RCB Playoff Scenario: ಆರ್ಸಿಬಿ 6ರಲ್ಲಿ 5 ಸೋತರೂ ಪ್ಲೇಆಫ್ ಪ್ರವೇಶಿಸಲು ಇನ್ನೂ ಇದೆ ಅವಕಾಶ; ಹೀಗಿದೆ ಲೆಕ್ಕಾಚಾರ
- RCB Playoff Scenario: 17ನೇ ಆವೃತ್ತಿಯ ಐಪಿಎಲ್ನ 26ನೇ ಪಂದ್ಯದಲ್ಲಿ 6ರಲ್ಲಿ 5 ಪಂದ್ಯ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಪ್ಲೇಆಫ್ ಲೆಕ್ಕಾಚಾರ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
- RCB Playoff Scenario: 17ನೇ ಆವೃತ್ತಿಯ ಐಪಿಎಲ್ನ 26ನೇ ಪಂದ್ಯದಲ್ಲಿ 6ರಲ್ಲಿ 5 ಪಂದ್ಯ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಪ್ಲೇಆಫ್ ಲೆಕ್ಕಾಚಾರ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
(1 / 9)
ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ.
(2 / 9)
ಆರ್ಸಿಬಿ ಪ್ರಸ್ತುತ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 5ರಲ್ಲಿ ಸೋತು ಒಂದರಲ್ಲಿ ಮಾತ್ರ ಜಯಿಸಿದೆ. ಎರಡು ಅಂಕ ಸಂಪಾದಿಸಿರುವ ಆರ್ಸಿಬಿ, 9ನೇ ಸ್ಥಾನದಲ್ಲಿದೆ. ಹಾಗಾಗಿ ಬೆಂಗಳೂರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಕಷ್ಟ ಎಂದು ಹೇಳಲಾಗುತ್ತಿದೆ.(ANI)
(3 / 9)
ಹಾಗಾದರೆ ಆರ್ಸಿಬಿ ಅಗ್ರ 4ರಲ್ಲಿ ಸ್ಥಾನ ಪಡೆಯಲು ಮುಂದೇನು ಮಾಡಬೇಕು? ಪ್ಲೇಆಫ್ಗೆ ಅರ್ಹತೆ ಪಡೆಯಲು ಅವಕಾಶ ಎಷ್ಟಿದೆ? ಇಲ್ಲಿದೆ ನೋಡಿ ವಿವರ.(ANI)
(4 / 9)
ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡುವ ಆರ್ಸಿಬಿ, ಉಳಿದ 8ರಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಲೆಕ್ಕಾಚಾರ ನೋಡಿದರೆ, ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಕನಸು ಇನ್ನು ಜೀವಂತವಾಗಿರುವುದು ವಿಶೇಷ.(PTI)
(5 / 9)
ಫಾಫ್ ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಪ್ರವೇಶಿಸಬೇಕೆಂದರೆ ತನ್ನ ಮುಂದಿನ 8 ಪಂದ್ಯಗಳಲ್ಲಿ 7ರಲ್ಲಿ ಜಯಿಸಲೇಬೇಕು. ಆಗ ಮಾತ್ರ 16 ಅಂಕ ಸಂಪಾದಿಸಿ ಅಗ್ರ 4ರಲ್ಲಿ ಸ್ಥಾನ ಪಡೆಯಲಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಗೆದ್ದಿರುವ ಬೆಂಗಳೂರು, ಉಳಿದ 8ರಲ್ಲಿ 7 ಗೆದ್ದರೆ, 8 ಜಯದೊಂದಿಗೆ 16 ಅಂಕ ಪಡೆಯಲಿದೆ.(ANI)
(6 / 9)
ಒಂದು ವೇಳೆ 8 ಪಂದ್ಯಗಳನ್ನು ಸತತವಾಗಿ ಗೆದ್ದರೆ, ಒಟ್ಟು 18 ಅಂಕಗಳೊಂದಿಗೆ ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಆದರೆ ಒಂದು ಪಂದ್ಯ ಸೋತರೂ 16 ಅಂಕಗಳೊಂದಿಗೆ ಪ್ಲೇ ಆಫ್ಗೆ ಲಗ್ಗೆ ಇಡುವ ಅವಕಾಶ ಇದೆ. ಆದರೆ, ನೆಟ್ ರನ್ ರೇಟ್ ಉತ್ತಮವಾಗಿಟ್ಟುಕೊಳ್ಳಬೇಕು.(PTI)
(7 / 9)
ಉಳಿದ 8ರಲ್ಲಿ ಎರಡು ಪಂದ್ಯ ಸೋತರೆ, ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಆದರೂ ಒಂದು ಅವಕಾಶ ಇರಲಿದೆ. 14 ಅಂಕ ಪಡೆದರೂ ಉಳಿದ ಪಂದ್ಯಗಳ ಫಲಿತಾಂಶ ಆರ್ಸಿಬಿ, ಮೇಲೆ ಪರಿಣಾಮ ಬೀರುತ್ತದೆ. ತಂಡದ ನೆಟ್ ರನ್ರೇಟ್ ಬಹಳ ಮುಖ್ಯ ಪಾತ್ರವಹಿಸುತ್ತದೆ.(PTI)
(8 / 9)
2022 ಮತ್ತು 2023ರಲ್ಲಿ 16 ಅಂಕ ಪಡೆದಿದ್ದ ತಂಡಗಳೇ ಪ್ಲೇ ಆಫ್ ಪ್ರವೇಶಿಸಿದ್ದವು. 2022ರಲ್ಲಿ ಆರ್ಸಿಬಿ ಕೂಡ ಅಷ್ಟೇ ಅಂಕ ಪಡೆದು ನಾಲ್ಕು ತಂಡಗಳಲ್ಲಿ ಅವಕಾಶ ಪಡೆದಿತ್ತು. 2023ರಲ್ಲಿ ಮುಂಬೈ ಕೂಡ 16 ಅಂಕ ಪಡೆದು ಪ್ಲೇ ಆಫ್ ಆಡಿತ್ತು.(AFP)
ಇತರ ಗ್ಯಾಲರಿಗಳು