Ranji trophy 2024: ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದವರು ಯಾರು; ಗರಿಷ್ಠ ಶತಕ, ಸಿಕ್ಸರ್ ಸಿಡಿಸಿದ್ಯಾರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ranji Trophy 2024: ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದವರು ಯಾರು; ಗರಿಷ್ಠ ಶತಕ, ಸಿಕ್ಸರ್ ಸಿಡಿಸಿದ್ಯಾರು?

Ranji trophy 2024: ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದವರು ಯಾರು; ಗರಿಷ್ಠ ಶತಕ, ಸಿಕ್ಸರ್ ಸಿಡಿಸಿದ್ಯಾರು?

  • Ranji Trophy 2024: ರಣಜಿ ಟ್ರೋಫಿ 2024ರಲ್ಲಿ ಅತಿ ಹೆಚ್ಚು ರನ್, ಗರಿಷ್ಠ ವಿಕೆಟ್, ಅತ್ಯಧಿಕ ಸಿಕ್ಸರ್, ಅತ್ಯುತ್ತಮ ಬೌಲಿಂಗ್, ಅಧಿಕ ವೈಯಕ್ತಿಕ ಇನ್ನಿಂಗ್ಸ್,  ಹೆಚ್ಚು ಶತಕಗಳು.. ಹೀಗೆ ಎಲ್ಲಾ ಅಂಕಿಅಂಶಗಳ ನೋಟ ಇಲ್ಲಿದೆ.

ಆಂಧ್ರಪ್ರದೇಶದ ರಿಕಿ ಭುಯಿ ರಣಜಿ ಟ್ರೋಫಿ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 8 ಪಂದ್ಯಗಳ 13 ಇನ್ನಿಂಗ್ಸ್​​​ಗಳಲ್ಲಿ 4 ಶತಕ ಮತ್ತು 3 ಅರ್ಧಶತಕ ಸಹಿತ 902 ರನ್ ಗಳಿಸಿದ್ದಾರೆ. 97 ಬೌಂಡರಿ ಮತ್ತು 14 ಸಿಕ್ಸರ್​​ಗಳು ಸಹ ಅವರ ಖಾತೆಯಲ್ಲಿವೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 175 ರನ್. ಕೇರಳದ ಸಚಿನ್ ಬೇಬಿ ಎರಡನೇ ಸ್ಥಾನದಲ್ಲಿದ್ದು, 7 ಪಂದ್ಯಗಳ 12 ಇನ್ನಿಂಗ್ಸ್​ಗಳಲ್ಲಿ 830 ರನ್ ಕಲೆ ಹಾಕಿದ್ದಾರೆ. ಸೌರಾಷ್ಟ್ರದ ಚೇತೇಶ್ವರ ಪೂಜಾರ ಮೂರನೇ ಸ್ಥಾನದಲ್ಲಿದ್ದು, 8 ಪಂದ್ಯಗಳಲ್ಲಿ 13 ಇನ್ನಿಂಗ್ಸ್​​ಗಳಲ್ಲಿ 829 ರನ್ ಗಳಿಸಿದ್ದಾರೆ.
icon

(1 / 6)

ರಣಜಿ ಟ್ರೋಫಿ 2024ರಲ್ಲಿ ತಮಿಳುನಾಡಿನ ಸಾಯಿ ಕಿಶೋರ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಎನಿಸಿದ್ದಾರೆ. 9 ಪಂದ್ಯಗಳ 15 ಇನ್ನಿಂಗ್ಸ್​​ಗಳಲ್ಲಿ 53 ವಿಕೆಟ್ ಪಡೆದಿದ್ದಾರೆ. 3 ಬಾರಿ 5 ವಿಕೆಟ್ ಗೊಂಚಲು, 6 ಬಾರಿ 4 ವಿಕೆಟ್ ಗೊಂಚಲು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ: 99 ರನ್​​ಗಳಿಗೆ 6 ವಿಕೆಟ್. 93 ಮೇಡನ್ ಓವರ್​​​ಗಳನ್ನು ಹಾಕಿದ್ದಾರೆ.
icon

(2 / 6)

ಅಸ್ಸಾಂನ ರಿಯಾನ್ ಪರಾಗ್ ರಣಜಿ ಟ್ರೋಫಿ 2024 ರಲ್ಲಿ ಅತಿ ಹೆಚ್ಚು ಸಿಕ್ಸರ್​​ಗಳನ್ನು ಬಾರಿಸಿದ್ದಾರೆ. 4 ಪಂದ್ಯಗಳ 6 ಇನ್ನಿಂಗ್ಸ್​​ಗಳಲ್ಲಿ 20 ಸಿಕ್ಸರ್ ಬಾರಿಸಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ರಿಯಾನ್ ಹೆಸರಿನಲ್ಲಿದೆ. ರಾಯ್ಪುರದಲ್ಲಿ ಛತ್ತೀಸ್​​ಗಢ ವಿರುದ್ಧ 155 ರನ್ ಗಳಿಸಿದ ಇನ್ನಿಂಗ್ಸ್​​ನಲ್ಲಿ ಅವರು 12 ಸಿಕ್ಸರ್​ ಬಾರಿಸಿದರು.
icon

(3 / 6)

ತಮಿಳುನಾಡಿನ ನಾರಾಯಣ್ ಜಗದೀಶ್ ಈ ವರ್ಷದ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ಇನ್ನಿಂಗ್ಸ್ ಆಡಿದ್ದಾರೆ. ಕೊಯಮತ್ತೂರಿನಲ್ಲಿ ಚಂಡೀಗಢ ವಿರುದ್ಧ 403 ಎಸೆತಗಳಲ್ಲಿ 23 ಬೌಂಡರಿ ಮತ್ತು 5 ಸಿಕ್ಸರ್​​ಗಳ ಸಹಾಯದಿಂದ ಅಜೇಯ 321 ರನ್ ಗಳಿಸಿದರು. ಈ ವರ್ಷ ಎಲೈಟ್ ಗುಂಪಿನಲ್ಲಿ ತ್ರಿಶತಕ ಗಳಿಸಿದ ಏಕೈಕ ಆಟಗಾರ ಜಗದೀಶನ್.
icon

(4 / 6)

ರಣಜಿ ಟ್ರೋಫಿ 2024ರಲ್ಲಿ ಮೂವರು ಆಟಗಾರರು 4 ಶತಕಗಳೊಂದಿಗೆ ಹೆಚ್ಚು ಶತಕಗಳ ಪಟ್ಟಿಯಲ್ಲಿ ಜಂಟಿ ದಾಖಲೆ ಬರೆದಿದ್ದಾರೆ. ಕೇರಳದ ಸಚಿನ್ ಬೇಬಿ 12 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್ ಮಾಡಿ 4 ಶತಕ ಗಳಿಸಿದ್ದರೆ, ಆಂಧ್ರಪ್ರದೇಶದ ರಿಕಿ ಭುಯಿ ಮತ್ತು ಬರೋಡಾದ ಶಾಶ್ವತ್ ರಾವತ್ ತಲಾ 13 ಇನ್ನಿಂಗ್ಸ್​​ಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
icon

(5 / 6)

ಕೇರಳದ ಜಲಜ್ ಸಕ್ಸೇನಾ ಈ ವರ್ಷ ರಣಜಿ ಟ್ರೋಫಿಯ ಇನ್ನಿಂಗ್ಸ್ ಒಂದರಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ತುಂಬಾದಲ್ಲಿ ಬಂಗಾಳ ವಿರುದ್ಧ 21.1 ಓವರ್ ಎಸೆದು 68 ರನ್ ನೀಡಿ 9 ವಿಕೆಟ್ ಪಡೆದರು. ಸೂರತ್​ನಲ್ಲಿ ನಡೆದ ಗೋವಾ ವಿರುದ್ಧದ ಪಂದ್ಯದಲ್ಲಿ ರೈಲ್ವೇಸ್​ನ ಆಕಾಶ್ ಪಾಂಡೆ 26.2 ಓವರ್​ಗಳಲ್ಲಿ 71 ರನ್ ನೀಡಿ 9 ವಿಕೆಟ್ ಪಡೆದರು.
icon

(6 / 6)

ಇತರ ಗ್ಯಾಲರಿಗಳು