ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಿಯೋ ಬಿಟ್ಟು ಹೋದ, ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲಾರೆ ಎಂದ ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು

ಲಿಯೋ ಬಿಟ್ಟು ಹೋದ, ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲಾರೆ ಎಂದ ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು

  • ಮೇ 19ರಂದು ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು ಹುಟ್ಟುಹಬ್ಬ. ಆದರೆ, ಈ ಬಾರಿ ಇವರು ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಲಿಯೋ ಬಿಟ್ಟು ಹೋದ ಕಾರಣ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದು, ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್‌ ಬರೆದಿದ್ದಾರೆ.

ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಸಂಭವಿಸಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸ್ಸಿಗೆ ತುಂಬಾ ಆಳವಾದ ನೋವು ಉಂಟು ಮಾಡಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ನಿಶ್ವಿಕಾ ಬರೆದಿದ್ದಾರೆ.
icon

(1 / 10)

(2 / 10)

"ಆದ್ದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ. ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನಾಗಿದ್ದ. ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ದೊಡ್ಡ ಗಾಯ ಮಾಡಿದೆ" ಎಂದು  ಅವರು ಬರೆದಿದ್ದಾರೆ. 
icon

(3 / 10)

"ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಯಾರೂ ಈ ನನ್ನ ಹುಟ್ಟುಹಬ್ಬದಂದು ನನ್ನನ್ನು ಭೇಟಿ ಮಾಡಲು ಬರಬೇಡಿ ಮತ್ತು ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ" ಎಂದು ನಿಶ್ವಿಕಾ ನಾಯ್ಡು ಬರೆದಿದ್ದಾರೆ. 
icon

(4 / 10)

ಸಾಕಷ್ಟು ಜನರು ಲಿಯೋಗೆ ಸಂತಾಪ ಸೂಚಿಸಿದ್ದಾರೆ. ಕೆಲವರು ಲಿಯೋ ಯಾರು ಎಂದು ಪ್ರಶ್ನಿಸಿದ್ದಾರೆ. ಆ ಕಾಮೆಂಟ್‌ಗೆ ಕೆಲವರು "ನಿಶ್ವಿಕಾ ನಾಯ್ಡು ಅವರ ಪ್ರೀತಿಯ ನಾಯಿ" ಎಂದು ಮಾರುತ್ತರ ನೀಡಿದ್ದಾರೆ. ಸಾಕಷ್ಟು ಜನರು ನಟಿಯ ಪ್ರಾಣಿ ಪ್ರೀತಿಗೆ ವಾಹ್‌ ಎಂದಿದ್ದಾರೆ. 
icon

(5 / 10)

ನಟಿ ನಿಶ್ವಿಕಾ ನಾಯ್ಡು ಅವರು "ವಾಸು ನಾನು ಪಕ್ಕಾ ಕಮರ್ಷಿಯಲ್‌" ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಇದಾದ ಬಳಿಕ ಅಮ್ಮಾ ಐ ಲವ್‌ ಯು ಸಿನಿಮಾದಲ್ಲಿ ನಟಿಸಿದರು.
icon

(6 / 10)

ಪಡ್ಡೆ ಹುಲಿ, ಜಂಟಲ್‌ ಮನ್‌, ರಾಮಾರ್ಜುನಾ, ಸಖತ್‌, ಗಾಳಿಪಟ, ಗುರು ಶಿಷ್ಯರು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(7 / 10)

ದಿಲ್‌ ಪಸಂದ್‌, ಗರಡಿ, ಕರಟಕ ಧಮನಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂದನ್‌ ಶೆಟ್ಟಿ ಜತೆ ಪಾರ್ಟಿ ಫ್ರೀಕ್‌ ಎಂಬ ಮ್ಯೂಸಿಕ್‌ ವಿಡಿಯೋದಲ್ಲೂ ನಟಿಸಿದ್ದಾರೆ. 
icon

(8 / 10)

ಅಮ್ಮಾ ಐ ಲವ್‌ ಯು ಸಿನಿಮಾದ ನಟನೆಗಾಗಿ 66ನೇ ಫಿಲ್ಮ್‌ ಫೇರ್‌ ಸೌತ್‌ ಅವಾರ್ಡ್‌ (ಕನ್ನಡದ ಅತ್ಯುತ್ತಮ ನಟಿ) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಇದೇ ಸಿನಿಮಾದ ನಟನೆಗೆ 8ನೇ ಸೈಮಾ ಅವಾರ್ಡ್‌ಗೂ ನಾಮನಿರ್ದೇಶನಗೊಂಡಿದ್ದಾರೆ. ಜಂಟಲ್‌ಮೆನ್‌ ಸಿನಿಮಾದ ನಟನೆಗೆ 10ನೇ ಸೌತ್‌ ಇಂಡಿಯನ್‌ ಇಂಟರ್‌ನ್ಯಾಷಲ್‌ ಮೂವಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದ್ದರು.
icon

(9 / 10)

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ
icon

(10 / 10)

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು