ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  13 ವರ್ಷದ ಹಿಂದೆ ಪತ್ನಿಗೆ ಹಲ್ಲೆ ನಡೆಸಿ 28 ದಿನ ಜೈಲೂಟ, ಡಿಬಾಸ್‌ ಕೇಸ್‌, ಕಿರಿಕ್‌ ಒಂದಲ್ಲ, ಎರಡಲ್ಲ; ದರ್ಶನ್‌ ವಿವಾದಗಳ ಸಮಗ್ರ ಪಟ್ಟಿ

13 ವರ್ಷದ ಹಿಂದೆ ಪತ್ನಿಗೆ ಹಲ್ಲೆ ನಡೆಸಿ 28 ದಿನ ಜೈಲೂಟ, ಡಿಬಾಸ್‌ ಕೇಸ್‌, ಕಿರಿಕ್‌ ಒಂದಲ್ಲ, ಎರಡಲ್ಲ; ದರ್ಶನ್‌ ವಿವಾದಗಳ ಸಮಗ್ರ ಪಟ್ಟಿ

  • Kannada Actor Darshan controversies: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಲ್ಲಿರುವ ಕನ್ನಡ ನಟ ದರ್ಶನ್‌ ಈಗಾಗಲೇ ಹಲವು ಅಪರಾಧಗಳು, ಕಿರಿಕ್‌ಗಳು, ವಿವಾದಗಳ ಮೂಲಕ ಸುದ್ದಿಯಲ್ಲಿದ್ದವರು. ದರ್ಶನ್‌ ವಿವಾದಗಳ ಸಮಗ್ರ ಪಟ್ಟಿ ಇಲ್ಲಿದೆ.

ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ: ದರ್ಶನ್‌ ಕುಟುಂಬದ ಕಠೋರ ವಾಸ್ತವ ಎಲ್ಲರಿಗೂ ತಿಳಿದ ಸಂದರ್ಭವದು. ಸುಮಾರು 12 ವರ್ಷ 9 ತಿಂಗಳ ಹಿಂದಿನ ಘಟನೆ.   2011ರಲ್ಲಿ ದರ್ಶನ್‌ ತನ್ನ ಪತ್ನಿ ವಿಜಯಲಕ್ಷ್ಮೀಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ನಟ ದರ್ಶನ್‌ ಸುಮಾರು 28 ದಿನಗಳ ಕಾಲ ಜೈಲಲ್ಲಿದ್ದರು. ಬಳಿಕ ರಾಜಿ ಸಂಧಾನವಾಗಿ ಸಮಸ್ಯೆ ಬಗೆಹರಿದಿತ್ತು. ನಟಿ ನಿಖಿತಾ ತುಕ್ರಾಲ್‌ ಹೆಸರು ಆಗ ಈ ಗಲಾಟೆಯ ಹಿಂದಿನ ಕಾರಣವೆಂದು ಹೇಳಲಾಗಿತ್ತು. 
icon

(1 / 13)

ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ: ದರ್ಶನ್‌ ಕುಟುಂಬದ ಕಠೋರ ವಾಸ್ತವ ಎಲ್ಲರಿಗೂ ತಿಳಿದ ಸಂದರ್ಭವದು. ಸುಮಾರು 12 ವರ್ಷ 9 ತಿಂಗಳ ಹಿಂದಿನ ಘಟನೆ.   2011ರಲ್ಲಿ ದರ್ಶನ್‌ ತನ್ನ ಪತ್ನಿ ವಿಜಯಲಕ್ಷ್ಮೀಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ನಟ ದರ್ಶನ್‌ ಸುಮಾರು 28 ದಿನಗಳ ಕಾಲ ಜೈಲಲ್ಲಿದ್ದರು. ಬಳಿಕ ರಾಜಿ ಸಂಧಾನವಾಗಿ ಸಮಸ್ಯೆ ಬಗೆಹರಿದಿತ್ತು. ನಟಿ ನಿಖಿತಾ ತುಕ್ರಾಲ್‌ ಹೆಸರು ಆಗ ಈ ಗಲಾಟೆಯ ಹಿಂದಿನ ಕಾರಣವೆಂದು ಹೇಳಲಾಗಿತ್ತು. (Photos Credit: Social Media/internet)

ಚಿಂಗಾರಿ ಸಿನಿಮಾದ ನಿರ್ಮಾಪಕರಿಗೆ ದರ್ಶನ್‌ ಕಾಲ್‌ ಮಾಡಿ ಕೆಟ್ಟ ಶಬ್ದಗಳಿಂದ ಬಯ್ದ ವಿಷಯವೂ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. 
icon

(2 / 13)

 ಮೈಸೂರಿನ ಹೋಟೆಲ್‌ ಸಿಬ್ಬಂದಿಗೆ ದರ್ಶನ್‌ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇಂದ್ರಜಿತ್‌ ಲಂಕೇಶ್‌ ಈ ಆರೋಪ ಮಾಡಿದ್ದರು. 
icon

(3 / 13)

ನಿರ್ದೇಶಕ ಪ್ರೇಮ್‌ಗೆ "ಪ್ರೇಮ್‌ ಏನು ಪುಂಡುಂಗಾ, ಅವರಿಗೆ ಎರಡು ಕೊಂಬಿದೆಯಾ" ಎಂದು ಹೇಳಿದ್ದರು. ಇನ್ಮುಂದೆ ದರ್ಶನ್‌ ಜತೆ ಸಿನಿಮಾ ಮಾಡೋಲ್ಲ ಎಂದು ಪ್ರೇಮ್‌ ಹೇಳಿದ್ದರು. ಈ ವಿಷಯವೂ ಆಗ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಇತ್ತೀಚೆಗೆ ಪ್ರೇಮ್‌ ದರ್ಶನ್‌ ನಟನೆಯ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ.  
icon

(4 / 13)

ಮಾಧ್ಯಮಗಳು ದರ್ಶನ್‌ ಬಗ್ಗೆ ಬರೆಯುವುದನ್ನೇ ಬಿಟ್ಟಿದ್ದವು. ದರ್ಶನ್‌ ಮಾಧ್ಯಮಗಳ ಜತೆ ಮಾತನಾಡುವಾಗ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದಾದ ಬಳಿಕ ಮಾಧ್ಯಮಗಳು ದರ್ಶನ್‌ಗೆ ನಿರ್ಬಂಧ ಹಾಕಿದ್ದವು. ಇತ್ತೀಚೆಗೆ ದರ್ಶನ್‌ ಮಾಧ್ಯಮದವರ ಕ್ಷಮೆ ಕೇಳಿದ ಬಳಿಕ ಈ ವಿವಾದ ತಣ್ಣಗಾಗಿತ್ತು.
icon

(5 / 13)

ರಾಬರ್ಟ್‌ ಸಿನಿಮಾದ ನಿರ್ಮಾಪಕ ಉಮಾಪತಿ ಜತೆ ವಿವಾದ ಮಾಡಿಕೊಂಡಿದ್ದರು. ಉಮಾಪತಿ 25 ಕೋಟಿ ವಂಚನೆಗೆ ಯತ್ನಿಸಿದ್ದರು ಎಂದು ಹೇಳಲಾಯಿತು. ಇತ್ತೀಚೆಗೆ ಉಮಾಪತಿ ಮತ್ತು ದರ್ಶನ್‌ಗೆ ಕಾಟೇರ ಸಿನಿಮಾದ ಟೈಟಲ್‌ಗೆ ಸಂಬಂಧಪಟ್ಟಂತೆ ಜಗಳವಾಗಿತ್ತು. ಉಮಾಪತಿಗೆ ಸಾರ್ವಜನಿಕವಾಗಿ "ಹೇ ತಗಡೇ" ಎಂದು ಕರೆದಿದ್ದರು ದರ್ಶನ್‌.
icon

(6 / 13)

ಯುಜಮಾನ ಸಿನಿಮಾದ ಶೂಟಿಂಗ್‌ ವೇಳೆ ಜೂನಿಯರ್‌ ಕಲಾವಿದರೊಬ್ಬರಿಗೆ ದರ್ಶನ್‌ ಹಲ್ಲೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು. 
icon

(7 / 13)

ದರ್ಶನ್‌ ಮತ್ತು ಜಗ್ಗೇಶ್‌ ನಡುವೆ ಇತ್ತೀಚೆಗೆ ಫ್ಯಾನ್ಸ್‌ ಕಲಹ ಉಂಟಾಗಿತ್ತು. ಜಗ್ಗೇಶ್‌ ಮಾತನಾಡಿದ ಕ್ಲಿಪ್‌ ಇಟ್ಟುಕೊಂಡು ದರ್ಶನ್‌ ಫ್ಯಾನ್ಸ್‌ ಜಗ್ಗೇಶ್‌ಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. 
icon

(8 / 13)

ಇತ್ತೀಚೆಗೆ ಹುಲಿ ಉಗುರು ಪ್ರಕರಣದಲ್ಲಿ ದರ್ಶನ್‌ ಫಾರ್ಮ್‌ ಹೌಸ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು. 
icon

(9 / 13)

ದರ್ಶನ್‌ ಮನೆಯ ನಾಯಿ ತನ್ನ ಮೇಲೆ ದಾಳಿ ನಡೆಸಿದೆ ಎಂದು ಮಹಿಳೆಯೊಬ್ಬರು ದರ್ಶನ್‌ ಮೇಲೆ ಕೇಸ್‌ ದಾಖಲಿಸಿದ್ದರು.
icon

(10 / 13)

ಕಾಟೇರ ಸಿನಿಮಾದ ಸಕ್ಸಸ್‌ ಪಾರ್ಟಿಯನ್ನು ಜೆಟ್‌ಲ್ಯಾಗ್‌ ಪಬ್‌ನಲ್ಲಿ ಮಾಡಲಾಗಿತ್ತು. ಅವಧಿ ಮೀರಿ ಪಾರ್ಟಿ ಮಾಡಿದ ಕುರಿತು ದರ್ಶನ್‌ ಮತ್ತು ಇತರರ ವಿರುದ್ಧ ದೂರು ದಾಖಲಾಗಿತ್ತು.  
icon

(11 / 13)

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದರ್ಶನ್‌ ಮತ್ತು ಸುದೀಪ್‌ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ, ಇವರಿಬ್ಬರು ದೂರವಾಗಿದ್ದಾರೆ. ಇದರಿಂದ ಈಗಲೂ ದರ್ಶನ್‌, ಕಿಚ್ಚ ಫ್ಯಾನ್ಸ್‌ ನಡುವೆ ತೆರೆಮರೆಯ ವಾರ್‌ ನಡೆಯುತ್ತಲೇ ಇದೆ. 
icon

(12 / 13)

ಇದೀಗ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ವಿಚಾರಣೆ ಎದುರಿಸುತ್ತಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ಗೆ ಈ ಪ್ರಕರಣವು ಏನು ಶಿಕ್ಷೆ ವಿಧಿಸಲಿದೆ? ಈ ಪ್ರಕರಣದ ತನಿಖೆ ಯಾವ ರೀತಿ ನಡೆಯಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. 
icon

(13 / 13)

ಇತರ ಗ್ಯಾಲರಿಗಳು