Relationship: ಹೆಂಡತಿಯ ಮುಂದೆ ಈ ಗುಟ್ಟುಗಳನ್ನು ಎಂದಿಗೂ ಬಿಟ್ಟು ಕೊಡಬೇಡಿ; ಸುಖ ಸಂಸಾರಕ್ಕೆ ಚಾಣಕ್ಯ ಹೇಳಿದ ಕೆಲವು ನೀತಿಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Relationship: ಹೆಂಡತಿಯ ಮುಂದೆ ಈ ಗುಟ್ಟುಗಳನ್ನು ಎಂದಿಗೂ ಬಿಟ್ಟು ಕೊಡಬೇಡಿ; ಸುಖ ಸಂಸಾರಕ್ಕೆ ಚಾಣಕ್ಯ ಹೇಳಿದ ಕೆಲವು ನೀತಿಗಳು ಹೀಗಿವೆ

Relationship: ಹೆಂಡತಿಯ ಮುಂದೆ ಈ ಗುಟ್ಟುಗಳನ್ನು ಎಂದಿಗೂ ಬಿಟ್ಟು ಕೊಡಬೇಡಿ; ಸುಖ ಸಂಸಾರಕ್ಕೆ ಚಾಣಕ್ಯ ಹೇಳಿದ ಕೆಲವು ನೀತಿಗಳು ಹೀಗಿವೆ

  • Chanakya Niti About Relationship: ಆಚಾರ್ಯ ಚಾಣಕ್ಯ ಅವರ ಪ್ರಕಾರ ಗಂಡ-ಹೆಂಡತಿ ಸಂಬಂಧದಲ್ಲಿ ಅನ್ಯೋನ್ಯತೆ, ಶಾಂತಿ, ಒಲವು ಹೆಚ್ಚಲು ಗಂಡನು ಈ ಕೆಲವು ಗುಟ್ಟುಗಳನ್ನು ತನ್ನ ಹೆಂಡತಿ ಎದುರು ಎಂದಿಗೂ ಬಿಚ್ಚಿಡಬಾರದು. ಹಾಗಾದರೆ ಎಂತಹ ಗುಟ್ಟು ಬಿಚ್ಚಿಡಬಾರದು ಎಂಬ ಕುತೂಹಲ ಕಾಡುತ್ತಿದೆಯಾ? ಇಲ್ಲಿದೆ ನೋಡಿ ಉತ್ತರ.

ಚಾಣಕ್ಯ ಒಬ್ಬ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ತತ್ವಜ್ಞಾನಿ. ಅವರು ನೀತಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರವನ್ನು ಉಲ್ಲೇಖಿಸುತ್ತಾರೆ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಸಾಧಿಸುವುದು ಹೇಗೆ ಎಂಬ ಸಿದ್ಧಾಂತವನ್ನೂ ಅವರು ಪ್ರಸ್ತಾಪಿಸಿದರು. ಅವರ ಪ್ರಕಾರ, ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ಗಂಡಂದಿರು ತಮ್ಮ ಹೆಂಡತಿಯರ ಮುಂದೆ ಕೆಲವು ವಿಷಯಗಳನ್ನು ಹೇಳಬಾರದು. ಅಂತಹ ವಿಷಯಗಳು ಯಾವುವು ನೋಡಿ.   
icon

(1 / 6)

ಚಾಣಕ್ಯರ ತತ್ವದ ಪ್ರಕಾರ, ದಾನವನ್ನು ಯಾವಾಗಲೂ ರಹಸ್ಯವಾಗಿ ಮಾಡಬೇಕು. ಒಂದು ಕೈ ಕೊಟ್ಟರೆ ಇನ್ನೊಂದು ಕೈಗೆ ತಿಳಿಯದ ರೀತಿಯಲ್ಲಿ ಕೊಡಿ. ಆಗ ಮಾತ್ರ ದಾನಕ್ಕೆ ಮಹತ್ವ ಬರುತ್ತದೆ. ಹಾಗಾಗಿ ನೀವು ಯಾರಿಗಾದರೂ ಏನನ್ನಾದರೂ ಕೊಟ್ಟರೆ ಅದನ್ನು ನಿಮ್ಮ ಹೆಂಡತಿಗೆ ಹೇಳಬೇಡಿ. ಆದ್ದರಿಂದ, ದಾನದ ಮಹತ್ವವು ಕಡಿಮೆಯಾಗುತ್ತದೆ.
icon

(2 / 6)

ಪ್ರತಿಯೊಬ್ಬ ಮನುಷ್ಯನಿಗೂ ಕೆಲವು ದೌರ್ಬಲ್ಯಗಳಿರುತ್ತವೆ. ಆದರೆ ಆ ದೌರ್ಬಲ್ಯವನ್ನು ಎಲ್ಲರ ಎದುರು ಬಹಿರಂಗಪಡಿಸುವುದು ಜಾಣತನವಲ್ಲ. ನಿಮ್ಮ ದೌರ್ಬಲ್ಯವನ್ನು ನಿಮ್ಮ ಹೆಂಡತಿಯ ಎದುರು ಹೇಳಬೇಡ, ತೋರಿಸಬೇಡಿ. ತನ್ನ ಗಂಡನ ದೌರ್ಬಲ್ಯವನ್ನು ಕಂಡು ಹೆಂಡತಿ ಕನಿಕರಪಡುತ್ತಾಳೆ, ಕೆಲವೊಮ್ಮೆ ಇದು ಸಂಸಾರ ಬಿರುಕಿಗೂ ಕಾರಣವಾಗಬಹುದು. ಇದರಿಂದ ಕುಟುಂಬದ ಸಮತೋಲನ ತಪ್ಪಬಹುದು.
icon

(3 / 6)

ಹೊರಗಡೆ ಎಲ್ಲೋ ನೀವು ಅವಮಾನ ಅನುಭವಿಸಿದ್ದರೆ ಅದನ್ನು ಖಂಡಿತಾ ಹೆಂಡತಿಗೆ ಹೇಳದೇ ಇರುವುದು ಉತ್ತಮ ಎನ್ನುತ್ತಾನೆ ಚಾಣಾಕ್ಯ. ಏಕೆಂದರೆ ನೀವು ನಿಮಗಾದ ಅವಮಾನವನ್ನು ಎಷ್ಟು ಬಾರಿ ಹೇಳುತ್ತೀರೋ, ನೆನಪಿಸಿಕೊಳ್ಳುತ್ತೀರೋ ಅಷ್ಟು ಬಾರಿ ನಿಮ್ಮ ಹೃದಯ ಮರುಗುತ್ತದೆ, ನಿಮ್ಮದು ಮಾತ್ರವಲ್ಲ, ನಿಮ್ಮಷ್ಟೇ ನಿಮ್ಮ ಹೆಂಡತಿಯೂ ಕೂಡ ಮರುಗುತ್ತಾಳೆ. 
icon

(4 / 6)

ಚಾಣಕ್ಯನು ತನ್ನ ಪೂರ್ಣ ಸಂಪಾದನೆಯ ಬಗ್ಗೆ ಗಂಡನು ಹೆಂಡತಿಗೆ ಹೇಳಬಾರದು ಎಂದು ಗಂಡನಿಗೆ ಸಲಹೆ ನೀಡುತ್ತಾನೆ. ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಹೆಂಡತಿಗೆ ಕೊಡು ಎನ್ನುವ ಚಾಣಾಕ್ಯ, ಇಷ್ಟೇ ನನ್ನ ಆದಾಯ ಎಂದು ಹೇಳಬೇಕು, ಉಳಿದ ಹಣವನ್ನು ಹೆಂಡತಿಗೆ ಗೊತ್ತಾಗದಂತೆ ಸಂಗ್ರಹಿಸಿ ಇಡಿ, ಅದು ಕೆಟ್ಟ ಸಮಯದಲ್ಲಿ ಸೂಕ್ತವಾಗಿ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾನೆ. 
icon

(5 / 6)

ಚಾಣಕ್ಯನ ಪ್ರಕಾರ, ಜಗತ್ತಿನಲ್ಲಿ ಗಂಡ ಮತ್ತು ಹೆಂಡತಿ ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿರುತ್ತಾರೆ, ಅವರ ನಡುವೆ ಅನ್ಯೂನ್ಯತೆ ಇರುತ್ತದೆ ನಿಜ, ಅದಾಗ್ಯೂ ಕೆಲವೊಂದು ವಿಷಯಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇಬ್ಬರು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದು ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗಬಹುದು.   
icon

(6 / 6)

ಇತರ ಗ್ಯಾಲರಿಗಳು