Relationship: ಅನ್ಯೋನ್ಯತೆಗೆ ಅಡ್ಡಿಯಾಗದಿರಲಿ ನಡವಳಿಕೆ; ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುವ ವರ್ತನೆಗಳಿವು
- ಸಂಭಾಷಣೆಯಲ್ಲಿನ ಗೊಂದಲದಿಂದ ಹಿಡಿದು ಹಿಂದಿನ ಜಗಳವನ್ನು ಕೆದಕುವವರೆಗೆ ಸಂಬಂಧದಲ್ಲಿ ಅನ್ಯೋನ್ಯತೆ ಕೆಡಿಸುವ ಕೆಲವು ವರ್ತನೆಗಳಿವು.
- ಸಂಭಾಷಣೆಯಲ್ಲಿನ ಗೊಂದಲದಿಂದ ಹಿಡಿದು ಹಿಂದಿನ ಜಗಳವನ್ನು ಕೆದಕುವವರೆಗೆ ಸಂಬಂಧದಲ್ಲಿ ಅನ್ಯೋನ್ಯತೆ ಕೆಡಿಸುವ ಕೆಲವು ವರ್ತನೆಗಳಿವು.
(1 / 6)
ಪ್ರೀತಿ, ಪ್ರೇಮ, ಮದುವೆ ಹೀಗೆ ಯಾವುದೇ ಸಂಬಂಧವಾಗಲಿ ದೀರ್ಘಕಾಲ ಮುಂದುವರಿಯಬೇಕು ಎಂದು ಅನ್ಯೋನ್ಯತೆಯ ಭಾವ ಬಹಳ ಮುಖ್ಯ. ಅರ್ಥಪೂರ್ಣ ಸಂಬಂಧ ಸೃಷ್ಟಿಯಾಗಬೇಕು ಎಂದರೆ ಇಬ್ಬರ ನಡುವೆ ಅನ್ಯೋನ್ಯತೆ ಇರಬೇಕು. ಭಾವಾನಾತ್ಮಕ ಅನ್ಯೋನ್ಯತೆಯು ವ್ಯಕ್ತಿಗಳನ್ನು ಒಬ್ಬರನ್ನೊಬ್ಬರು ಆಳವಾಗಿ ತಿಳಿದುಕೊಳ್ಳಲು ನೆರವಾಗುತ್ತದೆ. ಇದರಿಂದ ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದು ನಮ್ಮ ಆಸೆ, ಕನಸು, ಬಯಕೆ, ಭಯ ಹೀಗೆ ಮನದ ಭಾವನೆಗಳನ್ನು ಹಂಚಿಕೊಳ್ಳಲು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ ಎನ್ನುತ್ತಾರೆ ರಿಲೇಷನ್‌ಶಿಪ್ ಕೋಚ್ ಕಸ್ತೂರಿ ಎಂ. ಇವರು ಸಂಬಂಧದಲ್ಲಿ ಅನ್ಯೋನ್ಯತೆಯ ಬಾಂಧವ್ಯವನ್ನು ಕಸಿಯುವ ಕೆಲಸ ವರ್ತನೆಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. (Unsplash)
(2 / 6)
ಸಂಗಾತಿ ನಿಮ್ಮೊಂದಿಗೆ ಮುಖ್ಯವಾದ ವಿಚಾರಗಳನ್ನು ಅಥವಾ ಮಾತುಗಳನ್ನು ಹಂಚಿಕೊಳ್ಳಲು ಬಯಸಿದಾಗ ನೀವು ಅದನ್ನು ಕಡೆಗಣಿಸಿದರೆ ಅಥವಾ ಅವರಿಗೆ ಅದನ್ನು ಹಂಚಿಕೊಳ್ಳಲು ಅವಕಾಶ ನೀಡದೇ ಇದ್ದಾಗ ಸಂಗಾತಿ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಇದರಿಂದ ಅವರ ಮನಸ್ಸು ಕೆಡುವುದಲ್ಲದೆ, ಸಂಬಂಧದಲ್ಲಿ ಹಲವು ಸಮಸ್ಯೆಗಳು ಎದುರಾಗಲು ಕಾರಣವಾಗಬಹುದು.(Unsplash)
(3 / 6)
ಹಿಂದಿನ ನಡೆದ ಜಗಳ ಅಥವಾ ಭಿನ್ನಾಭಿಪ್ರಾಯವನ್ನು ಮತ್ತೆ ಮತ್ತೆ ಕೆಣಕುವುದು, ಅದರ ಆಧಾರದ ಮೇಲೆ ವರ್ತಿಸುವುದು ಇದರಿಂದ ನಿಮ್ಮ ಪ್ರೇಮಿ ಅಥವಾ ಸಂಗಾತಿಗೆ ನಿಮ್ಮ ಮೇಲಿನ ಗೌರವ ಕಡಿಮೆಯಾಗಬಹುದು. ಅಲ್ಲದೆ ಅವರು ನಿಮಗೆ ಬೆಲೆ ಕೊಡುವುದು ಕಡಿಮೆ ಮಾಡಬಹುದು. (Unsplash)
(4 / 6)
ಯಾವುದೇ ಸಂಬಂಧದಲ್ಲಿ ಆಸೆಗಳು, ಬಯಕೆಗಳು ಹಾಗೂ ಅಗತ್ಯಗಳ ಬಗ್ಗೆ ಸಂಗಾತಿಗೆ ನೇರವಾಗಿ ತಿಳಿಸಬೇಕು. ನಮ್ಮ ಆಸೆ, ಬಯಕೆಗಳನ್ನು ಮನದಲ್ಲೇ ಮುಚ್ಚಿಟ್ಟುಕೊಂಡು ಸಂಗಾತಿಯು ನಮ್ಮ ಮನಸ್ಸನ್ನು ಓದುವ ಮೂಲಕ ಅದನ್ನು ಅರಿತು ಪೂರೈಸಬೇಕು ಎಂಬ ನಿರೀಕ್ಷೆ ಹಲವು ಸಂಬಂಧಗಳಲ್ಲಿನ ವಿರಸಕ್ಕೆ ದಾರಿ ಮಾಡಿಕೊಡುತ್ತದೆ. ಇದರಿಂದ ಅನಗತ್ಯ ಜಗಳ ಹಾಗೂ ಮನಸ್ತಾಪ ಕೂಡ ಉಂಟಾಗಬಹುದು. (Unsplash)
(5 / 6)
ಸಂಬಂಧದಲ್ಲಿ ತಿಳುವಳಿಕೆ ಹಾಗೂ ಸಹಾನುಭೂತಿ ದೀರ್ಘಕಾಲದ ಅನ್ಯೋನ್ಯತೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ನಮ್ಮ ಸಂಗಾತಿಯ ಬಗ್ಗೆ ನಮ್ಮಲ್ಲಿ ಸಹಾನುಭೂತಿ ಇರಬೇಕು. ಇದರಿಂದ ಅವರಿಗೆ ನಿಮ್ಮ ಮೇಲೆ ಪ್ರೀತಿ, ಗೌರವ, ಕಾಳಜಿ ಎಲ್ಲವೂ ಹೆಚ್ಚುತ್ತದೆ. (Unsplash)
ಇತರ ಗ್ಯಾಲರಿಗಳು