RE Continental GT 650: ಪವರ್ ಪುಲ್ ಲುಕ್ ನೊಂದಿಗೆ ಮಾರುಕಟ್ಟೆಗೆ ಬಂದ ಆರ್ ಇ ಕಾಂಟಿನೆಂಟಲ್ ಜಿಟಿ 650
- RE Continental GT 650: ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನ ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿ, Neave Motorcycles ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ GT 650 ಅನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿದೆ.
- RE Continental GT 650: ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನ ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿ, Neave Motorcycles ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ GT 650 ಅನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿದೆ.
(1 / 8)
Modified Continental GT 650. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ 650 ಅನ್ನು ನೀವ್ ಮೋಟಾರ್ ಸಂಸ್ಥೆ ಹೊಸ ಟಚ್ ನೀಡಿದೆ. ಕೆಫೆ ರೇಸರ್ ಇದನ್ನು ಆಧುನಿಕ ಆವೃತ್ತಿಯಾಗಿ ವಿನ್ಯಾಸಗೊಳಿಸಿದೆ.
(2 / 8)
Modified Continental GT 650. ಈ ಸೂಪರ್ ಬೈಕ್‌ನಲ್ಲಿ ವಿನ್ಯಾಸದ ಜೊತೆಗೆ ಕೆವೊಂದು ಬದಲಾವಣೆಗಳನ್ನ ಮಾಡಲಾಗಿದೆ. ಬೂದು ಮತ್ತು ಕಪ್ಪು ಬಣ್ಣಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ.
(3 / 8)
Modified Continental GT 650. ಎಲ್ಲಾ ಕಡೆ ಎಲ್‌ಇಡಿ ಲೈಟ್ ಗಳನ್ನ ಅಳವಡಿಸಲಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಕ್ರಿಯಾತ್ಮಕವಾಗಿ ಬದಲಾಯಿಸಲಾಗಿದೆ.
(4 / 8)
Modified Continental GT 650. ಸೀಟ್ ಸ್ಟೈಲ್ ಅನ್ನು ಬದಲಾಯಿಸಲಾಗಿದೆ. ಬೈಕ್ ಸವಾರನಿಗೆ ಅನುಕೂಲವಾಗುವಂತೆ, ನೋಡುವುದಕ್ಕೆ ಚೆನ್ನಾಗಿ ಕಾಣಲು ಆದ್ಯತೆ ನೀಡಲಾಗಿದೆ.
(5 / 8)
Modified Continental GT 650. ಹೆಡ್‌ಲೈಟ್ ಕ್ಲಾಂಪ್‌ಗಳು ಹಾಗೂ ನಂಬರ್ ಪ್ಲೇಟ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಸೈಡ್ ಪ್ಯಾನೆಲ್‌ಗಳು, ಮುಂಭಾಗ ಮತ್ತು ಹಿಂಭಾಗದ ಮಡ್ ಗಾರ್ಡ್, ಪೆಟ್ರೋಲ್ ಟ್ಯಾಂಕ್ ಗೂ ಹೊಸ ಟಚ್ ನೀಡಲಾಗಿದೆ.
(6 / 8)
Modified Continental GT 650. ಹ್ಯಾಂಡಲ್ ಬಾರ್ ಅನ್ನು ಬದಲಾಯಿಸಲಾಗಿದೆ. ಸೈಡ್ ವ್ಯೂ ಮಿರರ್ ಪೊಸಿಷನಿಂಗ್ ಕೂಡ ಡೈನಾಮಿಕ್ ಆಗಿದೆ. ಸವಾರನಿಗೆ ಸರಿಹೊಂದುವಂತೆ ಹ್ಯಾಂಡ್ ಗ್ರಿಪ್‌ಗಳನ್ನು ಜೋಡಿಸಲಾಗಿದೆ.
(7 / 8)
Modified Continental GT 650. ಎಂಜಿನ್‌ಗೆ ಹೀಟ್ ತಡೆದುಕೊಳ್ಳುವ ಬಣ್ಣವನ್ನು ಹಾಕಲಾಗಿದೆ. ಎಕ್ಸಾಸ್ಟ್ ಅನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ.
ಇತರ ಗ್ಯಾಲರಿಗಳು