ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನದಲ್ಲಿ ಈ ದಾಖಲೆ ಬರೆದ ಭಾರತದ ಏಕೈಕ ವೇಗಿ ಅರ್ಷದೀಪ್ ಸಿಂಗ್
- Arshdeep Singh: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Arshdeep Singh: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 5)
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಸರಣಿ ಮುನ್ನಡೆ ಪಡೆದಿದೆ.
(2 / 5)
ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ನಡೆಸಿ ಸೌತ್ ಆಫ್ರಿಕಾ ಕುಸಿತಕ್ಕೆ ಕಾರಣರಾದರು. 10 ಓವರ್ಗಳಲ್ಲಿ 37 ರನ್ ಬಿಟ್ಟುಕೊಟ್ಟು 5 ವಿಕೆಟ್ ಉರುಳಿಸಿ ದಾಖಲೆ ಬರೆದರು. ಈ ದಾಖಲೆ ಭಾರತದ ಮೊದಲ ವೇಗಿ.
(3 / 5)
ಅರ್ಷದೀಪ್ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ ಭಾರತದ ಏಕೈಕ ವೇಗದ ಬೌಲರ್ ಎಂಬ ದಾಖಲೆಗೂ ಪಾತ್ರರಾದರು.
(4 / 5)
ಈ ಹಿಂದೆ ಸ್ಪಿನ್ನರ್ಗಳು ಮಾತ್ರ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 5 ವಿಕೆಟ್ಗಳ ಗುಚ್ಛ ಪಡೆದಿದ್ದರು. 2009ರಲ್ಲಿ ಸುನಿಲ್ ಜೋಶಿ 6 ರನ್ ನೀಡಿ 5 ವಿಕೆಟ್ ಪಡೆದಿದ್ದರೆ, 2018ರಲ್ಲಿ ಚಹಲ್ 22 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. 2023ರಲ್ಲಿ ರವೀಂದ್ರ ಜಡೇಜಾ 33 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
ಇತರ ಗ್ಯಾಲರಿಗಳು