನೊಂದಿಗೆ, ಅವರು ಮೊದಲ ಬಾರಿಗೆ ವಿಶ್ವದ ನಂಬರ್ ವನ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ವಿಶ್ವದ ಎರಡನೇ ಶ್ರೇಯಾಂಕದ ಕರುವಾನಾ ಅವರನ್ನು ಸೋಲಿಸಿದ ದಾಖಲೆ ನಿರ್ಮಿಸಿದ್ದಾರೆ. (PTI)
(3 / 6)
ಈ ಗೆಲುವಿನೊಂದಿಗೆ ಪ್ರಜ್ಞಾನಂದ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ವಿಶ್ವ ಶ್ರೇಯಾಂಕದಲ್ಲಿ ಅಗ್ರ ಹತ್ತರೊಳಗೆ ಬಂದಿದ್ದಾರೆ.(PTI)
(4 / 6)
ಸ್ಪರ್ಧೆಯ 3ನೇ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಹಾಗೂ ಐದು ಬಾರಿಯ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಭಾರತೀಯ ಸೋಲಿಸಿದ್ದರು. ಅದಾದ ಒಂದು ದಿನದಲ್ಲಿ ನಡೆದ 5ನೇ ಸುತ್ತಿನಲ್ಲಿ ವಿಶ್ವದ ನಂ.2 ಆಟಗಾರನನ್ನು ಕೂಡಾ ಮಣಿಸಿದ್ದಾರೆ. (PTI)
(5 / 6)
ಯುನೈಟೆಡ್ ಸ್ಟೇಟ್ಸ್‌ನ ಹಿಕರು ನಕಮುರಾ ಸದ್ಯ 10 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ಕಾರ್ಲ್‌ಸನ್ ಎರಡನೇ ಸ್ಥಾನದಲ್ಲಿದ್ದು, ಇನ್ನೂ ಐದು ಸುತ್ತುಗಳು ಬಾಕಿ ಇರುವಾಗ, 8.5 ಅಂಕಗಳೊಂದಿಗೆ ಪ್ರಜ್ಞಾನಂದ ನಂತರದ ಸ್ಥಾನದಲ್ಲಿದ್ದಾರೆ.(PTI)
ಇತರ ಗ್ಯಾಲರಿಗಳು