ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವದಾಖಲೆ ನಿರ್ಮಿಸಿದ ಪ್ರಜ್ಞಾನಂದ, ವೈಶಾಲಿ; ಈ ಅಕ್ಕ-ತಮ್ಮನಿಂದ ಕಲಿಯಲು ಎಷ್ಟೊಂದಿದೆ
- ಚೆಸ್ ಚತುರ ಆರ್ ಪ್ರಜ್ಞಾನಂದ ಮತ್ತು ಅವರ ಸಹೋದರಿ ವೈಶಾಲಿ ವಿಶೇಷ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚೆಸ್ ಗ್ರ್ಯಾಂಡ್ ಮಾಸ್ಟರ್ ಸಾಧನೆ ಮಾಡಿದ ವಿಶ್ವದ ಮೊದಲ ಸಹೋದರರು (ಅಕ್ಕ-ತಮ್ಮ) ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆಯೇ ಪ್ರಜ್ಞಾನಂದ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಇತ್ತೀಚೆಗೆ ಸಹೋದರಿ ವೈಶಾಲಿ ಕೂಡಾ ಈ ಸಾಧನೆ ಮಾಡಿದ್ದಾರೆ.
- ಚೆಸ್ ಚತುರ ಆರ್ ಪ್ರಜ್ಞಾನಂದ ಮತ್ತು ಅವರ ಸಹೋದರಿ ವೈಶಾಲಿ ವಿಶೇಷ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚೆಸ್ ಗ್ರ್ಯಾಂಡ್ ಮಾಸ್ಟರ್ ಸಾಧನೆ ಮಾಡಿದ ವಿಶ್ವದ ಮೊದಲ ಸಹೋದರರು (ಅಕ್ಕ-ತಮ್ಮ) ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆಯೇ ಪ್ರಜ್ಞಾನಂದ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಇತ್ತೀಚೆಗೆ ಸಹೋದರಿ ವೈಶಾಲಿ ಕೂಡಾ ಈ ಸಾಧನೆ ಮಾಡಿದ್ದಾರೆ.
(1 / 5)
ವೈಶಾಲಿ ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಕೆತ್ತಿದ್ದಾರೆ. ಗ್ರ್ಯಾಂಡ್ ಮಾಸ್ಟರ್ ಆದ ಭಾರತದ ಮೂರನೇ ವನಿತೆ ಎನಿಸಿಕೊಂಡಿದ್ದಾರೆ. ಈ ಅಕ್ಕ-ತಮ್ಮಂದಿರ ಐತಿಹಾಸಿಕ ಸಾಧನೆಯು ಹಲವರಿಗೆ ಸ್ಫೂರ್ತಿ.(@chessvaishali)
(2 / 5)
ವೈಶಾಲಿ ಗ್ರ್ಯಾಂಡ್ ಮಾಸ್ಟರ್ ಆಗುತ್ತಿದ್ದಂತೆಯೇ ಇತಿಹಾಸ ನಿರ್ಮಾಣವಾಗಿದೆ. ಚೆಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಕ್ಕ-ತಮ್ಮಂದಿರು ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. ವೈಶಾಲಿ ಅವರ ತಮ್ಮ ಪ್ರಜ್ಞಾನಂದ ಈ ಮೊದಲು ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಈ ಬಾರಿ ವೈಶಾಲಿ ಆ ಪಟ್ಟಿಗೆ ಸೇರಿಕೊಂಡಿದ್ದಾರೆ. ಇದರ ಫಲವಾಗಿ ರಮೇಶ್ ಬಾಬು ಕುಟುಂಬ ಇತಿಹಾಸ ನಿರ್ಮಿಸಿದೆ.(@chessvaishali)
(3 / 5)
ಸಾಧನೆಗೆ ವಯಸ್ಸಿಲ್ಲ: 2018ರಲ್ಲಿ ತನ್ನ 12ನೇ ವಯಸ್ಸಿನಲ್ಲಿ ಪ್ರಜ್ಞಾನಂದ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಪಡೆದರು. ಇದೀಗ ಅವರ ಸಹೋದರಿ ವೈಶಾಲಿ 22ನೇ ವಯಸ್ಸಿನಲ್ಲಿ ಚೆಸ್ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿ ಗಳಿಸಿದ ಮೂರನೇ ಭಾರತೀಯ ಮಹಿಳೆಯಾದರು. ಈ ಮುದ್ದಾದ ಸಹೋದರರಿಂದ ಈಗಿನ ಮಕ್ಕಳು ಕಲಿಯಬೇಕಿರುವ ಅಂಶಗಳು ಹಲವಾರಿವೆ. ಚಿಕ್ಕ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿರುವ ಮಕ್ಕಳು ಹಿರಿಯರಿಗೂ ಸ್ಪೂರ್ತಿ. ಸಣ್ಣ ವಯಸ್ಸಿನಿಂದಲೇ ಸಮರ್ಪಣಾಭಾವದಿಂದ ಕಲಿಕೆ ಆರಂಭಿಸಿದರೆ ಬ್ರಹ್ಮವಿದ್ಯೆಯೂ ಸರಳ ಎನಿಸುತ್ತದೆ. ಅವರ ಸಾಧನೆಗೆ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಆಟದ ಮೇಲೆ ಅವರಿಗಿರುವ ಪ್ರೀತಿ ಎದ್ದು ಕಾಣುತ್ತದೆ.(@chessvaishali)
(4 / 5)
ಒಬ್ಬರಿಗೊಬ್ಬರು ರೋಲ್ ಮಾಡೆಲ್‌ಗಳು: ಯುವ ಜಗತ್ತಿಗೆ ಪ್ರಜ್ಞಾನಂದ ಮತ್ತು ವೈಶಾಲಿ ರೋಲ್ ಮಾಡೆಲ್‌ಗಳಾಗಿ ಕಾಣುತ್ತಾರೆ. ಆದರೆ, ಇವರ ಪ್ರತಿಭೆಗೆ ಇವರಿಬ್ಬರೂ ಒಬ್ಬರಿಗೊಬ್ಬರು ಆದರ್ಶ ವ್ಯಕ್ತಿಗಳು. ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ಕುಟುಂಬದ ಬೆಂಬಲ ದೊರೆತರೆ ಎಂಥಾ ಸವಾಲುಗಳನ್ನಾದರೂ ಜಯಿಸಬಹುದು ಎಂಬುದಕ್ಕೆ ಈ ಅಕ್ಕ-ತಮ್ಮ ನಿದರ್ಶನ. ಒಬ್ಬರಿಗೊಬ್ಬರು ಪರಸ್ಪರ ನೆರವಾದರೆ, ಸವಾಲುಗಳನ್ನು ಸುಲಭವಾಗಿ ಮೆಟ್ಟಿನಿಲ್ಲಬಹುದು.(@chessvaishali)
(5 / 5)
ಚೆಸ್ ಮತ್ತು ಶಿಕ್ಷಣದ ಸಮತೋಲನ: ಪ್ರಜ್ಞಾನಂದ ಮತ್ತು ವೈಶಾಲಿ ಈಗಲೂ ಶಿಕ್ಷಣ ಮುಂದುವರೆಸುತ್ತಿದ್ದಾರೆ. ಶಿಕ್ಷಣದೊಂದಿಗೆ ತಮ್ಮ ಆಸಕ್ತಿಯ ಚೆಸ್‌ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಇವರಿಬ್ಬರೂ ಈ ಎರಡನ್ನೂ ಸಮತೋಲನದಿಂದ ಕಲಿಯುತ್ತಿರುವುದು ಮೆಚ್ಚಲೇಬೇಕು. ಚೆಸ್ ವೃತ್ತಿಜೀವನದ ಜೊತೆಗೆ ಶೈಕ್ಷಣಿಕವಾಗಿಯೂ ತುಂಬಾ ಮುಂದಿದ್ದಾರೆ. ಇದು ಅವರ ಬದ್ಧತೆಗೆ ಹಿಡಿದ ಕೈಗನ್ನಡಿ. ಒತ್ತಡ ನಿಭಾಯಿಸುವುದು ಹೇಗೆ ಎನ್ನುವುದಕ್ಕೆ ಈ ಇಬ್ಬರು ಸಹೋದರರು ಈಗಿನ ಮಕ್ಕಳಿಗೆ ಮಾದರಿ.( @chessvaishali)
ಇತರ ಗ್ಯಾಲರಿಗಳು